46 ವರ್ಷಗಳ ಬಳಿಕ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖುದ್ದು ರಜನಿಕಾಂತ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. ಕತೆ, ನಿರ್ದೇಶಕರು ಇನ್ನೂ ನಿರ್ಧಾರವಾಗಿಲ್ಲ.
ರಜನಿಕಾಂತ್ ಮತ್ತು ಕಮಲ್ ಹಾಸನ್ ಜೊತೆಯಾಗಿ ಸಿನಿಮಾದಲ್ಲಿ ನಟಿಸಬೇಕು ಅನ್ನುವುದು ಅಭಿಮಾನಿಗಳ ಆಸೆಯಾಗಿತ್ತು. ಆ ಆಸೆ ಪೂರೈಸುವ ಕ್ಷಣ ಸನ್ನಿಹಿತವಾಗಿದೆ.
26
ಒಂದೇ ಸಿನಿಮಾದಲ್ಲಿ ರಜನಿಕಾಂತ್ ಮತ್ತು ಕಮಲ್ ಹಾಸನ್
46 ವರ್ಷಗಳ ಬಳಿಕ ರಜನಿಕಾಂತ್ ಮತ್ತು ಕಮಲ್ ಹಾಸನ್ ಒಂದೇ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಖುದ್ದು ರಜನಿಕಾಂತ್ ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆ. 1979ರಲ್ಲಿ ಅಲ್ಲಾವುದ್ದೀನುಮ್ ಅದ್ಭುತ ವಿಲಕ್ಕುಮ್ ಅವರಿಬ್ಬರು ನಟಿಸಿದ ಕೊನೆಯ ಚಿತ್ರವಾಗಿದೆ.
36
ಜೈಲರ್ 2 ಚಿತ್ರದ ಚಿತ್ರೀಕರಣ
ಜೈಲರ್ 2 ಚಿತ್ರದ ಚಿತ್ರೀಕರಣಕ್ಕಾಗಿ ಪಾಲಕ್ಕಾಡ್ ಹೊರಟಿದ್ದ ವೇಳೆಯಲ್ಲಿ ವರದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ತನ್ನ ಮುಂದಿನ ಸಿನಿಮಾ ಕಮಲ್ ಹಾಸನ್ ಜೊತೆಗೆ ಎಂದು ತಿಳಿಸಿದ್ದಾರೆ.
ಕತೆ, ನಿರ್ದೇಶಕರು ಇನ್ನೂ ನಿರ್ಧಾರವಾಗಿಲ್ಲ. ಈ ಚಿತ್ರವನ್ನು ಕಮಲ್ ಹಾಸನ್ ಅವರ ಆರ್‌ಕೆಎಫ್‌ಐ ಮತ್ತು ರೆಡ್ ಜೈಂಟ್ಸ್ ಸಂಸ್ಥೆಗಳು ನಿರ್ಮಿಸುತ್ತಿವೆ ಎಂದು ರಜನಿಕಾಂತ್ ಹೇಳಿದರು.
56
ಚಿತ್ರರಂಗದ ಲೆಜೆಂಡರಿ ಸ್ಟಾರ್ಸ್
46 ವರ್ಷಗಳ ನಂತರ ಭಾರತೀಯ ಚಿತ್ರರಂಗದ ಲೆಜೆಂಡರಿ ಸ್ಟಾರ್ಗಳಾದ ರಜನಿಕಾಂತ್ ಹಾಗೂ ಕಮಲ್ ಹಾಸನ್ ತೆರೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಸುದ್ದಿ ಸಖತ್ ಸದ್ದು ಮಾಡುತ್ತಿದೆ.
66
ಬಿಗ್ ಮಲ್ಟಿಸ್ಟಾರರ್ ಸಿನಿಮಾ
ಬಿಗ್ ಮಲ್ಟಿಸ್ಟಾರರ್ ಸಿನಿಮಾದ ನಿರ್ದೇಶಕರಾಗಿ ಲೋಕೇಶ್ ಕನಗರಾಜ್ ಅವರ ಹೆಸರು ಕೇಳಿಬರುತ್ತಿದ್ದರೂ, ರಜನಿಕಾಂತ್ ಅವರ ಲೇಟೆಸ್ಟ್ ಹೇಳಿಕೆಗಳು ಹೊಸ ಚರ್ಚೆಗೆ ನಾಂದಿ ಹಾಡಿದೆ. ಕಥೆ ಮತ್ತು ನಿರ್ದೇಶಕರನ್ನು ಅಂತಿಮಗೊಳಿಸಿದ ನಂತರವೇ ಎಲ್ಲವೂ ನಿಮಗೆ ತಿಳಿಯಲಿದೆ.