Shravani Subramanya: ಎಲ್ಲರ ಮನ ಕದ್ದ ಕಾಂತಮ್ಮ ದಿಢೀರ್​ ಲೈವ್​ನಲ್ಲಿ ಪ್ರತ್ಯಕ್ಷ: ಗುಡ್​ನ್ಯೂಸ್​ ಕೊಟ್ಟ ನಟಿ

Published : Sep 05, 2026, 06:02 PM IST

'ಶ್ರಾವಣಿ ಸುಬ್ರಹ್ಮಣ್ಯ' ಸೀರಿಯಲ್‌ನ ಕಾಂತಮ್ಮ ಪಾತ್ರದಿಂದ ಜನಪ್ರಿಯರಾದ ನಟಿ ಭವಾನಿ ಪ್ರಕಾಶ್, ಧಾರಾವಾಹಿ ಮುಕ್ತಾಯದ ನಂತರ ಅಭಿಮಾನಿಗಳಿಗೆ ಧನ್ಯವಾದ ಅರ್ಪಿಸಿದ್ದಾರೆ. ಶೀಘ್ರದಲ್ಲೇ ಹೊಸ ಪ್ರಾಜೆಕ್ಟ್‌ನೊಂದಿಗೆ ಮರಳುವುದಾಗಿ ಭರವಸೆ ನೀಡಿದ್ದಾರೆ.

PREV
16
ಶ್ರಾವಣಿ ಸುಬ್ರಹ್ಮಣ್ಯ ಕಾಂತಮ್ಮ

ಕಾಂತಮ್ಮ ಎಂದ್ರೆ ಸಾಕು ಸೀರಿಯಲ್​ ಪ್ರಿಯರ ಗಮನ ಶ್ರಾವಣಿ ಸುಬ್ರಹ್ಮಣ್ಯ ಸೀರಿಯಲ್​ನತ್ತ ಹೋಗುತ್ತದೆ. ವಿಲನ್​ ರೂಪದಲ್ಲಿ ಕಾಣಿಸಿಕೊಂಡ ಕಾಂತಮ್ಮನ ಆ್ಯಕ್ಷನ್​ಗೆ ಮನ ಸೋಲದವರೇ ಇಲ್ಲ.

26
ಎಲ್ಲರ ಮನಸ್ಸು ಕದ್ದ ನಟಿ

ಹೀಗೆ ಎಲ್ಲರ ಮನಸ್ಸನ್ನು ಕದ್ದವರು ನಟಿ ಭವಾನಿ ಪ್ರಕಾಶ್​. ಇದೀಗ Shravani Subramanya Serial ಮುಗಿದಿದೆ. ಈ ಹಿನ್ನೆಲೆಯಲ್ಲಿ, ನಟಿ ಭವಾನಿ ಪ್ರಕಾಶ್​ ಅವರು ಲೈವ್​ಗೆ ಬಂದು ಅಭಿಮಾನಿಗಳ ಜೊತೆ ಮಾತನಾಡಿದ್ದಾರೆ.

36
ವೀಕ್ಷಕರಿಗೆ ಧನ್ಯವಾದ

ಸೀರಿಯಲ್​ ಮುಗಿದಿರೋ ಹಿನ್ನೆಲೆಯಲ್ಲಿ, ಇಷ್ಟು ದಿನ ತಮಗೆ ಪ್ರೀತಿ ತೋರಿದ ವೀಕ್ಷಕರಿಗೆ ಧನ್ಯವಾದ ಸಲ್ಲಿಸಿದ್ದಾರೆ ನಟಿ. ಶೀಘ್ರದಲ್ಲಿಯೇ ಇನ್ನೊಂದು ಪ್ರಾಜೆಕ್ಟ್​ ಮೂಲಕ ಕಾಣಿಸಿಕೊಳ್ಳುವುದಾಗಿ ಹೇಳಿ, ವೀಕ್ಷಕರಿಗೆ ಗುಡ್​ನ್ಯೂಸ್​​ ಕೊಟ್ಟಿದ್ದಾರೆ.

46
ರಂಗಭೂಮಿ ಕಲಾವಿದೆ

ಅಷ್ಟಕ್ಕೂ, ರಂಗಭೂಮಿ, ಸಿನಿಮಾ ಹಾಗೂ ಕಿರುತೆರೆಯಲ್ಲಿ ಗುರುತಿಸಿಕೊಂಡಿರುವ ನಟಿ ಭವಾನಿ ಪ್ರಕಾಶ್. ಕಳೆದ ಎರಡೂವರೆ ದಶಕಗಳಿಂದ ಭವಾನಿ ಪ್ರಕಾಶ್ ನಟನೆ ಮಾಡುತ್ತಿದ್ದಾರೆ. ಸಾಕಷ್ಟು ಪ್ರಭುದ್ಧ ಪಾತ್ರಗಳಲ್ಲಿ ಅಭಿನಯಿಸಿ ಪ್ರೇಕ್ಷಕರ ಮನ ಗೆದ್ದಿದ್ದಾರೆ. ನೀನಾಸಂನಲ್ಲಿ ತರಬೇತಿ ಪಡೆದಿರುವ ಈ ನಟಿ ಎಂತಹದ್ದೇ ಪಾತ್ರಗಳನ್ನು ಕೊಟ್ಟರೂ ಸಲೀಸಾಗಿ ನಿಭಾಯಿಸುವ ಪ್ರತಿಭೆ.

56
ಎಂ.ಎ,ಪದವೀಧರೆ

ಭವಾನಿ ಪ್ರಕಾಶ್ ಮೈಸೂರು ವಿಶ್ವವಿದ್ಯಾಲಯದಲ್ಲಿ ಕನ್ನಡ ಸಾಹಿತ್ಯದಲ್ಲಿ ಎಂಎ ಪದವೀಧರೆ. ಅಲ್ಲದೆ ಥಿಯೇಟರ್ ಆರ್ಟ್ಸ್‌ನಲ್ಲಿ ಡಿಪ್ಲೋಮವನ್ನು ಪಡೆದಿದ್ದಾರೆ. 125ಕ್ಕೂ ಸಿನಿಮಾದಲ್ಲಿ ಮಾಡಿದ್ದಾರೆ. ಧಾರಾವಾಹಿ, ಡಾಕ್ಯೂಮೆಂಟರಿ, ನಾಟಕಗಳು ಅಂತ ಇವರ ಸಾಧನೆ ಒಂದೆರಡಲ್ಲ. ಕನ್ನಡದ ಈ ಅದ್ಭುತ ನಟಿ ಫಿಲ್ಮಿಬೀಟ್‌ ಕನ್ನಡಕ್ಕೆ ನೀಡಿದ ಸಂದರ್ಶನದಲ್ಲಿ ತಮ್ಮ ಹಿನ್ನೆಲೆಯನ್ನು ಅನಾವರಣ ಮಾಡಿದ್ದಾರೆ.

66
ದೊರೆಸಾನಿ ಸೀರಿಯಲ್​

ಹಲವಾರು ಸೀರಿಯಲ್​, ಸಿನಿಮಾಮಾಡಿದ್ದರೂ ನಟಿಗೆ ತುಂಬಾ ತೃಪ್ತಿಕೊಟ್ಟಿರುವ ಸೀರಿಯಲ್ ಅಂದರೆ, ದೊರೆಸಾನಿ ಎಂದು ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. ಈ ಸೀರಿಯಲ್‌ನಲ್ಲಿ ನಾನು ಶೇ.100ರಷ್ಟು ನನ್ನನ್ನು ನಾನು ತೊಡಗಿಸಿಕೊಂಡು ಮಾಡುತ್ತಿದ್ದೆ. ಒಂದು ನಾಲ್ಕೈದು ಸೀರೆಗಳನ್ನು ಇಟ್ಟುಕೊಂಡಿದ್ದೆ ಅಷ್ಟೇ ಎಂದು ಮೆಲುಕು ಹಾಕಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories