Sonu Srinivas Gowda viral look: ಬೇರೆ ರಾಜ್ಯಗಳಲ್ಲಿಯೂ ಕಾಂತಾರ ರಾಣಿ ಕನಕವತಿ ಗೆಟಪ್‌ನಲ್ಲಿ ಯುವತಿಯರು ಮಿಂಚಿದ್ದು, ಇದೀಗ ಸೋನು ಶ್ರೀನಿವಾಸ್ ಗೌಡ ಕೂಡ ಕನಕವತಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಯದ್ವಾ ತದ್ವಾ ಹೊಗಳುತ್ತಿದ್ದಾರೆ.
ಒಂದಲ್ಲ ಒಂದು ಕಾರಣಕ್ಕಾಗಿ ಸೋನು ಶ್ರೀನಿವಾಸ್ ಗೌಡ ಆಗಾಗ ಸುದ್ದಿಯಲ್ಲಿರುತ್ತಾರೆ. ಸದ್ಯ ಸೋನು ಸುದ್ದಿಯಲ್ಲಿದ್ದಾರೆ. ಆದರೆ ಈ ಬಾರಿ ಅವರು ಸದ್ದು ಮಾಡುತ್ತಿರುವುದು ನ್ಯೂ ಲುಕ್‌ನಿಂದಾಗಿ. ಅವರ ಹೊಸ ಅವತಾರ ನೋಡಿದ ಫ್ಯಾನ್ಸ್ ಸಿಕ್ಕಾಪಟ್ಟೆ ಪ್ರಶಂಸಿಸುತ್ತಿದ್ದಾರೆ.
27
ಅಪ್ಡೇಟ್ ಮಾಡುತ್ತಲೇ ಇರುತ್ತಾರೆ
ನಿಮಗೆಲ್ಲರಿಗೂ ಗೊತ್ತಿರುವಂತೆ ಸೋನು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್. ತಾವೆಲ್ಲೇ ಹೋದರೂ, ಏನೇ ಮಾಡಿದರೂ ಅದನ್ನ ಫ್ಯಾನ್ಸ್‌ಗೆ ಅಪ್ಡೇಟ್ ಮಾಡುತ್ತಲೇ ಇರುತ್ತಾರೆ. ಕೆಲವರು ಇದಕ್ಕೆ ಗುಡ್ ಕಾಮೆಂಟ್ ಮಾಡಿದ್ರೆ, ಕೆಲವರು ಕೆಟ್ಟದಾಗಿ ಕಾಮೆಂಟ್ ಮಾಡುತ್ತಾರೆ. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದ ಸೋನು ತಮ್ಮದೇ ದಾಟಿಯಲ್ಲಿ ಟ್ರೋಲಿಗರಿಗೆ ಉತ್ತರ ನೀಡುತ್ತಿರುತ್ತಾರೆ.
37
ಸಿಕ್ಕಾಪಟ್ಟೆ ವೈರಲ್
ಸಾಮಾನ್ಯವಾಗಿ ಸೋನು ಬಿಕಿನಿ ಅಥವಾ ಟೂ ಪೀಸ್ ಧರಿಸಿ ಕಾಣಿಸಿಕೊಳ್ಳುತ್ತಾರೆ. ಆ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಅಪ್‌ಲೋಡ್ ಮಾಡಿದಾಗ ಸಿಕ್ಕಾಪಟ್ಟೆ ವೈರಲ್ ಆಗುತ್ತದೆ. ಆದರೆ ಈ ಬಾರಿ ಅವರು ಯಾವುದೇ ಹಾಟ್ ಅವತಾರದಲ್ಲಿ ಕಾಣಿಸಿಕೊಂಡಿಲ್ಲ. ಬದಲಾಗಿ ಟ್ರಡಿಶನಲ್ ಆಗಿ ಕಾಣಿಸಿಕೊಂಡಿದ್ದಾರೆ. ಅದು ಕನಕವತಿ ಗೆಟಪ್‌ನಲ್ಲಿ.
ಕಾಂತಾರ ಚಾಪ್ಟರ್ 1 ‘ಕನಕವತಿ’ಯ ಲುಕ್ ಈಗ ಎಲ್ಲೆಡೆ ಟ್ರೆಂಡ್ ಆಗುತ್ತಿದೆ. ಸೋಶಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವವರಿಗೆ ಬಹುಶಃ ಇದು ಗಮನಕ್ಕೆ ಬಂದಿರುತ್ತದೆ.
57
ಪಡ್ಡೆ ಹೈಕಳ ಮನಗೆದ್ದ ರುಕ್ಮಿಣಿ ವಸಂತ್
ಕಾಂತಾರ ಚಾಪ್ಟರ್ 1ನಲ್ಲಿ ಕನಕವತಿಯಾಗಿ ಕಾಣಿಸಿಕೊಂಡ ರುಕ್ಮಿಣಿ ವಸಂತ್ ಪಡ್ಡೆ ಹೈಕಳ ಮನಗೆದ್ದಿದ್ದರು. ಅಷ್ಟೇ ಏಕೆ ಆ ಚಿತ್ರದಿಂದ ನ್ಯಾಷನಲ್ ಕ್ರಶ್ ಆಗಿದ್ದರು. ಅಂದಿನಿಂದ ಪ್ರತಿಯೊಬ್ಬ ಹೆಣ್ಮಕ್ಕಳು ಆ ಲುಕ್‌ನಲ್ಲಿ ಕಾಣಿಸಿಕೊಳ್ಳಲು ಬಯಸುತ್ತಿದ್ದಾರೆ.
67
ಕನಕವತಿ ಗೆಟಪ್‌ನಲ್ಲಿ ಮಿಂಚಿದ ಯುವತಿಯರು
ಬೇರೆ ರಾಜ್ಯಗಳಲ್ಲಿಯೂ ರಾಣಿ ಕನಕವತಿ ಗೆಟಪ್‌ನಲ್ಲಿ ಯುವತಿಯರು ಮಿಂಚಿದ್ದು, ಇದೀಗ ಸೋನು ಶ್ರೀನಿವಾಸ್ ಗೌಡ ಕೂಡ ಕನಕವತಿಯಾಗಿ ಕಾಣಿಸಿಕೊಂಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಯದ್ವಾ ತದ್ವಾ ಹೊಗಳುತ್ತಿದ್ದಾರೆ.
77
ವೀಕ್ಷಕರ ಕಾಮೆಂಟ್ಸ್
"ಕ್ಯೂಟ್ ಫೋಟೋ ಅಕ್ಕ.." "ಸೋನುವತಿ" "ಸೂಪರ್" "ಈ ಡ್ರೆಸ್‌ನಲ್ಲಿ ಸುಂದರವಾಗಿ ಕಾಣಿಸುತ್ತೀರಿ", "ಇದಪ್ಪಾ ಲುಕ್ ಅಂದ್ರೆ", ಅಂತೆಲ್ಲಾ ಹಾರ್ಟ್, ಫೈಯರ್ ಇಮೋಜಿ ಹಾಕಿ ಕಾಮೆಂಟ್ ಮಾಡಿರುವುದನ್ನ ನೀವು ನೋಡಬಹುದು.