ಪದೇ ಪದೇ ಪ್ರೆಗ್ನೆನ್ಸಿ ಟೆಸ್ಟ್ , ಸ್ತನ ತಪಾಸಣೆ; ಭಯಾನಕ ಜೈಲು ಅನುಭವ ವಿವರಿಸಿದ ಖ್ಯಾತ ನಟಿ

Published : Apr 25, 2026, 03:40 PM IST

Sandeepa Virk latest news 2026: ಮನಿ ಲಾಂಡರಿಂಗ್ ಪ್ರಕರಣದಲ್ಲಿ 4 ತಿಂಗಳು ತಿಹಾರ್ ಜೈಲಿನಲ್ಲಿದ್ದ ಸಂದೀಪಾ ವಿರ್ಕ್, ಈಗ ಜೈಲು ವ್ಯವಸ್ಥೆಯ ಬಗ್ಗೆ ಭಯಾನಕ ಸತ್ಯಗಳನ್ನ ಹೊರಹಾಕಿದ್ದಾರೆ. ಜೈಲಿನಲ್ಲಿ ಮಹಿಳಾ ಕೈದಿಗಳೊಂದಿಗೆ ನಡೆಸಿಕೊಳ್ಳುವ ರೀತಿ ಅತ್ಯಂತ ಅಮಾನವೀಯವಾಗಿದೆ ಎಂದು ಆರೋಪ ಮಾಡಿದ್ದಾರೆ. 

PREV
17
ಅವಮಾನಕರ ಅನುಭವ

ಕನ್ನಡ ಸೇರಿದಂತೆ ಪಂಜಾಬಿ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ಖ್ಯಾತ ನಟಿ ಮತ್ತು ಉದ್ಯಮಿ ಸಂದೀಪಾ ವಿರ್ಕ್ ಇತ್ತೀಚೆಗೆ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಜೈಲು ವಾಸ ಅನುಭವಿಸಿ ಹೊರಬಂದಿದ್ದಾರೆ. 6 ಕೋಟಿ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ಅವರು, ಜೈಲಿನಲ್ಲಿ ತಮಗಾದ ಅತ್ಯಂತ ಕಠಿಣ ಮತ್ತು ಅವಮಾನಕರ ಅನುಭವಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

27
ಪ್ರಕರಣದ ಹಿನ್ನೆಲೆ

2015ರಲ್ಲಿ ನಟನೆಯನ್ನು ಆರಂಭಿಸಿ ಮಲಯಾಳಂ ಮತ್ತು ಪಂಜಾಬಿ ಚಿತ್ರಗಳಲ್ಲಿ ಗುರುತಿಸಿಕೊಂಡಿದ್ದ ಸಂದೀಪಾ, 2016ರ ಮೊಹಾಲಿಯ ವಂಚನೆ ಪ್ರಕರಣವೊಂದರಲ್ಲಿ ಸಿಲುಕಿಕೊಂಡರು. ಸಿನಿಮಾದಲ್ಲಿ ಪ್ರಮುಖ ಪಾತ್ರ ಕೊಡಿಸುವುದಾಗಿ ನಂಬಿಸಿ ಒಂದು ಕುಟುಂಬಕ್ಕೆ ಸುಮಾರು 6 ಕೋಟಿ ರೂಪಾಯಿ ವಂಚಿಸಿದ ಆರೋಪ ಇವರ ಮೇಲಿತ್ತು. 2025ರಲ್ಲಿ ಜಾರಿ ನಿರ್ದೇಶನಾಲಯ (ED) ಇವರನ್ನು ಬಂಧಿಸಿತ್ತು.

37
ಅವಮಾನಕರ ತಪಾಸಣೆ

ಜೈಲಿಗೆ ಪ್ರವೇಶಿಸುವಾಗ ನಡೆಸುವ 'ತಪಾಸಣೆ' ಪ್ರಕ್ರಿಯೆಯು ಯಾವುದೇ ಮಹಿಳೆಯ ಆತ್ಮಗೌರವವನ್ನು ಕಿತ್ತುಕೊಳ್ಳುವಂತಿರುತ್ತದೆ ಎಂದು ಸಂದೀಪಾ ವಿವರಿಸಿದ್ದಾರೆ. "ಮಹಿಳಾ ಸಿಬ್ಬಂದಿಗಳು ಬಹಳ ಕೆಟ್ಟದಾಗಿ ವರ್ತಿಸುತ್ತಾರೆ. ಎದೆಯ ಭಾಗವನ್ನು (Breasts) ಎತ್ತಿ ನೋಡಿ ಏನಾದರೂ ಅಡಗಿಸಿಟ್ಟಿದ್ದಾರೆಯೇ ಎಂದು ತಪಾಸಣೆ ಮಾಡುತ್ತಾರೆ. ಇದು ಕೇವಲ ತಪಾಸಣೆಯಾಗಿರದೆ, ಒಬ್ಬ ವ್ಯಕ್ತಿಯ ಸ್ವಾಭಿಮಾನವನ್ನು ಹತ್ತಿಕ್ಕುವ ಕ್ರಿಯೆಯಾಗಿದೆ" ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

