Akshay Kumar Daughter: 2025 ಅಕ್ಟೋಬರ್ ತಿಂಗಳಿನಲ್ಲಿ Cyber Awareness Month 2025 ಎನ್ನುವ ಪೊಲೀಸ್ ಹೆಡ್‌ಕ್ವಾಟ್ರಸ್ ಕಾರ್ಯಕ್ರಮದಲ್ಲಿ ಭಾಗವಹಿಸಿ, ಮಗಳ ಅಶ್ಲೀಲ ಫೋಟೋಗೆ ಬೇಡಿಕೆ ಇಟ್ಟ ವಿಷಯವನ್ನು ಪ್ರಸ್ತಾಪ ಮಾಡಿದ್ದರು. ಈಗ ಆ ವ್ಯಕ್ತಿಯ ಬಂಧನವಾಗಿದೆ.
“ನನ್ನ ಮಗಳು ವಿಡಿಯೋ ಗೇಮ್ ಆಡುತ್ತಿದ್ದಳು. ಬೇರೆಯವರ ಜೊತೆ ಆಟ ಆಡುವ ವಿಡಿಯೋ ಗೇಮ್‌ಗಳು ಕೂಡ ಇವೆ. ನಾವು ನಮಗೆ ಪರಿಚಯವೇ ಇಲ್ಲದ ವ್ಯಕ್ತಿ ಜೊತೆ ವಿಡಿಯೋ ಗೇಮ್ ಆಡಬಹುದು” ಎಂದು ಅಕ್ಷಯ್ ಕುಮಾರ್ ಹೇಳಿದ್ದರು.
24
ಸೈಬರ್‌ಕ್ರೈಂ ಕೂಡ ದೊಡ್ಡದು
“ಗೇಮ್ ಆಡುವಾಗ ಮೆಸೇಜ್ ಕೂಡ ಮಾಡಬಹುದು. ಗೇಮ್ ಆಡುವಾಗ ನೀವು ಹುಡುಗಿಯೋ? ಹುಡುಗನೋ ಎಂಬ ಪ್ರಶ್ನೆ ಎದ್ದಿದೆ. ಆಗ ನನ್ನ ಮಗಳು ಹುಡುಗಿ ಎಂದಿದ್ದಾಳೆ. ಆಗ ಇನ್ನೋರ್ವ ವ್ಯಕ್ತಿ ನಿನ್ನ ಬೆತ್ತಲೆ ಫೋಟೋ ಕಳಿಸಬಹುದಾ ಎಂದು ಪ್ರಶ್ನೆ ಇಟ್ಟಿದ್ದಾನೆ. ಆಮೇಲೆ ನನ್ನ ಮಗಳು ವಿಡಿಯೋ ಗೇಮ್ ಆಫ್ ಮಾಡಿ, ತಾಯಿಗೆ ಹೇಳಿದ್ದಾಳೆ. ಇದು ಕೂಡ ಸೈಬರ್‌ಕ್ರೈಂ ಭಾಗ ಆಗಿದೆ” ಎಂದು ಅಕ್ಷಯ್ ಕುಮಾರ್ ಹೇಳಿದ್ದಾರೆ.
34
ಸೈಬರ್ ಕ್ರೈಂ ಬಗ್ಗೆ ಶಿಕ್ಷಣ ಕೊಡಿ
ಅಕ್ಷಯ್ ಕುಮಾರ್ ಮಾತನಾಡಿ, “ಬೀದಿಯಲ್ಲಿ ಆಗುವ ಅಪರಾಧಗಳಿಗಿಂತ ಸೈಬರ್ ಕ್ರೈಂ ದೊಡ್ಡದಾಗುತ್ತಿದೆ. ಮಕ್ಕಳಿಗೂ ಕೂಡ ವಾರದಲ್ಲಿ ಒಂದಿನ ಸೈಬರ್ ಕ್ರೈಂಗಳ ಬಗ್ಗೆ ಶಿಕ್ಷಣ ಕೊಡಬೇಕು. ಈ ಬಗ್ಗೆ ಮಹಾರಾಷ್ಟ್ರ ಸರ್ಕಾರ ಗಮನ ಕೊಡಬೇಕು” ಎಂದು ಹೇಳಿದ್ದರು.
ಆ ರೀತಿ ಮೆಸೇಜ್ ಕಳಿಸಿದವರು ಯಾರು? ಎನ್ನೋದನ್ನು ಇನ್ನೂ ಬಹಿರಂಗ ಮಾಡಿಲ್ಲ. ಒಟ್ಟಿನಲ್ಲಿ ಕಳೆದ ಅಕ್ಟೋಬರ್‌ನಲ್ಲಿ ಅಕ್ಷಯ್ ಕುಮಾರ್ ಈ ವಿಷಯವನ್ನು ಪ್ರಸ್ತಾಪ ಮಾಡಿದ್ದು, ಈಗ ಬಂಧನವಾಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.