ನೇಪಾಳ ಪ್ರವಾಹ ಸಂತ್ರಸ್ತರಿಗೆ ಮಿಡಿದ ನಟ ಸೋನು ಸೂದ್, ಆಹಾರ, ಆಶ್ರಯ ಸೇರಿ ಸಂಪೂರ್ಣ ನೆರವು

Published : Aug 27, 2026, 01:47 PM IST

ನೇಪಾಳ ಪ್ರವಾಹ ದುರಂತದಲ್ಲಿ ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ಇದರ ಬೆನ್ನಲ್ಲೇ ಬಾಲಿವುಡ್ ನಟ ಸೋನು ಸೂದ್ ಸಂತ್ರಸ್ತರಿಗೆ ನೆರವು ಘೋಷಿಸಿದ್ದಾರೆ. ನೀವು ಏಕಾಂಗಿಯಲ್ಲ, ನಿಮ್ಮ ಜೊತೆ ನಾವಿದ್ದೇವೆ ಎಂದು ಎಲ್ಲಾ ರೀತಿ ನೆರವಿನ ಭರವಸೆ ನೀಡಿದ್ದಾರೆ.

PREV
16
ಬಾಲಿವುಡ್ ನಟ ಸೋನು ಸೂದ್ ನೆರವು

ನೇಪಾಳ ಪ್ರವಾಹ ದುರಂತದಲ್ಲಿ ಸಾವಿನ ಸಂಖ್ಯೆ 162ಕ್ಕೆ ಏರಿಕೆಯಾಗಿದೆ. 1000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಅತ್ಯಂತ ಭೀಕರ ಪ್ರವಾಹ ಪರಿಸ್ಥಿತಿಗೆ ನೇಪಾಳ, ಟೇಬೆಟ್ ಗಡಿ ನಲುಗಿ ಹೋಗಿದೆ. ನಾಪತ್ತೆಯಾದವರ ಪೈಕಿ ಭಾರತೀಯರ ಸಂಖ್ಯೆಯೂ ಹೆಚ್ಚಿದೆ. ನೇಪಾಳಕ್ಕೆ ಭಾರತ ಸರ್ಕಾರ ಪರಿಹಾರ ಸಾಮಾಗ್ರಿ ಕಳುಹಿಸಿದೆ. ಇದರ ಬೆನ್ನಲ್ಲೇ ಸದಾ ಕಷ್ಟದಲ್ಲಿರುವವರಿಗೆ ಮಿಡಿಯುವ ಬಾಲಿವುಡ್ ನಟ ಸೋನು ಸೂದ್ ನೇಪಾಳ ಪ್ರವಾಹ ಸಂತ್ರಸ್ತರಿಗೆ ಸಂಪೂರ್ಣ ನೆರವು ಘೋಷಿಸಿದ್ದಾರೆ.

26
ನೀವು ಏಕಾಂಗಿಯಲ್ಲ, ನಿಮ್ಮ ಜೊತೆ ನಾವಿದ್ದೇವೆ

ನೇಪಾಳ ಪ್ರವಾಹ ಸಂತ್ರಸ್ತರಿಗೆ ನೆರವು ಘೋಷಿಸಿದ ನಟ ಸೋನು ಸೂದ್, ನೀವು ಏಕಾಂಗಿಯಲ್ಲಿ ನಿಮ್ಮ ಜೊತೆ ನಾವಿದ್ದೇವೆ ಎಂದಿದ್ದಾರೆ. ಆಹಾರ, ಆಶ್ರಯ ಸೇರಿದಂತೆ ಎಲ್ಲಾ ನೆರವು ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರವಾಹದಿಂದ ತೀವ್ರ ದುಃಖದಲ್ಲಿರುವ ಕುಟುಂಬ ಜೊತೆ ನಾವಿದ್ದೇವೆ. ಬದುಕು ಕಟ್ಟಿಕೊಳ್ಳಲು ನೆರವಾಗುವುದಾಗಿ ಹೇಳಿದ್ದಾರೆ.

