Puneeth Rajkumar​ ಪುತ್ರಿಯ ಹೊಸ ಬಿಜಿನೆಸ್​ಗೆ ವಿಶೇಷ ಸತ್ಯನಾರಾಯಣ ಪೂಜೆ: ಫೋಟೋಗಳು ವೈರಲ್​

Published : Jul 17, 2026, 01:20 PM IST

ಪುನೀತ್ ರಾಜ್‌ಕುಮಾರ್ ಅವರ ಕಿರಿಯ ಪುತ್ರಿ ವಂದಿತಾ, ತಮ್ಮ ತಂದೆಯ ಇಚ್ಛೆಯಂತೆ 'ನುಕಾಸ್ ಕೆಫೆ' ಎಂಬ ಹೋಮ್ ಬೇಕರಿ ಉದ್ಯಮವನ್ನು ಆರಂಭಿಸಿದ್ದಾರೆ. ಅದಕ್ಕಾಗಿ ವಿಶೇಷ ಸತ್ಯನಾರಾಯಣ ಪೂಜೆಯನ್ನು ಅಮ್ಮನ ಜೊತೆ ನೆರವೇರಿಸಿದ್ದು, ಅದರ ಫೋಟೋಗಳು ವೈರಲ್​ ಆಗಿವೆ.

PREV
15
ಅಪ್ಪುವಿನ ಇಚ್ಛೆಯಂತೆ ಬೇಕರಿ

ನಟ ಪುನೀತ್​ ರಾಜ್​ಕುಮಾರ್​ ಅವರ ಕಿರಿಯ ಮಗಳು ವಂದಿತಾ ರಾಜ್​ಕುಮಾರ್​ (Vandita Rajkumar) ಅಪ್ಪನ ಆಸೆಯನ್ನು ನೆರವೇರಿಸಿದ್ದು, ಅವರ ಅಪ್ಪುವಿನ ಇಚ್ಛೆಯಂತೆ ಹೋಮ್​ ಬೇಕರಿ ಉದ್ಯಮ ಶುರು ಮಾಡಿದ್ದಾರೆ. ಇದಕ್ಕೆ ನುಕಾಸ್​ ಕೆಫೆ' ಎಂದು ಹೆಸರು ಇಟ್ಟಿದ್ದಾರೆ.

25
ಸತ್ಯನಾರಾಯಣ ಪೂಜೆ

ಇದೀಗ ಈ ಉದ್ಯಮದ ಆರಂಭ ಮಾಡುವಾಗ ಸತ್ಯನಾರಾಯಣ ಪೂಜೆಯನ್ನು ನಡೆಸಿದ್ದು, ಅದರ ಫೋಟೋಗಳು ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆಗುತ್ತಿವೆ. ಈ ಫೋಟೋದಲ್ಲಿ, ಉದ್ಯಮ ಆರಂಭಿಸಿರುವ ವಂದಿತಾ ಜೊತೆಗೆ ಪುನೀತ್​ ರಾಜ್​ ಅವರ ಪತ್ನಿ ಅಶ್ವಿನಿ, ಹಾಗೂ ವಂದಿತಾ ಅವರ ಅಕ್ಕ ಧ್ರುತಿ ಅವರನ್ನೂ ನೋಡಬಹುದಾಗಿದೆ.

35
ಏನಿದು ಬಿಜಿನೆಸ್​?

ವಂದಿತಾ ಅವರು ಖುದ್ದು ತಯಾರಿಸುವ ಹೋಮ್​ ಬೇಕರಿ ಉದ್ಯಮ ಇದಾಗಿದೆ. ಮನೆಯಲ್ಲಿಯೇ ಬೇಕರಿ ತಿನಿಸುವ ತಯಾರಿಸಿ ಅಗತ್ಯ ಇದ್ದವರಿಗೆ ಕಳುಹಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಇರುವ ಮನೆಯಲ್ಲಿಯೇ ತಾವೇ ಖುದ್ದು ಹೊಸ ಹೊಸ ತಿನಿಸುಗಳನ್ನು ತಯಾರಿಸಿ ಆರ್ಡರ್​ ಪಡೆದು ಮಾರಾಟ ಮಾಡಲು ಮುಂದಾಗಿದ್ದಾರೆ ವಂದಿತಾ ಪುನೀತ್​ ರಾಜ್​.

45
ಏನಿದು ನುಕಾಸ್​?

ನುಕಾಸ್​ (Nuka's Backery) ಹೆಸರು ಸ್ವಲ್ಪ ವಿಚಿತ್ರ ಎನ್ನಿಸುವುದು ಉಂಟು. ಆದರೆ ಈ ಹೆಸರಿನ ಹಿಂದೆ ಇರುವುದು ಅಪ್ಪ ಅಪ್ಪುವಿನ ನೆನಪು. ಹೌದು. ವಂದಿತಾ ಅವರನ್ನು ಅಪ್ಪ ಪುನೀತ್​ ಸೇರಿದಂತೆ ಕುಟುಂಬಸ್ಥರು ನುಕ್ಕಿ ಎಂದೇ ಕರೆಯುತ್ತಿದ್ದರು. ಇದು ಅವರ ನಿಕ್​​ ನೇಮ್​. ಇದೇ ಹೆಸರನ್ನು ತಮ್ಮ ಬೇಕರಿಗೂ ಇಟ್ಟುಕೊಂಡು ನುಕಾಸ್​ ಎಂದು ನಾಮಕರಣ ಮಾಡಿದ್ದಾರೆ ವಂದಿತಾ.

55
ಗೀತಾ ಶಿವರಾಜ್​ ಕುಮಾರ್​ ಅವರ ಪ್ರೇರಣೆ

ತಮ್ಮ ಅತ್ತಿಗೆ ಶಿವರಾಜ್​ಕುಮಾರ್​ ಅವರ ಪತ್ನಿ ಗೀತಾ ಅವರಿಗೆ ಪುನೀತ್​ ಅವರು, ಇದೇ ಬಿಜಿನೆಸ್​ ಮಾಡಲು ಪ್ರೇರೇಪಿಸಿದ್ದರಂತೆ. ಬೇಕಿಂಗ್​ ತುಂಬಾ ಚೆನ್ನಾಗಿ ಮಾಡುವ ಗೀತಾ ಅವರಿಗೆ ಇದನ್ನು ಕಮರ್ಷಿಯಲ್ ಆಗಿ ತೆಗೆದುಕೊಳ್ಳಿ ಎಂದು ಅಪ್ಪು ಸಲಹೆ ಕೊಟ್ಟಿದ್ದರಂತೆ. ಆದರೆ ಆ ಸಮಯದಲ್ಲಿ ಕಮರ್ಷಿಯಲ್​ ಆಗಿ ಮಾಡುವುದು ಹೇಗೆ ಎಂದು ತಮಗೆ ತಿಳಿದಿರಲಿಲ್ಲ ಎಂದು ಗೀತಾ ಅವರು ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು. ಆ ಆಸೆಯನ್ನು ಈಗ ಪುತ್ರಿ ವಂದಿತಾ ನೆರವೇರಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories