ಗೆಳತಿ ತ್ರಿಷಾಗೆ DCM ಸ್ಥಾನ ನೀಡ್ತಾರಾ ವಿಜಯ್? ತ.ನಾಡು ರಾಜಕೀಯದಲ್ಲಿ ಹೊಸ ಲೆಕ್ಕಾಚಾರ

Published : May 05, 2026, 01:37 PM IST

ದಳಪತಿ ವಿಜಯ್ ಅವರ ಟಿವಿಕೆ ಪಕ್ಷ ಡಿಎಂಕೆ, ಎಐಎಡಿಎಂಕೆಯಂತಹ ದೈತ್ಯ ಪಕ್ಷಗಳನ್ನು ಹಿಂದಿಕ್ಕಿ ಭರ್ಜರಿ ಜಯ ಸಾಧಿಸಿದೆ. ವಿಜಯ್ ಮುಖ್ಯಮಂತ್ರಿಯಾಗುವುದು ಬಹುತೇಕ ಖಚಿತವಾಗಿದ್ದು, ಅವರು ತೆರವುಗೊಳಿಸಲಿರುವ ಕ್ಷೇತ್ರದಿಂದ ನಟಿ ತ್ರಿಷಾ ಸ್ಪರ್ಧಿಸಿ, ಡಿಸಿಎಂ ಆಗಬಹುದು ಎಂಬ ಚರ್ಚೆ ರಾಜಕೀಯ ವಲಯದಲ್ಲಿ ಜೋರಾಗಿವೆ.

PREV
15
ರಾಜಕೀಯಕ್ಕೆ ತ್ರಿಷಾ?

ತಮಿಳುನಾಡು ವಿಧಾನಸಬಾ ಚುನಾವಣೆಯಲ್ಲಿ ಟಿವಿಕೆ ಪಕ್ಷ ತೋರಿದ ಪ್ರದರ್ಶನ ರಾಜಕೀಯ ವಿಶ್ಲೇಷಕರನ್ನೂ ಅಚ್ಚರಿಗೊಳಿಸಿದೆ. ದಶಕಗಳಿಂದ ತಮಿಳುನಾಡಿನಲ್ಲಿ ಬೇರೂರಿದ್ದ ಡಿಎಂಕೆ, ಎಐಎಡಿಎಂಕೆ ಪಕ್ಷಗಳನ್ನು ಹಿಂದಿಕ್ಕಿ ಟಿವಿಕೆ ಹಿಂದಿಕ್ಕಿದೆ. ಈ ಮೂಲಕ ತಮಿಳುನಾಡಿನ ಮತದಾರರು ಬದಲಾವಣೆ ಬಯಸಿರೋದು ಕಂಡು ಬಂದಿದೆ. ಈ ಎಲ್ಲಾ ಬೆಳವಣಿಗೆ ನಡುವೆ ತಮಿಳುನಾಡು ರಾಜಕೀಯದಲ್ಲಿ ತ್ರಿಷಾ ಪ್ರಮುಖ ಪಾತ್ರ ವಹಿಸಲಿದ್ದಾರಾ? ಇಷ್ಟು ದಿನ ತೆರೆಮರೆಯಲ್ಲಿಯೇ ಇದ್ದ ತ್ರಿಷಾ, ಈಗ ರಾಜಕೀಯಕ್ಕೆ ಧುಮುಕುತ್ತಾರಾ ಎಂಬ ಚರ್ಚೆ ಜೋರಾಗಿದೆ.

25
ಎರಡು ಕ್ಷೇತ್ರಗಳಲ್ಲಿ ಗೆದ್ದಿರೋ ವಿಜಯ್

ದಳಪತಿ ವಿಜಯ್ ಚೆನ್ನೈನ ಪೆರಂಬೂರ್‌ ಮತ್ತು ತಿರುಚ್ಚಿ ಪೂರ್ವ ಕ್ಷೇತ್ರದಿಂದ ಸ್ಪರ್ಧೆ ಮಾಡಿ, ಎರಡರಲ್ಲಿಯೂ ಗೆದ್ದಿದ್ದಾರೆ. ಈ ಎರಡರ ಪೈಕಿ ಒಂದು ಕ್ಷೇತ್ರಕ್ಕೆ ವಿಜಯ್ ರಾಜೀನಾಮೆ ನೀಡಬೇಕಾಗುತ್ತದೆ. ವಿಜಯ್ ರಾಜೀನಾಮೆಯಿಂದ ತೆರವಾಗುವ ಕ್ಷೇತ್ರದಿಂದ ತ್ರಿಷಾ ಸ್ಪರ್ಧೆ ಮಾಡಬಹುದು ಎಂಬ ಮಾತುಗಳು ಕೇಳಿ ಬರುತ್ತಿವೆ. ಇಡೀ ಚುನಾವಣೆಯಲ್ಲಿ ವಿಜಯ್ ಜೊತೆಯಲ್ಲಿದ್ದ ತ್ರಿಷಾ ಯಾವುದೇ ಕ್ಷೇತ್ರದಿಂದ ಸ್ಪರ್ಧೆ ಮಾಡಿರಲಿಲ್ಲ.

35
ಚುನಾವಣೆಗೆ ಸ್ಪರ್ಧೆ ಮಾಡ್ತಾರಾ ತ್ರಿಷಾ?

ಕೆಲ ವರದಿಗಳ ಪ್ರಕಾರ, ತಿರುಚ್ಚಿ ಪೂರ್ವ ಕ್ಷೇತ್ರದ ಶಾಸಕ ಸ್ಥಾನಕ್ಕೆ ವಿಜಯ್ ರಾಜೀನಾಮೆ ನೀಡುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಈ ಕ್ಷೇತ್ರದಿಂದ ತ್ರಿಷಾ ಸ್ಪರ್ಧಿಸಿ ಶಾಸಕಿಯಾಗಿ, ವಿಜಯ್ ಸರ್ಕಾರದಲ್ಲಿ ಸಚಿವೆ ಅಥವಾ ಡಿಸಿಎಂ ಸ್ಥಾನಕ್ಕೇರುವ ಸಾಧ್ಯತೆಗಳನ್ನು ಅಲ್ಲಗಳೆಯುವಂತಿಲ್ಲ. ಮತ್ತೊಂದೆಡೆ ವಿಜಯ್ ರಾಜೀನಾಮೆ ನೀಡುವ ಕ್ಷೇತ್ರದಿಂದ ಅವರ ಎಸ್.ಎ. ಚಂದ್ರಶೇಖರ್ ಕೂಡಾ ಸ್ಪರ್ಧಿಸಬಹುದು ಎಂಬ ಮಾತುಗಳಿವೆ.

45
ವಿಜಯ್-ತ್ರಿಷಾ ಜೋಡಿ

ವಿಜಯ್-ತ್ರಿಷಾ ಜೋಡಿಯನ್ನು ಎಂಜಿಆರ್-ಜಯಲಲಿತಾ ಜೋಡಿಗೆ ಹೋಲಿಸಲಾಗುತ್ತಿದೆ. ಹಿಂದೆ ಎಂಜಿಆರ್ ಸಿಎಂ ಆಗಿದ್ದಾಗ, ಜಯಲಲಿತಾ ತೆರೆಮರೆಯಲ್ಲಿ ಅವರಿಗೆ ಬೆಂಬಲವಾಗಿ ನಿಂತಿದ್ದರು. ಎಂಜಿಆರ್ ನಿಧನದ ನಂತರ ಜಯಲಲಿತಾ ನೇರ ರಾಜಕೀಯಕ್ಕೆ ಬಂದು ಸಿಎಂ ಆಗಿದ್ದರು.

55
ಸಿಎಂ ಸ್ಥಾನಕ್ಕೇರುವ ಸಾಧ್ಯತೆಯೇ ಹೆಚ್ಚು!

ತಮಿಳುನಾಡು ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ ಪಕ್ಷ ಬರೋಬ್ಬರಿ 108 ಸ್ಥಾನಗಳನ್ನು ಗೆದ್ದು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವಿಜಯ್ ಸಿಎಂ ಪಟ್ಟ ಏರಲಿದ್ದಾರೆ. ಪಕ್ಷ ಸ್ಥಾಪಿಸಿ, ಮೊದಲ ಚುನಾವಣೆಯಲ್ಲಿಯೇ ಸಿಎಂ ಆದ ಸಿನಿಮಾ ಸ್ಟಾರ್ ಆಗಿ ವಿಜಯ್ ಇತಿಹಾಸ ಬರೆಯಲಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories