ಬಿಗ್ ಬಾಸ್ ಸೀಸನ್ 11ರ ಸ್ಪರ್ಧಿಗಳು ಹಾಗೂ ಜನಪ್ರಿಯ ಕಿರುತೆರೆ ನಟರಾದ ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರೀ ಶ್ರೀಲಂಕಾಗೆ ತೆರಳಿ, ಪ್ರವಾಸಿ ತಾಣಗಳಲ್ಲಿ ಮಸ್ತಿ ಮಾಡುತ್ತಿದ್ದಾರೆ. ಅಭಿಮಾನಿಗಳು ಆದಷ್ಟು ಬೇಗ ಮದುವೆಯಾಗಿ ಎಂದು ಕಾಮೆಂಟ್ ಮೂಲಕ ಐಶು-ಶಿಶಿರ್ ಗೆ ಹೇಳುತ್ತಿದ್ದಾರೆ.
ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್ 11 (Bigg Boss Season 11) ಭಾರಿ ಸದ್ದು ಮಾಡಿದ್ದು, ಈ ಸೀಸನ್ ನ ಮೋಸ್ಟ್ ಪಾಪ್ಯುಲರ್ ಜೋಡಿಗಳಲ್ಲಿ ಒಂದು ಎಂದರೆ ಅದು ಐಶ್ವರ್ಯ ಸಿಂಧೋಗಿ ಮತ್ತು ಶಿಶಿರ್ ಶಾಸ್ತ್ರೀ. ಬಿಗ್ ಬಾಸ್ ಮನೆಯಿಂದ ಹೊರ ಬಂದು ಇದೀಗ ವರ್ಷವಾಗುತ್ತಾ ಬಂದರೂ ಇಬ್ಬರ ಸಂಬಂಧ ಇನ್ನೂ ಗಟ್ಟಿಯಾಗಿದೆ.
29
ಬಿಗ್ ಬಾಸ್ ಜೋಡಿ
ಬಿಗ್ ಬಾಸ್ ನಿಂದ ಹೊರ ಬಂದ ಬಳಿಕದಿಂದ ಆರಂಭವಾಗಿ ಇಂದಿನವರೆಗೂ ಶಿಶಿರ್ ಮತ್ತು ಐಶ್ವರ್ಯ (Aishwarya Sindhogi) ಹೆಚ್ಚಾಗಿ ಜೊತೆಯಲ್ಲಿಯೇ ಇರುತ್ತಾರೆ. ಜೊತೆಯಾಗಿ ಟ್ರಾವೆಲ್ ಮಾಡುತ್ತಲಿರುತ್ತಾರೆ, ಅಲ್ಲದೇ ಹಬ್ಬಗಳನ್ನು ಸಹ ಜೊತೆಯಾಗಿ ಆಚರಿಸುತ್ತಾ, ಫೋಟೊಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿರುತ್ತಾರೆ.
39
ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್
ದೊಡ್ಮನೆಯಿಂದ ಹೊರ ಬಂದ ಆರಂಭದಲ್ಲಿ ಮೋಕ್ಷಿತಾ ಪೈ (Mokshitha Pai) ಜೊತೆ ಶಿಶಿರ್ ಮತ್ತು ಐಶ್ವರ್ಯ ಹಲವಾರು ದೇವಾಲಯಗಳಿಗೆ ಭೇಟಿ ನೀಡಿದ್ದರು, ಪೂಜೆಯಲ್ಲಿ ಜೊತೆಯಾಗಿ ಭಾಗಿಯಾಗಿದ್ದರು, ಅಲ್ಲದೇ ಜೊತೆಯಾಗಿ ಹಲವಾರು ವಿಡೀಯೋಗಳನ್ನು ಕೂಡ ಮಾಡುತ್ತಿದ್ದರು.
ಇತ್ತೀಚಿನ ದಿನಗಳಲ್ಲಿ ಐಶ್ವರ್ಯ ಮತ್ತು ಶಿಶಿರ್ (Shishir Shastry) ಇಬ್ಬರೇ ದೇಶ-ವಿದೇಶ ಸುತ್ತುತ್ತಾ ಎಂಜಾಯ್ ಮಾಡುತ್ತಿದ್ದಾರೆ. ಹಂಪಿ, ಕೂರ್ಗ್, ವಯನಾಡು, ಚಿಕ್ಕಮಗಳೂ ಎಂದು ಈ ಜೋಡಿ ಟ್ರಾವೆಲ್ ಮಾಡುತ್ತಾ ಫೋಟೊಗಳನ್ನು ಸೋಶಿಯಲ್ ಮೀಡೀಯಾದಲ್ಲಿ ಶೇರ್ ಮಾಡುತ್ತಲೇ ಇರುತ್ತಾರೆ.
59
ಲಂಕಾಗೆ ಹಾರಿದ ಶಿಶಿರ್-ಐಶ್
ಇದೀಗ ಈ ಜೋಡಿ ಶ್ರೀಲಂಕಾಗೆ ಹಾರಿದ್ದು, ಅಲ್ಲಿ ವೆಕೇಶನ್ ಎಂಜಾಯ್ ಮಾಡುತ್ತಿದ್ದಾರೆ. ಐಶ್ವರ್ಯ ಅಲ್ಲಿ ಕಳೆದ ಸುಂದರ ಕ್ಷಣಗಳನ್ನು, ಶಿಶಿರ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿದ್ದು, ಲಂಕನ್ ಡೈರೀಸ್ ಎಂದು ಕ್ಯಾಪ್ಶನ್ ಕೂಡ ಕೊಟ್ಟಿದ್ದಾರೆ.
69
ಬೇಗ ಮದುವೆಯಾಗಿ ಎಂದ ಫ್ಯಾನ್ಸ್
ಈ ಜೋಡಿಯ ಫೋಟೊಗಳನ್ನು ನೋಡಿ ಅಭಿಮಾನಿಗಳು, ನಿಮ್ಮನ್ನ ಜೊತೆ ನೋಡೋದೆ ಖುಷಿ. ಆದರೆ ಆದಷ್ಟು ಬೇಗನೆ ಮದುವೆಯಾಗಿ, ಆ ಮೇಲೆ ಜೊತೆಗೆ ಸುತ್ತಾಡಿ ಎಂದಿದ್ದಾರೆ. ಆದರೆ ಈ ಜೋಡಿ ಇವತ್ತಿಗೂ ತಮ್ಮ ಪ್ರೀತಿಯನ್ನು ಕನ್ಫರ್ಮ್ ಮಾಡಿಲ್ಲ.
79
ಉಪ್ಪಿ ಹಾಡಿಗೆ ಕಪಲ್ ಡ್ಯಾನ್ಸ್
ಅಷ್ಟೇ ಅಲ್ಲ ಉಪೇಂದ್ರ ಅವರ ಹುಟ್ಟುಹಬ್ಬದ ಸಲುವಾಗಿ ಐಶ್ -ಶಿಶಿರ್ ಜೋಡೀ ಶ್ರೀಲಂಕಾದಿಂದಲೇ ಡ್ಯಾನ್ಸ್ ಮಾಡಿ, ವಿಡೀಯೋ ಶೇರ್ ಮಾಡಿದ್ದಾರೆ. ಉಪೇಂದ್ರ ಅವರ ಬ್ಲಾಕ್ ಬಸ್ಟರ್ ಹಾಡುಗಳಿಗೆ ಈ ಜೋಡಿ ಸಖತ್ತಾಗಿ ಹೆಜ್ಜೆ ಹಾಕಿ ವಿಡಿಯೋ ಮಾಡಿದ್ದಾರೆ. ,
89
ನಟ ಉಪೇಂದ್ರ ಹುಟ್ಟುಹಬ್ಬಕ್ಕೆ ವಿಶ್
ಡ್ಯಾನ್ಸ್ ಜೊತೆಗೆ ಉಪೇಂದ್ರಗೆ ಮೆಸೇಜ್ ಕೂಡ ಹೇಳಿದ್ದು, ಡೈರೆಕ್ಟರ್ ಗೆ ಡೈರೆಕ್ಟರ್ ಈ ನಿರ್ದೇಶಕ, ನಟನೆ ಅಂತ ಬಂದ್ರೆ ಈತ ಪ್ರಳಯಾಂತಕ, ತಮ್ಮ ಸಿನಿಮಾಗಳ ಮೂಲಕ ಹೊಸ ಕ್ರೇಜ್ ನ ಸೃಷ್ಟಿ ಮಾಡಿದ ರಿಯಲ್ ಸ್ಟಾರ್, ನಮ್ಮ ನಿಮ್ಮೆಲ್ಲರ ಪ್ರೀತಿಯ ಸೂಪರ್ ಸ್ಟಾರ್ ಉಪ್ಪಿ ಸರ್ ಗೆ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳು ಎಂದು ಹೇಳಿದ್ದಾರೆ.
99
ಮಿನಿ ಸೀರೀಸ್ ನಲ್ಲಿ ಜೋಡಿ
ಇದೀಗ ಜೋಡಿ ಕುಕ್ಕು ಎಫ್ ಎಂನಲ್ಲಿ ಪ್ರಸಾರವಾಗುತ್ತಿರುವ ಮಿನಿ ಸೀರೀಸ್ ನಲ್ಲೂ ಜೋಡಿಯಾಗಿ ನಟಿಸುತ್ತಿದ್ದಾರೆ. ಪ್ರೈಸ್ ಆಫ್ ಲವ್ (Price of Love) ಎನ್ನುವ ಸೀರೀಸ್ ಇದಾಗಿದ್ದು, ಇಬ್ಬರ ಅಭಿನಯ ಮತ್ತು ಕಥೆಯನ್ನು ಜನರು ಕೂಡ ಮೆಚ್ಚಿಕೊಂಡಿದ್ದಾರೆ.