ದಕ್ಷಿಣ ಭಾರತದ ಜನಪ್ರಿಯ ನಟಿ ತಮಗಾದ ಕಾಸ್ಟಿಂಗ್ ಕೌಚ್ ಅನುಭವವನ್ನು ಹಂಚಿಕೊಂಡಿದ್ದಾರೆ. ತಮಗಿಂತ ಚಿಕ್ಕ ವಯಸ್ಸಿನ ನಿರ್ಮಾಪಕನೊಬ್ಬ 'ಅಕ್ಕ' ಎಂದು ಕರೆದು, ನಂತರ ಹಾಸಿಗೆ ಹಂಚಿಕೊಳ್ಳಲು ಕೇಳಿದ್ದರಿಂದ ಆಘಾತಗೊಂಡು ಶೂಟಿಂಗ್ ನಿಲ್ಲಿಸಿ ಬಂದಿದ್ದಾಗಿ ಅವರು ಬಹಿರಂಗಪಡಿಸಿದ್ದಾರೆ.
ಚಿತ್ರರಂಗದಲ್ಲಿ ಅನೇಕ ನಟಿಯರು ಕಾಸ್ಚಿಂಗ್ ಕೌಚ್‌ನಿಂದ ಸಿನಿಮಾದ ಹೊರಬರಬೇಕಾಯ್ತು ಎಂದು ಹೇಳಿಕೆ ನೀಡಿದ್ದಾರೆ. ಚಿತ್ರರಂಗದಲ್ಲಿ ತಮಗೆ ಯಾರಿಂದ ತೊಂದರೆಯಾಯ್ತು ಎಂದು ಬಹಿರಂಗಪಡಿಸಲು ಹಲವು ನಟಿಯರು ಹಿಂದೇಟು ಹಾಕುತ್ತಾರೆ. ಅಕ್ಕಾ ಅಂತಾ ಕರೆದು ಮಂಚಕ್ಕೆ ಬಾ ಅಂದ್ರು ಎಂಬ ಹೇಳಿಕೆಯನ್ನು ಸೌಥ್ ನಟಿ ಹೇಳಿದ್ದಾರೆ.
25
ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ
ದಕ್ಷಿಣ ಭಾರತದ ಜನಪ್ರಿಯ ನಟಿ ಚಾರ್ಮಿಲಾ ಕ್ರಿಸ್ಟಿನಾ ಸಿನಿಮಾರಂಗದಲ್ಲಿ ತಮಗೆ ಆಘಾತಕಾರಿಯ ಅನುಭವ ಉಂಟಾಗಿದೆ ಎಂದು ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿರುವ ನಟಿ ಚಾರ್ಮಿಲಾ ಕ್ರಿಸ್ಟಿನಾ, ನಿರ್ಮಾಪಕರೊಬ್ಬರು ಮೊದಲು ನನ್ನನ್ನ ಅಕ್ಕ ಎಂದು ಕರೆದರು. ನಂತರ ಅದೇ ವ್ಯಕ್ತಿಯೇ ನನ್ನನ್ನು ಮಂಚಕ್ಕೆ ಕರೆದ ಎಂದು ಸ್ಪೋಟಕ ಹೇಳಿಕೆ ನೀಡಿದ್ದಾರೆ.
35
ಮಗನ ವಯಸ್ಸಿನ ನಿರ್ಮಾಪಕ
48 ವರ್ಷದ ನಟಿ ಚಾರ್ಮಿಲಾ ಕ್ರಿಸ್ಟಿನಾ ಮಲಯಾಳಂ ಸಿನಿಮಾರಂಗದಲ್ಲಿ ಅಹಿತಕರ ಘಟನೆಯನ್ನು ಹಂಚಿಕೊಂಡಿದ್ದಾರೆ. ಆ ನಿರ್ಮಾಪಕ ನನಗಿಂತ ಚಿಕ್ಕ ವಯಸ್ಸಿನವರು. ಹಾಗಾಗಿ ನನ್ನನ್ನು ದೀದಿ (ಅಕ್ಕ) ಎಂದು ಕರೆಯುತ್ತಿದ್ದರು. ಒಂದು ದಿನ ನನ್ನ ಮಗನ ವಯಸ್ಸಿನ ನಿರ್ಮಾಪಕ ತನ್ನೊಂದಿಗೆ ಹಾಸಿಗೆ ಹಂಚಿಕೊಳ್ಳುವಂತೆ ಬೇಡಿಕೆ ಇರಿಸಿದ್ದ. ಇದರಿಂದ ನಾನು ಆಘಾತಕ್ಕೊಳಗಾಗಿದ್ದೆ ಎಂದು ಚಾರ್ಮಿಲಾ ಕ್ರಿಸ್ಟಿನಾ ಹೇಳಿದ್ದಾರೆ.
ಆ ವೇಳೆ ನಾನು ತಾಯಿಯ ಪಾತ್ರದಲ್ಲಿ ನಟಿಸುತ್ತಿದ್ದೆ. ನಿರ್ಮಾಪಕ ಈ ವಿಷಯವಾಗಿ ನನ್ನ ಸಹಾಯಕಿಯನ್ನು ಸಂಪರ್ಕಿಸಿದ್ದರು. ಇದಕ್ಕಾಗಿ 50 ಸಾವಿರ ರೂಪಾಯಿ ಕೊಡುವೆ ಎಂದು ಹೇಳಿದ್ದರು. ನಾನು ಅಥವಾ ನನ್ನ ಸಹಾಯಕಿ ಇಬ್ಬರಲ್ಲಿ ಯಾರಾದ್ರು ಒಬ್ಬರು ಈ ವಿಷಯಕ್ಕೆ ಅಡ್ಜಸ್ಟ್ ಮಾಡಿಕೊಳ್ಳಬೇಕು ಅಂತ ಕಂಡೀಷನ್ ಹಾಕಿದ್ದರು ಎಂದು ನಟಿ ಚಾರ್ಮಿಲಾ ಹೇಳಿದ್ದಾರೆ.
ನಿರ್ಮಾಪಕ ವಯಸ್ಸಿನಲ್ಲಿ ನನ್ನ ಪುತ್ರನಗಿಂತ ಸ್ವಲ್ಪ ದೊಡ್ಡವರು. ನನ್ನ ಅರ್ಧ ವಯಸ್ಸಿನ ನಿರ್ಮಾಪಕನ ಮಾತುಗಳನ್ನು ಕೇಳಿ ನಾನು ಅಘಾತಕ್ಕೊಳಗಾಗಿದ್ದೆ. ಅಂದೇ ಶೂಟಿಂಗ್ ನಿಲ್ಲಿಸಿ, ಸಹಾಯಕಿಯೊಂದಿಗೆ ಚೆನ್ನೈಗೆ ಮರಳಿದೆ ಎಂದು ಚಾರ್ಮಿಲಾ ಸಂದರ್ಶನದಲ್ಲಿ ತಿಳಿಸಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.