ಮನೀಶ್ ಮಲ್ಹೋತ್ರಾ ಟಿಶ್ಯೂ ಸೀರೆಯಲ್ಲೆ ಆಲಿಯಾ ಭಟ್ ಗ್ಲಾಮರ್: ಮದುವೆ ಸೀಸನ್‌ನ ಹೊಸ ಟ್ರೆಂಡ್!

Published : Dec 07, 2025, 10:35 PM IST

ಸೀರೆಯ ವಿನ್ಯಾಸ, ಆಲಿಯಾ ಭಟ್ ಎಂಬ ಸುಂದರಿಯ ಮೈಬಣ್ಣ ಎಲ್ಲ ಸೇರಿ, ‘ಚೆಂದಕಿಂತ ಚೆಂದ ನೀನೆ ಸುಂದರ’ ಎಂದು ಹಾಡು ಹೇಳೋ ರೇಂಜ್‌ಗೆ ಮನಮೋಹಕವಾಗಿತ್ತು. ಈ ಟಿಶ್ಯೂ ಸಾರಿ ಲೇಟೆಸ್ಟಾಗಿ ಎಂಟ್ರಿ ಕೊಟ್ಟಿರೋದೇನಲ್ಲ.

PREV
15
ಟಿಶ್ಯೂ ಸೀರೆ ಉಟ್ಟು ಟ್ರೆಂಡ್‌

ಮೊನ್ನೆ ತಾನೇ ತನ್ನ ಅರಮನೆಯಂಥಾ ಮನೆಯ ಗೃಹಪ್ರವೇಶ ಮಾಡಿಸಿದ ಆಲಿಯಾ ಭಟ್‌ ಆ ವೇಳೆ ಟಿಶ್ಯೂ ಸೀರೆ ಉಟ್ಟು ಟ್ರೆಂಡ್‌ ಸೃಷ್ಟಿ ಮಾಡಿದ್ದಾರೆ. ಮನೀಶ್‌ ಮಲ್ಹೋತ್ರ ಎಂಬ ಬಾಲಿವುಡ್‌ನ ಬಹು ಫೇಮಸ್‌ ಡಿಸೈನರ್‌ ವಿನ್ಯಾಸ ಮಾಡಿರೋ ಪಾಸ್ತಲ್‌ ಪೀಚ್‌ ಬಣ್ಣದ ಸಿಲ್ಕ್‌ ಟಿಶ್ಯೂ ಸೀರೆಯದು.

25
ಚೆಂದಕಿಂತ ಚೆಂದ ನೀನೆ ಸುಂದರ

ಸೀರೆಯ ವಿನ್ಯಾಸ, ಆಲಿಯಾ ಎಂಬ ಸುಂದರಿಯ ಮೈಬಣ್ಣ ಎಲ್ಲ ಸೇರಿ, ‘ಚೆಂದಕಿಂತ ಚೆಂದ ನೀನೆ ಸುಂದರ’ ಎಂದು ಹಾಡು ಹೇಳೋ ರೇಂಜ್‌ಗೆ ಮನಮೋಹಕವಾಗಿತ್ತು. ಈ ಟಿಶ್ಯೂ ಸಾರಿ ಲೇಟೆಸ್ಟಾಗಿ ಎಂಟ್ರಿ ಕೊಟ್ಟಿರೋದೇನಲ್ಲ.

35
ನೋಡೋಕೆ ಎರಡು ಕಣ್ಣು ಸಾಲದು

ಪ್ರತೀ ವರ್ಷವೂ ಹಬ್ಬದ ಮಾಸದಲ್ಲೋ, ಮದುವೆಯ ಸೀಸನ್‌ನಲ್ಲೋ ಟಿಶ್ಯೂ ಸೀರೆಯ ಟ್ರೆಂಡ್‌ ಮುನ್ನೆಲೆಗೆ ಬರುತ್ತಲೇ ಇರುತ್ತದೆ. ಮಾಮೂಲಿ ಸೀರೆಗಿಂತ ಹಗೂರವಾಗಿ ಹೂವಿನಂತೆ ಮೈ ಹಿಡಿದು ನಿಲ್ಲುವ ಈ ಸೀರೆಗಳಲ್ಲಿ ಹೂವಿನ ಡಿಸೈನ್‌ ಇದ್ದರಂತೂ ನೋಡೋಕೆ ಎರಡು ಕಣ್ಣು ಸಾಲದು.

45
ಸೆಲೆಬ್ರಿಟಿಗಳ ಫೇವರಿಟ್

ಮತ್ತೆ ನೋಡಿದರೆ ನಮ್ಮ ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಈ ಸ್ಟೈಲ್‌ ಸೀರೆಯಲ್ಲಿ ಆಪ್ತರ ಮದುವೆಯಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರದ್ಧಾ ಕಪೂರ್‌, ಶಿಲ್ಪಾ ಶೆಟ್ಟಿ, ಭೂಮಿ ಪೆಡ್ನೇಕರ್‌ ಆದಿಯಾಗಿ ಚೆಲುವೆಯರೆಲ್ಲ ಟಿಶ್ಯೂ ಸೀರೆಯನ್ನು ಉಟ್ಟುಕೊಂಡು ಕ್ಯಾಟ್‌ವಾಕ್‌ ಮಾಡಿದ್ದಾರೆ.

55
ಮದುವೆ ಫ್ಯಾಷನ್‌ಗೆ ಹೊಸ ಟ್ರೆಂಡ್

ಸುಮ್ಮನೆ ನೋಡಿದ್ರೆ ಸಿಂಪಲ್ಲಾಗಿ, ಚೆಲುವೆ ಉಟ್ಟುಕೊಂಡರೆ ಸೂಪರ್‌ ಆಗಿ ಕಾಣೋ ಈ ಸೀರೆಗೆ ಅದ್ದೂರಿ ಎಂಬ್ರಾಯಿಡರಿ ಇರುವ ಬ್ಲೌಸ್‌ ತೊಟ್ಟು ಭರ್ಜರಿ ಜ್ಯುವೆಲ್ಲರಿ ಏರಿಸಿಕೊಂಡರೆ ಈಗಿನ ಮದುವೆ ಸೀಸನ್‌ಗೆ ಹೇಳಿ ಮಾಡಿಸಿದ ಹಾಗಿರುತ್ತದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Photos on
click me!

Recommended Stories