ಗುಜರಾತ್‌ನ ಜಾಮ್ನಾನಗರದಲ್ಲಿ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಸಂಭ್ರಮಾಚರಣೆಗಳು ನಡೆಯುತ್ತಿವೆ. ಅಂಬಾನಿ ಕುಟುಂಬದ ಸದಸ್ಯರು ಅದ್ಧೂರಿ ದಿರಿಸಿನಲ್ಲಿ ಮಿಂಚುತ್ತಿದ್ದಾರೆ. ಬ್ರೈಡ್, ರಾಧಿಕಾ ಮರ್ಚೆಂಟ್ ಸಹ ಕಾಕ್‌ಟೈಲ್ ನೈಟ್‌ಗಾಗಿ ಗ್ರ್ಯಾಂಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.
ರಾಧಿಕಾ ಮರ್ಚೆಂಟ್, 2022ರ ಮೆಟ್ ಗಾಲಾದಲ್ಲಿ ನಟಿ ಬ್ಲೇಕ್ ಲೈವ್ಲಿ ಧರಿಸಿದ್ದ ಉಡುಪನ್ನು ತಮ್ಮ ಮದುವೆ ಕಾರ್ಯಕ್ರಮದಲ್ಲಿ ಆರಿಸಿಕೊಂಡರು. ಪಿಂಕ್ ಆಫ್ ಶೋಲ್ಡರ್ ಗೌನ್‌ನಲ್ಲಿ ರಾಧಿಕಾ ಅದ್ಭುತವಾಗಿ ಕಾಣುತ್ತಿದ್ದರು. ಇದಕ್ಕೆ ವೈಟ್ ಡೈಮಂಡ್ ಸೆಟ್‌ನ್ನು ಧರಿಸಿದ್ದರು.
ಮದುವೆಗೆ ರಾಧಿಕಾ ಮರ್ಚೆಂಟ್ ಉಡುಗೆ ಸಂಪೂರ್ಣ ಹೊಸದಾಗಿರುತ್ತದೆ ಎಂದೇ ಎಲ್ಲರೂ ನಿರೀಕ್ಷೆಯಿಟ್ಟುಕೊಂಡಿದ್ದರು. ಆದರೆ ರಾಧಿಕಾ, ಈ ಹಿಂದೆ ಹಾಲಿವುಡ್ ನಟಿ ಧರಿಸಿದ್ದ ಡ್ರೆಸ್ ವಿನ್ಯಾಸವನ್ನೇ ಆರಿಸಿಕೊಂಡರು. ರಾಧಿಕಾ ಧರಿಸಿರುವ ಡ್ರೆಸ್ ಒರಿಜಿನಲ್ ಆಗಿರದೆ ರಿಕ್ರಿಯೇಟ್ ಆಗಿದೆ.
ಇನ್‌ಸ್ಟಾಗ್ರಾಮ್ ಬಳಕೆದಾರ ಡಯಟ್ ಸಬ್ಯಾ ಈವೆಂಟ್‌ನಲ್ಲಿ ರಾಧಿಕಾ ಮರ್ಚೆಂಟ್‌ನ ಲುಕ್ ಫೋಟೋಗಳನ್ನು ತಮ್ಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ರಾಧಿಕಾ, ಕೈಗಾರಿಕೋದ್ಯಮಿ ವೀರೇನ್ ಮರ್ಚೆಂಟ್ ಅವರ ಪುತ್ರಿ. ತಮ್ಮ ಸ್ಟೈಲಿಶ್ ಲುಕ್‌ಗಳಿಗಾಗಿಯೇ ಹೆಸರುವಾಸಿಯಾಗಿದ್ದಾರೆ. ಎಲ್ಲಾ ಸಮಾರಂಭಗಳಲ್ಲಿ ಅವರು ಸ್ಟೈಲಿಶ್ ಲುಕ್‌ನಲ್ಲಿ ಕಾಣಿಸಿಕೊಳ್ಳುತ್ತಾರೆ.
NMACC ಗಾಲಾ ಈವೆಂಟ್‌ನ 3ನೇ ದಿನದಂದು, ರಾಧಿಕಾ ಮರ್ಚೆಂಟ್ ಸುಂದರವಾದ ನೀಲಿ ಬಣ್ಣದ ಕಟ್-ಔಟ್ ಡ್ರೆಸ್ ಮತ್ತು ಹೃದಯದ ಆಕಾರದ ವಜ್ರದ ಕಿವಿಯೋಲೆಗಳು ಮತ್ತು ವಜ್ರದ ನೆಕ್ಲೇಸ್‌ನ್ನು ಆಯ್ಕೆ ಮಾಡಿಕೊಂಡಿದ್ದರು. ಇದರ ಬೆಲೆ ಬರೋಬ್ಬರಿ 4.15 ಕೋಟಿ ರೂ. ಆಗಿದೆ.
ರಾಧಿಕಾ, ಅನಂತ್ ಅಂಬಾನಿಯವರ ವಿವಾಹ ಪೂರ್ವ ಆಚರಣೆಗಳು ಅದ್ಧೂರಿಯಾಗಿ ನಡೆಯುತ್ತಿವೆ. ಸಮಾರಂಭದಲ್ಲಿ ಅತಿಥಿಗಳು ಭಾರತೀಯ ಸಂಸ್ಕೃತಿಯ ಸೊಬಗನ್ನು ಕಣ್ತುಂಬಿಕೊಳ್ಳಲಿದ್ದಾರೆ.
ಗುಜರಾತ್‌ನ ಕಚ್ಛ್ ಮತ್ತು ಲಾಲ್‌ಪುರದ ಮಹಿಳಾ ಕುಶಲಕರ್ಮಿಗಳು ತಯಾರಿಸಿದ ಸಾಂಪ್ರದಾಯಿಕ ಸ್ಕಾರ್ಫ್‌ಗಳನ್ನು ಉಡುಗೊರೆಯಾಗಿ ಸ್ವೀಕರಿಸಲಿದ್ದಾರೆ.
ವೀರೇನ್ ಮತ್ತು ಶೈಲಾ ಮರ್ಚೆಂಟ್ ಅವರ ಪುತ್ರಿ ರಾಧಿಕಾ, ಎನ್‌ಕೋರ್ ಹೆಲ್ತ್‌ಕೇರ್ (ಇಎಚ್‌ಪಿಎಲ್) ನಿರ್ದೇಶಕರ ಮಂಡಳಿಯ ಸದಸ್ಯರಾಗಿದ್ದಾರೆ.
ಆಕೆಯ ಪೋಷಕರು ಕಂಪನಿಯ ವ್ಯವಸ್ಥಾಪಕ ನಿರ್ದೇಶಕರು ಮತ್ತು CEO ಆಗಿದ್ದಾರೆ. ರಾಧಿಕಾ, ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ರಾಜಕೀಯ ಮತ್ತು ಅರ್ಥಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.