ಅಮೃತಧಾರೆ ಧಾರಾವಾಹಿಯು ಐದು ವರ್ಷಗಳ ನಂತರದ ಕಥೆಯೊಂದಿಗೆ ರೋಚಕ ತಿರುವು ಪಡೆದಿದೆ. ಭೂಮಿಕಾ-ಗೌತಮ್ ಒಂದಾಗುವ ಸೂಚನೆ ಸಿಕ್ಕರೂ, ಮಲ್ಲಿಯ ಆಸ್ತಿ ಏನಾಯ್ತು ಮತ್ತು ಪತ್ನಿಗಾಗಿ ತಾಯಿಯನ್ನು ಬಿಟ್ಟ ಗೌತಮ್‌ನ ನಿರ್ಧಾರದ ಬಗ್ಗೆ ವೀಕ್ಷಕರು ಸೋಷಿಯಲ್ ಮೀಡಿಯಾದಲ್ಲಿ ಪ್ರಶ್ನಿಸುತ್ತಿದ್ದಾರೆ.
ಅಮೃತಧಾರೆ ಸೀರಿಯಲ್ (Zee Kannada Amruthadhaare Serial) ಇದೀಗ ಟ್ವಿಸ್ಟ್ ಮೇಲೆ ಟ್ವಿಸ್ಟ್ ನೀಡುತ್ತಿದೆ. ಐದು ವರ್ಷಗಳ ಬಳಿಕ ಎಂದು ತೋರಿಸುತ್ತಲೇ ಅಮೃತಧಾರೆಯ ಪಾರ್ಟ್-2 ಲವ್‌ಸ್ಟೋರಿ ಶುರುವಾಗಿದೆ. ಇನ್ನೇನು ಭೂಮಿಕಾ ಮತ್ತು ಗೌತಮ್ ಒಬ್ಬರನ್ನೊಬ್ಬರು ಸಿಕ್ಕಿರುವಂತೆ ಪ್ರೊಮೋದಲ್ಲಿ ತೋರಿಸಲಾಗಿದೆ. ಇವರು ಇಷ್ಟು ಬೇಗ ಒಂದಾಗಿ ಬಿಟ್ಟರೆ ಸೀರಿಯಲ್ ಮುಗಿದೇ ಬಿಡತ್ತಾ ಎನ್ನುವ ಪ್ರಶ್ನೆಯೂ ಮತ್ತೊಂದೆಡೆ ಎದುರಾಗಿದೆ.
27
ಎಲ್ಲಾ ಸೀರಿಯಲ್‌ಗಳ ಬಂಡವಾಳ ಒಂದೇ
ಅಷ್ಟಕ್ಕೂ ಸೀರಿಯಲ್ ಎಂದರೆ ಅದನ್ನು ಚ್ಯೂಯಿಂಗ್ ಗಮ್‌ನಂತೆ ಎಳೆಯುವುದು ಎನ್ನುವ ಮಾತಿದೆ. ಬಹುತೇಕ ಎಲ್ಲಾ ಸೀರಿಯಲ್‌ಗಳ ಕಥೆಯೂ ಒಂದೇ. ವಿಲನ್‌ಗಳ ಅಸಲಿ ಗುಣ ಪೆದ್ದು ನಾಯಕರಿಗೆ ಅರ್ಥವಾದ ಬಳಿಕ, ಸೀರಿಯಲ್ ಸುಖಾಂತ್ಯವಾಗುತ್ತೆ. ಅಲ್ಲಿಯವರೆಗೆ ವಿಲನ್ ಆಗಿರೋ ಚಿಕ್ಕಮ್ಮನೋ, ಅತ್ತಿಗೆನೋ ಇನ್ಯಾರೋ ಪಿತೂರಿ ಮಾಡಿದರೂ ಅದು ನಾಯಕಿಗೆ ತಿಳಿಯುತ್ತದೆಯೇ ವಿನಾ ನಾಯಕನಿಗೆ ಅಲ್ಲ ಎನ್ನುವುದೇ ಬಹುತೇಕ ಸೀರಿಯಲ್‌ಗಳ ಬಂಡವಾಳ.
37
ತುಸು ಭಿನ್ನ ಅಮೃತಧಾರೆ
ಇದೇ ಸಿದ್ಧ ಸೂತ್ರ ಅಮೃತಧಾರೆಯಲ್ಲಿ ಇದ್ದರೂ, ಬೇರೆ ಸೀರಿಯಲ್‌ಗಿಂತ ತುಸು ಭಿನ್ನ ಎನ್ನುವಂತೆ ಅಮೃತಧಾರೆ ಸೀರಿಯಲ್ ತೋರಿಸುತ್ತಿರುವುದರಿಂದ ವೀಕ್ಷಕರಿಗೆ ಹತ್ತಿರವಾಗುತ್ತಿದೆ. ಭೂಮಿಕಾ ಮತ್ತು ಗೌತಮ್ ಬಾಂಡಿಂಗ್, ಇದೀಗ ಗೌತಮ್‌ನ ಮಗ ಆಕಾಶ್ ನಟನೆ ಎಲ್ಲರಿಗೂ ಇಷ್ಟವಾಗುತ್ತಿದೆ.
ಇದರ ಹೊರತಾಗಿಯೂ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈ ಸೀರಿಯಲ್ ಕುರಿತು ಅಪಸ್ವರ ಕೇಳಿ ಬರುತ್ತಲೇ ಇದೆ. ಭೂಮಿಕಾ ಜೊತೆ ಮಲ್ಲಿಯೂ ಬಂದಿದ್ದಾಳೆ. ಹಾಗಿದ್ದರೆ ಮಲ್ಲಿಯ ನೂರಾರು ಕೋಟಿ ಆಸ್ತಿ ಏನಾಯ್ತು? ಅಪ್ಪನಿಂದ ಅವಳಿಗೆ ಆಸ್ತಿ ಬಂದಿತ್ತಲ್ವಾ? ಅವಳು ಕೂಡ ಹೋಟೆಲ್, ಷೋರೂಮ್ ಅದೂ ಇದೂ ಅಂತೆಲ್ಲಾ ಮಾಲೀಕಳಂತೆ ತೋರಿಸಿ ಜೈದೇವ್‌ಗೆ ಹೊಟ್ಟೆ ಉರಿಸಿದಳಲ್ವಾ? ಹಾಗಿದ್ರೆ ಅದರ ಗತಿಯೇನಾಯ್ತು ಎಂದು ಪ್ರಶ್ನಿಸುತ್ತಿದ್ದಾರೆ.
57
ಭೂಮಿಕಾಗೇ ಕೊಡಬಹುದಿತ್ತಲ್ವಾ?
ಭೂಮಿಕಾ ಮೇಲೆ ಅಷ್ಟೆಲ್ಲಾ ಪ್ರೀತಿ ಇದ್ದರೂ ಅದನ್ನೇ ಆಕೆಗೆ ನೀಡಬಹುದಿತ್ತಲ್ಲವೆ, ಭೂಮಿಕಾ ಸ್ವಾಭಿಮಾನಿ ಎನ್ನುವುದು ನಿಜವಾದರೂ ಮಲ್ಲಿ ಆ ಆಸ್ತಿಯನ್ನೆಲ್ಲಾ ಏನು ಮಾಡಿದಳು ಎಂದು ವೀಕ್ಷಕರು ಕೇಳುತ್ತಿದ್ದಾರೆ.
67
ಪತ್ನಿಗಾಗಿ ತಾಯಿಯನ್ನೇ ಬಿಡೋದು ಸರಿನಾ?
ಅದೇ ಇನ್ನೊಂದೆಡೆ, ಎಲ್ಲವನ್ನೂ ಅಳೆದು ತೂಗುವ ಭೂಮಿಕಾ, ಹೀಗೆ ಏಕಾಏಕಿ ಪತಿಯನ್ನು ಬಿಟ್ಟು ಬಂದಿದ್ದು ಎಷ್ಟು ಸರಿ ಎಂದು ಕೆಲವರು ಪ್ರಶ್ನಿಸುತ್ತಿದ್ದರೆ, ಮತ್ತೆ ಕೆಲವರು ತನ್ನ ಸ್ವಂತ ಅಮ್ಮ-ತಂಗಿಗೆ ಕುತಂತ್ರಿ ಶಕುಂತಲಾ ಏನು ಮಾಡಬಹುದು ಎಂದು ಯೋಚಿಸಿದೇ ಹೆಂಡತಿಯ ಹಿಂದೆ ಹೋದ ಗೌತಮ್ ವಿರುದ್ಧವೂ ಕಿಡಿ ಕಾರುತ್ತಿದ್ದಾರೆ. ಪತ್ನಿಗಾಗಿ ತಾಯಿಯನ್ನೇ ಬಿಟ್ಟಿದ್ದು ಸರೀನಾ ಪ್ರಶ್ನಿಸುತ್ತಿದ್ದಾರೆ. ಅವನೇನು ಅಮ್ಮನ ಬಗ್ಗೆ ಯೋಚನೆ ಮಾಡದಷ್ಟು ಹುಚ್ಚನಾ ಎಂದು ಕೇಳುತ್ತಿದ್ದಾರೆ.
77
ಜೀವನವಲ್ಲ... ಕಥೆ...
ಅಷ್ಟಕ್ಕೂ ಇದೊಂದು ಸೀರಿಯಲ್. ಸೀರಿಯಲ್‌ನಲ್ಲಿ ಏನು ಬೇಕಾದರೂ ಆಗಬಹುದು ಎನ್ನುವುದನ್ನು ಮನಸ್ಸಿನಲ್ಲಿ ತೆಗೆದುಕೊಳ್ಳದ ವೀಕ್ಷಕರು, ಇದೇನೋ ನಿಜ ಜೀವನದಲ್ಲಿಯೇ ಆಗಿರುವಂತೆ ಊಹಿಸಿಕೊಳ್ಳುವುದು ಮಾತ್ರ ವಿಚಿತ್ರವೇ ಸರಿ.