ಅವರು ಬೇರೆ ಯಾರೂ ಅಲ್ಲ 'ದಮ್ ಮಾರೋ ದಮ್' ಹುಡುಗಿ ಜೀನತ್ ಅಮನ್. ದಮ್ ಮಾರೋ ದಮ್ ಹಾಡು ಈಗ ಕೇಳಿದ್ರೂ ನೆನಪಾಗೋದು ಜೀನತ್ ಅಮಾನ್ ಲುಕ್. ಸಿನಿಮಾ ರಂಗದಲ್ಲಿ ಇದೊಂದು ಹಾಡಿನ ಮೂಲಕವೇ ಸಂಚಲನ ಮೂಡಿಸಿದ್ದಾಕೆ. ಆದರೆ ಅವರ ವೈಯಕ್ತಿಕ ಜೀವನವು ಏರಿಳಿತಗಳಿಂದ ತುಂಬಿತ್ತು. ವಿಶೇಷವಾಗಿ ಮಜರ್ ಖಾನ್ ಅವರೊಂದಿಗಿನ ವಿವಾಹದ ನಂತರ, ಅವರ ಜೀವನವು ಸಮಸ್ಯೆಗಳಿಂದ ತುಂಬಿತ್ತು. ಈ ವಿವಾಹವು ಅವರ ಜೀವನದ ದೊಡ್ಡ ತಪ್ಪು ಎಂದೇ ಸ್ವತಃ ನಟಿ ಹೇಳಿದ್ದರು.