ಯೆಲ್ಲೋ ಗೌನ್ ತೊಟ್ಟು ಬೇಬಿ ಬಂಪ್ ತೋರಿಸಿದ 'ಹೆಬ್ಬುಲಿ' ನಟಿ ಅಮಲಾ ಪೌಲ್‌

First Published May 25, 2024, 10:01 AM IST

ಮಲಯಾಳಂ ನಟಿ ಮತ್ತು ಸ್ಟಾರ್ ಹೀರೋಯಿನ್ ಅಮಲಾ ಪಾಲ್ ಯೆಲ್ಲೋ ಗೌನ್‌ನಲ್ಲಿ ತಮ್ಮ ಬೇಬಿ ಬಂಪ್ ತೋರಿಸಿದ್ದಾರೆ. ಸುಂದರವಾದ ಗೌನ್‌ನಲ್ಲಿ ಮುದ್ದಾಗಿ ನಗು ಬೀರಿದ್ದಾರೆ.

ಮಲಯಾಳಂ ನಟಿ ಮತ್ತು ಸ್ಟಾರ್ ಹೀರೋಯಿನ್ ಅಮಲಾ ಪಾಲ್ ಯೆಲ್ಲೋ ಗೌನ್‌ನಲ್ಲಿ ತಮ್ಮ ಬೇಬಿ ಬಂಪ್ ತೋರಿಸಿದ್ದಾರೆ. ಸುಂದರವಾದ ಗೌನ್‌ನಲ್ಲಿ ಮುದ್ದಾಗಿ ನಗು ಬೀರಿದ್ದಾರೆ.

ಅಮಲಾ ಪೌಲ್ ಇನ್‌ಸ್ಟಾಗ್ರಾಂನಲ್ಲಿ ಯೆಲ್ಲೋ ಗೌನ್ ಹಾಕಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ನೆಟ್ಟಿಗರು ಇದಕ್ಕೆ ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ.

ಯೆಲ್ಲೋ ಬ್ಯೂಟಿ, ಪ್ರೆಟ್ಟೀನೆಸ್‌, ಸೂಪರ್ ಪ್ರೆಟ್ಟೀ ಮಾಮ್‌ ಟು ಬಿ, ವೈಟಿಂಗ್ ಫಾರ್ ದಿ ಲಿಟಲ್ ಒನ್ ಎಂದೆಲ್ಲಾ ಹೇಳಿದ್ದಾರೆ.

ಕಳೆದ ವರ್ಷ ಎರಡನೇ ಮದುವೆಯಾಗಿರುವುದಾಗಿ ಅಮಲಾಪಾಲ್ ಘೋಷಿಸಿದ್ದು ಗೊತ್ತೇ ಇದೆ. ತನ್ನ ಬಹುಕಾಲದ ಗೆಳೆಯ ಜಗತ್ ದೇಸಾಯಿ ಅವರನ್ನು ನವೆಂಬರ್ 5ರಂದು ವಿವಾಹವಾದರು.

ತಿಂಗಳುಗಳ ಹಿಂದೆ ಆಕೆ ತಾನು ಗರ್ಭಿಣಿಯಾಗಿರುವುದನ್ನು ಘೋಷಿಸಿದರು. ಆ ನಂತರ ಹಲವು ಬಾರಿ ತಮ್ಮ ಪ್ರೆಗ್ನೆನ್ಸಿಯ ಬೇಬಿ ಬಂಪ್ ನಲ್ಲಿ ಫೋಟೋಶೂಟ್ ಮಾಡುತ್ತಿದ್ದಾರೆ. ಇತ್ತೀಚೆಗೆ ಕೆಲವು ಫೋಟೋಗಳನ್ನು ಹಂಚಿಕೊಂಡಿದ್ದಾರೆ

ರೆಡ್ ಡ್ರೆಸ್ ನಲ್ಲಿ ಪತಿಯೊಂದಿಗೆ ಬೀಚ್ ನಲ್ಲಿ ರೊಮ್ಯಾಂಟಿಕ್ ಫೋಟೋಶೂಟ್ ಮಾಡಿದ್ದು, ಎಲ್ಲರ ಗಮನ ಸೆಳೆದಿತ್ತು. ಆ ನಂತರ ವೈಟ್ ಡ್ರೆಸ್‌ನಲ್ಲಿಯೂ ಫೋಟೋಶೂಟ್ ಮಾಡಿಕೊಂಡಿದ್ದರು.

ಅಮಲಾ ಪತಿ ಜಗತ್ ದೇಸಾಯಿ ಉದ್ಯಮಿಯಾಗಿದ್ದು, ಗೋವಾದ ಲಕ್ಸುರಿ ವಿಲ್ಲಾದಲ್ಲಿ ಮ್ಯಾನೇಜರ್‌ ಆಗಿದ್ದಾರೆ. ಗೋವಾದ ರೆಸಾರ್ಟೊಂದರಲ್ಲಿ ನಡೆದ ಈ ಬರ್ತ್‌ಡೇ ಸೆಲೆಬ್ರೇಷನ್‌ನಲ್ಲಿ ಅಮಲಾ ಪೌಲ್‌ಗೆ ಮಂಡಿಯೂರಿ ತಮ್ಮ ಪ್ರೀತಿ ವ್ಯಕ್ತಪಡಿಸಿದ್ದರು ಜಗತ್ ದೇಸಾಯಿ.

ಇದಕ್ಕೂ ಮೊದಲು ಅಮಲಾ ಪೌಲ್, ನಿರ್ದೇಶಕ ಎ ಎಲ್ ವಿಜಯ್ ಅವರನ್ನು ವಿವಾಹವಾಗಿದ್ದರು. ಆದರೆ ಮೂರು ವರ್ಷಗಳ ದಾಂಪತ್ಯದ ನಂತರ ಅವರಿಬ್ಬರು ದೂರವಾಗಿದ್ದರು. 
 

ಅಮಲಾಪೌಲ್ ತಮಿಳು, ಮಲೆಯಾಳಂ ತೆಲುಗು ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದು, ಕೊನೆಯದಾಗಿ ಭೊಲಾ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. 

Latest Videos

click me!