47
ಆಸ್ಪತ್ರೆಯ ಕಹಿ ಘಟನೆ

ಜೈಲಿಗೆ ಕಳುಹಿಸುವ ಮೊದಲು ಆಸ್ಪತ್ರೆಗೆ ಕರೆದೊಯ್ದಾಗ ಎದುರಿಸಿದ ಮುಜುಗರದ ಬಗ್ಗೆಯೂ ಅವರು ಮಾತನಾಡಿದ್ದಾರೆ. "ಅರ್ಧರಾತ್ರಿಯಲ್ಲಿ ಯುವ ಇಂಟರ್ನ್ ವೈದ್ಯರ ಮುಂದೆ ನನ್ನ ಪ್ರೆಗ್ನೆನ್ಸಿ ಟೆಸ್ಟ್ ಮಾಡಲಾಯಿತು. ಅಲ್ಲಿನವರು ನನ್ನನ್ನು ನೋಡುತ್ತಿದ್ದ ರೀತಿ ಅತ್ಯಂತ ಅಸಹ್ಯವಾಗಿತ್ತು. ಆ ಕ್ಷಣ ನಾನು ನನ್ನ ಇಡೀ ಗೌರವವನ್ನೇ ಕಳೆದುಕೊಂಡಂತೆ ಭಾಸವಾಯಿತು" ಎಂದು ಅವರು ಹೇಳಿದ್ದಾರೆ.

57
ಜೈಲಿನ ಭೀಕರ ಅನುಭವ

ತಿಹಾರ್ ಜೈಲಿನಲ್ಲಿ ಕಳೆದ ನಾಲ್ಕು ತಿಂಗಳುಗಳು ಸಂದೀಪಾ ಪಾಲಿಗೆ ಮರೆಯಲಾಗದ ಕರಾಳ ದಿನಗಳಾಗಿದ್ದವು. "ನಾನು ಪ್ರತಿದಿನ ಸಾವಿಗಾಗಿ ಪ್ರಾರ್ಥಿಸುತ್ತಿದ್ದೆ. ಜೈಲಿಗೆ ದಾಖಲಿಸುವ ಮೊದಲು ನಡೆಸಿದ ಪದೇ ಪದೇ ಪ್ರೆಗ್ನೆನ್ಸಿ ಟೆಸ್ಟ್ ಮತ್ತು ಇತರ ತಪಾಸಣೆಗಳು ನನಗೆ ಅತ್ಯಂತ ಅವಮಾನಕರ ಎನಿಸಿದವು" ಎಂದು ಅವರು ನೋವು ತೋಡಿಕೊಂಡಿದ್ದಾರೆ. ಜೈಲಿನಲ್ಲಿ ತನ್ನನ್ನು ನೋಡಲು ಬರುತ್ತಿದ್ದ ವಯಸ್ಸಾದ ಪೋಷಕರನ್ನು ಕಂಡು ಅವರು ಸತತವಾಗಿ ಕ್ಷಮೆಯಾಚಿಸುತ್ತಿದ್ದರಂತೆ.

67
ಸಮಾಜ ಮತ್ತು ವ್ಯವಸ್ಥೆಯ ಮೇಲೆ ಪ್ರಶ್ನೆ

ತಪ್ಪಿತಸ್ಥರೆಂದು ಸಾಬೀತಾಗುವ ಮೊದಲೇ ಒಬ್ಬ ಆರೋಪಿಯನ್ನು ಅಪರಾಧಿಯಂತೆ ಕಂಡು ಇಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳುವುದು ಎಷ್ಟು ಸರಿ? ಎಂದು ಸಂದೀಪಾ ಪ್ರಶ್ನಿಸಿದ್ದಾರೆ. ಅನೇಕರು ಈ ವಿಷಯಗಳನ್ನು ಗುಟ್ಟಾಗಿಡಲು ಸಲಹೆ ನೀಡಿದ್ದರೂ, ತಾನು ಅನುಭವಿಸಿದ ನರಕಯಾತನೆಯನ್ನು ಜಗತ್ತಿಗೆ ತಿಳಿಸಲು ಅವರು ನಿರ್ಧರಿಸಿದ್ದಾರೆ.

77
ಹೊಸ ಜೀವನದತ್ತ ಹೆಜ್ಜೆ

2025ರ ಅಂತ್ಯಕ್ಕೆ ಜಾಮೀನಿನ ಮೇಲೆ ಹೊರಬಂದ ಸಂದೀಪಾ, ಈಗ ಮತ್ತೆ ತಮ್ಮ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ತಮ್ಮ ಸ್ವಂತ ಸ್ಕಿನ್ ಕೇರ್ ಬ್ರಾಂಡ್ 'ಹೈಬೂಕೇರ್' (HybooCare) ಮೂಲಕ ಉದ್ಯಮಿಯಾಗಿ ಮತ್ತು ಸೋಶಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಕರಾಳ ದಿನಗಳ ಬಗ್ಗೆ ಮುಕ್ತವಾಗಿ ಮಾತನಾಡುವ ಮೂಲಕ ಸಾರ್ವಜನಿಕರಲ್ಲಿ ತಮ್ಮ ಮೇಲಿರುವ ಕಳಂಕವನ್ನು ಅಳಿಸಿಹಾಕಲು ಪ್ರಯತ್ನಿಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories