'ಮಿಸ್ ಇಂಡಿಯಾ ವರ್ಲ್ಡ್' ಕಿರೀಟ ಮುಡಿಗೇರಿಸಿಕೊಂಡ ಕನ್ನಡತಿ ಸಿನಿ ಶೆಟ್ಟಿಯ ಸುಂದರ ಫೋಟೋಗಳು

First Published | Jul 4, 2022, 12:07 PM IST

ಕರ್ನಾಟಕ ಮೂಲದ ಯುವತಿ ಸಿನಿ ಶೆಟ್ಟಿ‘ಮಿಸ್‌ ಇಂಡಿಯಾ ವರ್ಲ್ಡ್-2022’ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಮುಂಬೈನಲ್ಲಿ ನಡೆದ ಸ್ಪರ್ಧೆಯಲ್ಲಿ ಸಿನಿ ಶೆಟ್ಟಿ ವಿಜೇತರಾಗಿದ್ದು, ರಾಜಸ್ಥಾನದ ರುಬಲ್‌ ಶೆಖಾವತ್‌ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್‌ 1ನೇ ಹಾಗೂ 2ನೇ ರನ್ನರ್‌ ಅಪ್‌ ಆದರು.
 
ಮಾಡೆಲ್ ಆಗಿ ಗುರುತಿಸಿಕೊಂಡಿದ್ದ ಸಿನಿ ಶೆಟ್ಟಿ ಮುಂಬೈನಲ್ಲಿ ಜನಿಸಿದವರು. 21 ವರ್ಷದ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 

Tap to resize

ಸದ್ಯ ಸಿನಿ ಶೆಟ್ಟಿ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ಚಾರ್ಟರ್ಡ್ ಫೈನಾನ್ಷಿಯಲ್ ಅನಾಲಿಸ್ಟ್ (CFA). ಮಾಡೆಲಿಂಗ್ ಜೊತೆಗೆ ಸಿನಿ ಶೆಟ್ಟಿ ಭರತನಾಟ್ಯ ನೃತ್ಯಗಾರ್ತಿಯೂ ಹೌದು.

ಸಿನಿ ಶೆಟ್ಟಿ ಮುಂದೆ ಸಿನಿ ಶೆಟ್ಟಿ ಮಿಸ್‌ ವಲ್ಡ್‌ರ್‍ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ ಸ್ಪರ್ಧೆಯ ಸುಂದರ ಸಮಾರಂಭದಲ್ಲಿ ಮಲೈಕಾ ಅರೋರಾ, ನೆಹಾ ದುಪಿಯಾ, ದಿನೋ ಮೊರಿಯಾ ಸೇರಿದಂತೆ ಅನೇಕರು ಭಾಗಿಯಾಗಿದ್ದರು. 

ದಕ್ಷಿಣ ಕನ್ನಡ ಮೂಲದ ಸಿನಿ ಶೆಟ್ಟಿ ಹುಟ್ಟಿ ಬೆಳೆದಿದ್ದು ಮುಂಬೈನಲ್ಲಿ. ಮಾಡೆಲಿಂಗ್ ಜೊತೆಗೆ ನೃತ್ಯ ಎಂದರೆ ಸಿನಿಗೆ ಬಹಳ ಅಚ್ಚುಮೆಚ್ಚು.

ಸಿನಿ ಶೆಟ್ಟಿ ನಾಲ್ಕನೇ ವಯಸ್ಸಿನಲ್ಲೇ ನೃತ್ಯ ಮಾಡಲು ಪ್ರಾರಂಭಿಸಿದ್ದು, ಹದಿನಾಲ್ಕು ವರ್ಷದವರಿದ್ದಾಗ ತನ್ನ ಅರಂಗೇತ್ರಂ ಮತ್ತು ಭರತನಾಟ್ಯವನ್ನು ಪೂರ್ಣಗೊಳಿಸಿದರು. 

sini shetty

ಸದ್ಯ ಮಿಸ್ ಇಂಡಿಯಾ ಆಗಿ ಹೊರಹೊಮ್ಮಿರುವ ಸಿನಿ ಶೆಟ್ಟಿಗೆ ಅಭಿನಂದನೆಗಳ ಮಹಾಪೂರವೆ ಹರಿದುಬರುತ್ತಿದೆ. ಸಿನಿ ಶೆಟ್ಟಿಯ ಸಾಧನೆಗೆ ಕರ್ನಾಟಕದವರು ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ.  

Latest Videos

click me!