36
ಮರು ನಿರ್ಮಾಣದ ನೆರವಿನೊಂದಿಗೆ ಬರುತ್ತಿದ್ದೇವೆ

ನಟ ಸೋನು ಸೂದ್ ನೆರವಿನ ಕುರಿತು ಎಕ್ಸ್ ಮೂಲಕ ಪೋಸ್ಟ್ ಮಾಡಿದ್ದಾರೆ. ನೇಪಾಳ ಪ್ರವಾಹ ಕುರಿತು ಎಕ್ಸ್ ಪೋಸ್ಟ್‌ನಲ್ಲಿ ಸೂದ್, ನೀವು ಒಂಟಿಯಲ್ಲ, ನಾನು ನಿಮ್ಮೊಂದಿಗೆ ಇದ್ದೇನೆ. ಆಹಾರ, ಆಶ್ರಯ ಹಾಗೂ ಮರು ನಿರ್ಮಾಣಕ್ಕೆ ಬೇಕಾದ ಎಲ್ಲಾ ನೆರವಿನೊಂದಿಗೆ ಬರುತಿದ್ದೇವೆ ಎಂದು ಸೋನು ಸೂದ್ ಹೇಳಿದ್ದಾರೆ.

46
ನೆರವಿಗೆ ನಿಲ್ಲುವ ಸೋನು ಸೂದ್

ಕೋವಿಡ್ ಸಂದರ್ಭದಲ್ಲಿ ನಟ ಸೋನು ಸೂದ್ ಸಂಕಷ್ಟದ ಜನರಿಗೆ ನೆರವಾಗಿದ್ದರು. ಆಹಾರ, ಔಷಧಿ, ಆಸ್ಪತ್ರೆ ಬೆಡ್ ಸೇರಿದಂತೆ ಎಲ್ಲಾ ರೀತಿಯಲ್ಲಿ ಸೋನು ಸೂದ್ ನೆರವಾಗಿದ್ದರು. ವರ್ಷಗಳ ಕಾಲ ಸೋನು ಸೂದ್ ಈ ನೆರವು ನೀಡಿದ್ದರು. ಸೋನು ಸೂದ್ ತಮ್ಮ ಸಂಘಟನೆ ಮೂಲಕ ಸತತವಾಗಿ ಸಂಕಷ್ಟದಲ್ಲಿರುವ ವ್ಯಕ್ತಿಗಳಿಗೆ ಪರಿಹಾರ ನೀಡಿದ್ದಾರೆ. ಹಲವು ಮಕ್ಕಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದಾರೆ. ಇದೀಗ ನೇಪಾಳಕ್ಕೂ ನೆರವು ವಿಸ್ತರಿಸಿದ್ದಾರೆ.

56
ನೇಪಾಳ ಕಂಡ ಅತೀ ಭೀಕರ ಪ್ರವಾಹ

ನೇಪಾಳ ಕಂಡ ಅತೀ ಭೀಕರ ಪ್ರವಾಹದಲ್ಲಿ ಇದು ಒಂದು. ಹಿಮಾಪತದಿಂದ ಪ್ರವಾಹ ಸೃಷ್ಟಿಯಾಗಿದೆ ಎಂದು ವರದಿಯಾಗಿದೆ. 30 ನಿಮಿಷದಲ್ಲಿ ನೀರಿನ ಮಟ್ಟ 9 ಮೀಟರ್ ಏರಿಕೆಯಾಗಿದೆ. ಸೇತುವೆ, ಕಟ್ಟಡ, ಮನೆಗಳು ಕೊಚ್ಚಿ ಹೋಗಿದೆ. 1000ಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. 162ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ರಕ್ಷಣಾ ಕಾರ್ಯಾಚರಣೆಗಳು ನಡೆಯುತ್ತಿದೆ.

66
ನೇಪಾಳಕ್ಕಾಗಿ ಪ್ರಾರ್ಥಿಸಿ ಎಂದ ನಟಿ

ನೇಪಾಳ ಮೂಲದ ಬಾಲಿವುಡ್ ನಟಿ ಮನಿಷಾ ಕೊಯಿರಾಲ ನೇಪಾಳಕ್ಕಾಗಿ ಪ್ರಾರ್ಥಿಸಿ ಎಂದು ಮನವಿ ಮಾಡಿದ್ದಾರೆ. ಮನಿಷಾ ಕೋಯಿರಾಲ ಅವರ ತಾತ ಬಿಶ್ವೇಶ್ವರ್ ಪ್ರಸಾದ್ ಕೊಯಿರಾಲ ನೇಪಾಳದ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದಾರೆ. ಬಾಲಿವುಡ್ ಮೂಲಕ ಜನಪ್ರಿಯರಾಗಿರುವ ಮನಿಷಾ ಇದೀಗ ನೇಪಾಳ ಪ್ರವಾಹ ಸಂತ್ರಸ್ತರಿಗಾಗಿ ಪ್ರಾರ್ಥಿಸುವುದಾಗಿ ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories