Exclusive Interview: 'ಗೋಲ್ಡನ್​​ ಸ್ಟಾರ್'​ ಗಣೇಶ್​ ದಂಪತಿ ಮಕ್ಕಳನ್ನು ಬೆಳೆಸ್ತಿರೋದು ಹೇಗೆ? ಶಿಲ್ಪಾ ಮಾತಿಗೆ ಫ್ಯಾನ್ಸ್​ ಫಿದಾ

Published : Aug 08, 2026, 01:41 PM IST

ನಟ ಗಣೇಶ್ ಮತ್ತು ಶಿಲ್ಪಾ ಗಣೇಶ್ ತಮ್ಮ ಮಕ್ಕಳನ್ನು, ಸ್ವಾವಲಂಬಿಯಾಗಿ ಬೆಳೆಸುತ್ತಿರುವ ಬಗ್ಗೆ ಏಷ್ಯಾನೆಟ್ ಸುವರ್ಣಕ್ಕೆ ನೀಡಿದ ಸಂದರ್ಶನದಲ್ಲಿ ಶಿಲ್ಪಾ ಹಂಚಿಕೊಂಡಿದ್ದಾರೆ. ಮಗನ ಕೋಣೆ, ಟಾಯ್ಲೆಟ್ ಕ್ಲೀನಿಂಗ್ ಸೇರಿದಂತೆ ಎಲ್ಲಾ ಕೆಲಸ ಅವನೇ ಮಾಡಿಕೊಳ್ಳುವಂತೆ ಕಲಿಸುತ್ತಿರುವುದಾಗಿ ಅವರು ತಿಳಿಸಿದ್ದಾರೆ.

PREV
16
ಗೋಲ್ಡನ್​ ಸ್ಟಾರ್​ ದಂಪತಿ

ಚಲನಚಿತ್ರ ಕ್ಷೇತ್ರದಲ್ಲಿ ಬಹು ವರ್ಷಗಳವರೆಗೆ ದೊಡ್ಡ ಇಮೇಜ್​ ಉಳಿಸಿಕೊಳ್ಳುವುದು ಸುಲಭದ ಮಾತಲ್ಲ. ಹತ್ತಾರು ವರ್ಷಗಳವರೆಗೆ ಸಿನಿ ರಸಿಕರ ಮನಸ್ಸಿನಲ್ಲಿ ಅದೇ ಅಭಿಮಾನವನ್ನು ಕಾಪಾಡಿಕೊಂಡು ಬಂದಿರುವ ಕೆಲವೇ ಕೆಲವು ನಟರಿದ್ದಾರೆ. ಇಂಥ ವರ್ಚಸ್ಸು ಉಳಿಸಿಕೊಳ್ಳುವ ಹಿಂದೆ ಅವರ ಪರಿಶ್ರಮ ತುಂಬಾ ಇರುತ್ತದೆ. ಆದರೆ ಅದೇ ಸ್ಟಾರ್​ ನಟರ ಮಕ್ಕಳಾದರೆ ಅವರಿಗೆ ಹುಟ್ಟುತ್ತಲೇ ದೊಡ್ಡ ಇಮೇಜ್​ ಬಂದು ಬಂದುಬಿಡುತ್ತದೆ. ಇದೇ ಕಾರಣಕ್ಕೆ ಹಲವು ನಟ-ನಟಿಯರು ತಮ್ಮ ಮಕ್ಕಳನ್ನು ಸ್ಟಾರ್​ ಮಕ್ಕಳಂತೆಯೇ ಬೆಳೆಸುತ್ತಾರೆ. ಪ್ರತಿಯೊಂದಕ್ಕೂ ಕೆಲಸದವರನ್ನು ನೇಮಿಸಿಕೊಳ್ಳುತ್ತಾರೆ. ಅವರಿಗೆ ವಿಶೇಷ ಸೌಲಭ್ಯವೂ ಇರುತ್ತದೆ. ಆದರೆ ಇವೆಲ್ಲವುಗಳಿಗಿಂತಲೂ ಮಿಗಿಲಾಗಿ ಗೋಲ್ಡನ್​ ಸ್ಟಾರ್​ ಗಣೇಶ್​ ಹಾಗೂ ಶಿಲ್ಪಾ ಗಣೇಶ್​ ಮಕ್ಕಳನ್ನು ಬೆಳೆಸುತ್ತಿರುವ ಪರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

26
ಏಷ್ಯಾನೆಟ್​ ಸುವರ್ಣಕ್ಕೆ ವಿಶೇಷ ಸಂದರ್ಶನ

ಏಷ್ಯಾನೆಟ್​ ಸುವರ್ಣದ (Asianet Suvarna) ಬೆಂಗಳೂರು ಬಜ್​ಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ತಮ್ಮ ಪುತ್ರ ವಿಹಾನ್​ ಕುರಿತು, ಶಿಲ್ಪಾ ಅವರು ಮಾತನಾಡಿದ್ದು, ಅವರ ಮಾತಿಗೆ ಅಭಿಮಾನಿಗಳಿಂದ ತೀವ್ರ ಹರ್ಷ ವ್ಯಕ್ತವಾಗಿದೆ. ಪ್ರತಿಯೊಬ್ಬರೂ ಇದನ್ನು ಅಳವಡಿಸಿಕೊಳ್ಳಬೇಕು ಎನ್ನುತ್ತಿದ್ದಾರೆ. ಅಪ್ಪ-ಅಮ್ಮ ಎಷ್ಟೇ ಶ್ರೀಮಂತರಾದರೂ ತಮ್ಮ ಮಕ್ಕಳನ್ನು ಹೇಗೆ ಬೆಳೆಸಬೇಕು ಎನ್ನುವುದನ್ನು ಇವರಿಂದ ಕಲಿಯಬೇಕು ಎನ್ನುತ್ತಿದ್ದಾರೆ.

36
ಇಬ್ಬರು ಮಕ್ಕಳು

ಅಂದಹಾಗೆ ಗಣೇಶ್​ ಮತ್ತು ಶಿಲ್ಪಾ ದಂಪತಿಗೆ ಇಬ್ಬರು ಮಕ್ಕಳು. ಮಗಳ ಹೆಸರು ಚಾರಿತ್ರ್ಯಾ ಹಾಗೂ ಮಗ ವಿಹಾನ್​. ಮಗಳಿಗೆ ಈಗ 17 ತುಂಬಿದ್ದು, ಮಗ ವಿಹಾನ್​ಗೆ 11 ವರ್ಷ ತುಂಬಿದೆ. ಇದೀಗ ತಮ್ಮ ಪುತ್ರ ವಿಹಾನ್​ನನ್ನೂ ಹೇಗೆ ಬೆಳೆಸುತ್ತಿರುವುದಾಗಿ ಶಿಲ್ಪಾ ಇಲ್ಲಿ ತಿಳಿಸಿದ್ದಾರೆ.

46
ಮಗನಿಗೆ ಎಲ್ಲಾ ಹೇಳಿಕೊಟ್ಟಿದ್ದೇವೆ

ನಿಮ್ಮ ಕೆಲಸವನ್ನು ನೀವೇ ಮಾಡಿಕೊಳ್ಳಬೇಕು. ಏನೇ ಕೆಲಸವಾದರೂ ಅದಕ್ಕೆ ನಾಚಿಕೆ ಪಟ್ಟುಕೊಳ್ಳಬಾರದು ಎಂದೇ ನಾವು ಹೇಳಿಕೊಡುತ್ತಾ ಬಂದಿದ್ದೇವೆ ಎಂದಿದ್ದಾರೆ ಶಿಲ್ಪಾ. ಪ್ರತಿಯೊಬ್ಬರೂ ಅವರಾಗಿಯೇ ದುಡಿಯಬೇಕು. ಅಪ್ಪ-ಅಮ್ಮನ ಮೇಲೆ ಅವಲಂಬಿತ ಆಗಿರಬಾರದು ಎಂದೇ ಹೇಳಿಕೊಟ್ಟಿರುವುದಾಗಿ ತಿಳಿಸಿದ್ದಾರೆ.

56
ಯಾವ ಕೆಲಸವೂ ಸಣ್ಣದಲ್ಲ ಎಂಬ ಪಾಠ

ಮಗ ಇನ್ನೂ ಚಿಕ್ಕವನು. ಅದಕ್ಕಾಗಿಯೇ ಈಗಿನಿಂದಲೇ ಅವನಿಗೆ ಅವನ ಕೆಲಸವನ್ನು ಅವನೇ ಮಾಡಿಕೊಳ್ಳಲು ಹೇಳಿಕೊಡುತ್ತಿದ್ದೇವೆ. ಮೊದಲನೆಯದ್ದಾಗಿ ಅವನ ಕೋಣೆಯನ್ನು ಅವನೇ ಕ್ಲೀನ್​ ಮಾಡಿಕೊಳ್ಳಬೇಕು ಎಂದು ಹೇಳಿದ್ದೇವೆ. ನಿಮ್ಮ ಟಾಯ್ಲೆಟ್​ ನೀವೇ ತೊಳೆದುಕೊಳ್ಳುವುದಕ್ಕೂ ಸಂಕೋಚ ಪಟ್ಟುಕೊಳ್ಳಬಾರದು ಎಂದೂ ಕಲಿಸಿಕೊಟ್ಟಿರುವುದಾಗಿ ಶಿಲ್ಪಾ ಹೇಳಿದ್ದಾರೆ.

66
ಅವನ ಕೆಲಸ ಅವನೇ ಮಾಡಿಕೊಳ್ತಾನೆ

ಎಲ್ಲದಕ್ಕೂ ಕೆಲಸದವರನ್ನು ಕಾಯಬೇಡಿ, ನಿಮ್ಮ ಕೆಲಸ ನೀವೇ ಮಾಡಿಕೊಳ್ಳಿ ಎನ್ನೋದನ್ನು ಕಲಿಸಿದ್ದೇವೆ. ಅವನ ಫ್ರೆಂಡ್ಸ್​ ತುಂಬಾ ಜನ ಬಂದಿದ್ರು. ಆ ಬಳಿಕ ಎಲ್ಲಾ ಹೇಗೆ ಕ್ಲೀನ್​ ಮಾಡಿ ಇಡಬೇಕು ಎನ್ನುವುದನ್ನೂ ಅವನ ಕೈಯಲ್ಲಿಯೇ ಮಾಡಿಸಿದೆ. ಮಗ ಕೂಡ ಎಲ್ಲವನ್ನೂ ಕಲಿಯುತ್ತಿದ್ದಾನೆ. ತನ್ನ ಕೆಲಸ ತಾನೇ ಮಾಡುವುದನ್ನು ಕಲಿತಿದ್ದಾನೆ ಎಂದಿದ್ದಾರೆ. ಅಂದಾಗೆ ಮಗ ವಿಹಾನ್​ ಸಿಂಪಲ್ ಸುನಿ ನಿರ್ದೇಶನದ 'ಸಖತ್' ಚಿತ್ರದಲ್ಲಿ ನಟ ಗಣೇಶ್ ಅವರ ಬಾಲ್ಯದ ಪಾತ್ರದಲ್ಲಿ (ಜ್ಯೂನಿಯರ್ ಬಾಲು) ಅಭಿನಯಿಸುವ ಮೂಲಕ ವಿಹಾನ್ ಗಮನ ಸೆಳೆದಿದ್ದಾನೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories