Amitabh Bachchan ಅದ್ಯಾವ ಎಣ್ಣೆ ಹಾಕ್ತಾರಪ್ಪಾ ಅಂತ ಪ್ರಶ್ನಿಸೋರಿಗೆ ಕೊನೆಗೂ ಉತ್ತರ ಕೊಟ್ಟ ವೈದ್ಯರು!

Published : Sep 06, 2025, 09:44 PM IST

82 ವರ್ಷ ಆದರೂ ನಟ ಅಮಿತಾಭ್​ ಬಚ್ಚನ್​ ಅವರ ಉತ್ಸಾಹ, ಲವಲವಿಕೆ ಯುವ ಜನರನ್ನೂ ನಾಚಿಸುವಂತಿದೆ. ಎಲ್ಲಕ್ಕಿಂತಲೂ ಹೆಚ್ಚಾಗಿ ಇವರ ದಟ್ಟ ಕೂದಲು ಅಂದವನ್ನು ಹೆಚ್ಚಿಸುತ್ತಿದೆ. ಹಾಗಿದ್ರೆ ಇದರ ರಹಸ್ಯ ಏನು? ವೈದ್ಯರು ರಿವೀಲ್​ ಮಾಡಿದ್ರು ನೋಡಿ! 

PREV
17
ಬಿಗ್​ ಬಿ ಎಂದರೆ ಎನರ್ಜಿ

ಬಿಗ್​ ಬಿ ಎಂದೇ ಫೇಮಸ್​​ ಆಗಿರೋ ಅಮಿತಾಭ್​ ಬಚ್ಚನ್​ ಅವರಿಗೆ ಇದೀಗ 82 ವರ್ಷ. ಆದರೂ ಅವರ ಉತ್ಸಾಹ, ಲವಲವಿಕೆ ಯುವ ಜನರನ್ನೂ ನಾಚಿಸುವಂತಿದೆ. ಫಿಟ್​ ಆ್ಯಂಡ್ ಫೈನ್​ ಆಗಿರೋ ನಟನ ಎನರ್ಜಿ ಕೌನ್​ ಬನೇಗಾ ಕರೋಡ್​ಪತಿಯಲ್ಲಿ ನೋಡಬಹುದಾಗಿದೆ. ಅಷ್ಟೇ ಅಲ್ಲದೇ ಇಂದಿಗೂ ಹಲವು ಬ್ರ್ಯಾಂಡ್​ಗಳ ರಾಯಭಾರಿಯೂ ಆಗಿದ್ದು, ಹಲವೆಡೆ ಹಿನ್ನೆಲೆ ದನಿಯೂ ನೀಡಿದ್ದಾರೆ. ಇವೆಲ್ಲವುಗಳ ಜೊತೆಜೊತೆಗೆನೇ ಅವರ ಇನ್ನೊಂದು ಹೈಲೈಟ್​ ದಟ್ಟ ಕೂದಲು!

27
ಆರು ದಶಕಗಳ ಜರ್ನಿ

ಬ್ಲ್ಯಾಕ್​ ಆ್ಯಂಡ್​ ವೈಟ್​ ಚಿತ್ರದಿಂದ ಹಿಡಿದು ಈ 82ರ ಹರೆಯದಲ್ಲಿಯೂ ಅಷ್ಟೇ ಉತ್ಸಾಹದ ಚಿಲುಮೆಯಾಗಿ, ನಗೆಯ ಬುಗ್ಗೆಯಾಗಿ ಚಿಮ್ಮುತ್ತಿದ್ದಾರೆ. ಹಿರಿತೆರೆ, ಕಿರುತೆರೆ, ನಿರ್ದೇಶನ, ನಿರ್ಮಾಣ ಎಲ್ಲದರಲ್ಲಿಯೂ ಇವರದ್ದು ಎತ್ತಿದ ಕೈ. ವಯಸ್ಸೆನ್ನುವುದು ಮನಸ್ಸಿಗಲ್ಲ ಎನ್ನುವ ಮಾತು ಅಕ್ಷರಶಃ ಇವರಿಗೆ ಅನ್ವಯ ಆಗುತ್ತದೆ. ಚಿತ್ರದಲ್ಲಿ ಮಾರಣಾಂತಿಕ ಗಾಯಗಳಿಂದ ಬದುಕಿ ಬಂದಿದ್ದ ಅಮಿತಾಭ್​ ಅವರು ಇತ್ತೀಚೆಗೆ ಪ್ರಾಜೆಕ್ಟ್ ಕೆ ಚಿತ್ರದ ಚಿತ್ರೀಕರಣದ ವೇಳೆಯಲ್ಲಿಯೂ ಗಂಭೀರ ಗಾಯಗಳಾಗಿದ್ದವು. ಇವೆಲ್ಲವುಗಳ ಹೊರತಾಗಿಯೂ ಅಮಿತಾಭ್​ ಬಚ್ಚನ್​ ಇಂದಿಗೂ ಅದೇ ಎನರ್ಜಿಯನ್ನು ಉಳಿಸಿಕೊಂಡಿದ್ದಾರೆ.

37
ಕೂದಲ ಮೇಲೆ ಕಣ್ಣು

ಅಷ್ಟಕ್ಕೂ ಹಲವರಿಗೆ ಇವರ ಕೂದಲ ಮೇಲೆ ಕಣ್ಣಿದೆ. ಇವರು ಯಾವ ಎಣ್ಣೆ ಉಪಯೋಗಿಸುತ್ತಾರೆ? ಇದು ರಿಯಲ್ಲಾ, ರೀಲಾ, ವಿಗ್ಗಾ, ಟೋಪನ್ನಾ, ಹೇರ್‍‌ ಪ್ಲಾಂಟೇಷನ್ನಾ... ಹೀಗೆ ಹಲವಾರು ಮಂದಿ ನಟನೆ ಕೂದಲಿನ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ.

47
ರಿವೀಲ್​ ಆದ ಕೂದಲ ರಹಸ್ಯ

ಕೊನೆಗೂ ರಿವೀಲ್‌ ಆಗಿದೆ. ತಲೆಗೂದಲಿನ ಕಸಿ ತಜ್ಞ ಡಾ. ಗೌರಂಗ್ ಕೃಷ್ಣ ಈಗ ಅಮಿತಾಭ್‌ ಅವರ ಸೋಂಪಾದ ಕೂದಲಿನ ರಹಸ್ಯವನ್ನು ಬಯಲು ಮಾಡಿದ್ದಾರೆ. ಅಂದಹಾಗೆ ಅಮಿತಾಭ್ ಅವರ ತಲೆಯ ಮೇಲೆ ಇರುವುದು ಅಸಲಿ ಕೂದಲು ಅಲ್ಲ. ಅವರಿಗೆ ನೆತ್ತಿಯ ಮೇಲೆ ಕೂದಲು ಇಲ್ಲ. ಆದರೆ ಅವರದ್ದು ಹೇರ್ ಪ್ಯಾಚ್‌. ಇಷ್ಟು ದಟ್ಟವಾಗಿರುವ ಕೂದಲು ಶಸ್ತ್ರ ಚಿಕಿತ್ಸೆ ಅಥವಾ ಕೂದಲು ಕಸಿ ಮಾಡುವುದರಿಂದ ಬರುವುದಿಲ್ಲ. ಇದು ಹೇರ್‍‌ ಪ್ಯಾಚ್‌ ಅಂದರೆ ವಿಗ್ ಪ್ಯಾಚ್‌ನಿಂದ ಮಾತ್ರ ಬರಲು ಸಾಧ್ಯ ಎನ್ನುವ ಸತ್ಯವನ್ನು ವೈದ್ಯರು ರಿವೀಲ್ ಮಾಡಿದ್ದಾರೆ.

57
ವಿಗ್​ ಪ್ಯಾಚ್​

ಬಹುತೇಕ ಮಂದಿ ವಿಗ್‌ ಪ್ಯಾಚ್‌ಗೆ ಹೋಗುವ ಕಾರಣವನ್ನೂ ಅವರು ನೀಡಿದ್ದಾರೆ. ಕೂದಲು ಉದುರಿದರೆ ಅಥವಾ ಸಂಪೂರ್ಣ ಬೆಳವಣಿಗೆ ನಿಂತುಹೋದರೆ ಕಸಿ ಮಾಡಿಸಿಕೊಳ್ಳುವ ಜನರು ಇದ್ದಾರೆ. ಆದರೆ ಇದಕ್ಕೆ ಹಲವರು ಒಪ್ಪುವುದಿಲ್ಲ ಎಂದಿರುವ ವೈದ್ಯರು ಅದಕ್ಕೆ ಕಾರಣವನ್ನೂ ನೀಡಿದ್ದಾರೆ.

67
ವೈದ್ಯರ ಮಾಹಿತಿ

ಇದಕ್ಕೆ ಮುಖ್ಯ ಕಾರಣ, ಆಪರೇಷನ್‌ಗೆ ಕೆಲವರು ವೈದ್ಯಕೀಯವಾಗಿ ಫಿಟ್ ಆಗಿರುವುದಿಲ್ಲ, ಮತ್ತೆ ಕೆಲವರು ಇದಕ್ಕೆ ಅಂಜುತ್ತಾರೆ. ಕನಿಷ್ಠ ಮೂರು ದಿನವಾದರೂ ಸಂಪೂರ್ಣ ರಜೆಯ ಮೇಲೆ ಇರಬೇಕು ಎನ್ನುವ ಕಾರಣಕ್ಕೆ ಟೈಮ್‌ ಅಡ್ಜಸ್ಟ್‌ ಮಾಡಿಕೊಳ್ಳಲು ಕೆಲವರು ಹಿಂದೇಟು ಹಾಕುತ್ತಾರೆ. ಇದಕ್ಕಿಂತ ಮುಖ್ಯವಾಗಿ ಈಗ ಎಲ್ಲರಿಗೂ ಇನ್‌ಸ್ಟೆಂಟ್‌ ಬೇಕು. ಯಾವುದೇ ಕೆಲಸ ಮಾಡಿದ ತಕ್ಷಣ ರಿಸಲ್ಟ್‌ ಬೇಕು. ಶಸ್ತ್ರಚಿಕಿತ್ಸೆ ಹಾಗೆ ಆಗುವುದಿಲ್ಲ. ಆದ್ದರಿಂದ ವಿಗ್‌ ಪ್ಯಾಚ್‌ಗೆ ಮೊರೆ ಹೋಗುತ್ತಾರೆ ಎಂದು ಅವರು ತಿಳಿಸಿದ್ದಾರೆ.

77
ಕೂದಲಿಗೆ ಶಸ್ತ್ರಚಿಕಿತ್ಸೆಗಳು

ಅಂದಹಾಗೆ ಕೂದಲು ಬರುವುದಕ್ಕೆ ನಾನು ಶಸ್ತ್ರಚಿಕಿತ್ಸೆಗಳು ಇವೆ. ಅಡೆನೊಸಿನ್, ಅಡೆನೊಸಿನ್, ಲೇಸರ್ ಲೈಟ್ ಥೆರಪಿ ಹೀಗೆ ಹಲವಾರು ಬಗೆಗಳು ಇವೆ. ಈ ಎಲ್ಲಾ ಆಪರೇಷನ್‌ ಮಾಡಿಸಿದರೆ, ಕೂದಲು ಉದುರುವಿಕೆಯನ್ನು ನಿಧಾನವಾಗಿ, ಹೊಸ ಕೂದಲು ವೇಗದಲ್ಲಿ ಬರುತ್ತವೆ. ಆದರೆ ಹೇರ್‍‌, ವಿಗ್‌ ಪ್ಯಾಚ್‌ಗಳಿಂದ ಕೂಡಲೇ ಸೋಂಪಾದ ಕೂದಲು ಪಡೆಯಬಹುದು. ಹೇರ್ ಪ್ಯಾಚ್ ಎಂದರೆ, ಎಲ್ಲಿ ಕೂದಲು ಉದುರಿವೆಯೋ ಆ ಸ್ಥಳದಲ್ಲಿ ಪ್ಯಾಚ್ ಮಾಡಲಾಗುತ್ತದೆ.

Read more Photos on
click me!

Recommended Stories