ಹೆವಿ ಅಥವಾ ಭಾರದ ಕಾಲ್ಗೆಜ್ಜೆ ಹೆಚ್ಚು ಜನಪ್ರಿಯ
ಇತ್ತೀಚಿನ ದಿನಗಳಲ್ಲಿ ಹೆವಿ ಅಥವಾ ಭಾರದ ಕಾಲ್ಗೆಜ್ಜೆ ಹೆಚ್ಚು ಜನಪ್ರಿಯವಾಗುತ್ತಿದೆ. ಇವುಗಳನ್ನು ಯುವತಿಯರಿಂದ ಹಿಡಿದು ಮಹಿಳೆಯರವರೆಗೆ ಎಲ್ಲರೂ ಧರಿಸಬಹುದು. ಅಂದಹಾಗೆ ಯುವತಿಯರು ಈ ಕಾಲ್ಗೆಜ್ಜೆ ಅಥವಾ ಕಡ್ಗವನ್ನು ಒಂದು ಕಾಲಿಗೆ ಧರಿಸುವುದು ಸಹ ಈಗೀಗ ಫ್ಯಾಷನ್ ಆಗಿದೆ. ಇದು ಕೂಡ ನಿಮ್ಮ ಪಾದಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಹಾಗಾಗಿ ಇಂದು ನಾವು ಪಾದಗಳ ಸೌಂದರ್ಯ ಇಮ್ಮಡಿಗೊಳಿಸುವ ವಿವಿಧ ದೇಶದ ಕೆಲವು ಕಾಲ್ಗೆಜ್ಜೆ ಡಿಸೈನ್ ನಿಮ್ಮ ಮುಂದೆ ತಂದಿದ್ದೇವೆ, ನಿಮಗಿಷ್ಟವಾದರೆ ನೀವು ಕೂಡ ಈ ಡಿಸೈನ್ ಮಾಡಿಸಿಕೊಳ್ಳಬಹುದು.
ಅಂಚಿನಲ್ಲಿ ನವಿಲಿನ ಆಕೃತಿಯ ಡಿಸೈನ್ ಹೊಂದಿರುವ ಈ ಕಾಲ್ಗೆಜ್ಜೆ ಮಾಡರ್ನ್ ವೇರ್‌ಗೆ ಸಖತ್ ಸೂಟಬಲ್. ಆದರೆ ಸಾಂಪ್ರದಾಯಿಕ ದಿರಿಸು ಧರಿಸಿದಾಗಲೂ ನೀವಿದನ್ನು ಹಾಕಬಹುದು.