ಬಾಲಿವುಡ್ ದಂತಕಥೆಗಳಾದ ಅಮಿತಾಭ್ ಬಚ್ಚನ್ ಮತ್ತು ರಿಷಿ ಕಪೂರ್ ಅವರ ಸ್ನೇಹ ಮತ್ತು ಸಿನಿಮಾಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಅವರ ಶಾಲಾ ದಿನಗಳ ಐಡೆಂಟಿಟಿ ಕಾರ್ಡ್‌ಗಳ ಕುರಿತು ಇದು ಬೆಳಕು ಚೆಲ್ಲುತ್ತದೆ.
ಅಮಿತಾಭ್ ಬಚ್ಚನ್ ಮತ್ತು ರಿಷಿ ಕಪೂರ್ ಭಾರತೀಯ ಚಿತ್ರರಂಗದ ಇಬ್ಬರು ದಂತಕಥೆಗಳು, ರಿಷಿ ಕಪೂರ್ ಅವರು ಅಮಿತಾಭ್ಕ್ಕಿಂತ 10 ವರ್ಷ ಚಿಕ್ಕವರಾದರೂ ಇವರಿಬ್ಬರೂ ಆಪ್ತ ಸ್ನೇಹಿತರಾಗಿದ್ದರು. ಈ ಜೋಡಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ತೆರೆಯ ಮೇಲಿನ ಜೋಡಿ ದಶಕಗಳಿಂದ ಪ್ರೇಕ್ಷಕರನ್ನು ರಂಜಿಸಿತು. ರಿಷಿ ಕಪೂರ್ ತಮ್ಮ ಪ್ರಣಯ ಮತ್ತು ತಮಾಷೆಯ ಚಿತ್ರಣಕ್ಕೆ ಹೆಸರುವಾಸಿಯಾಗಿದ್ದರೆ, ಅಮಿತಾಬ್ ಬಚ್ಚನ್ 'ಆಂಗ್ರಿ ಯಂಗ್ ಮ್ಯಾನ್' ಎಂದೇ ಪ್ರಸಿದ್ಧರಾಗಿದ್ದರು. ಹಿಂದಿ ಚಿತ್ರರಂಗಕ್ಕೆ ಅವರಿಬ್ಬರ ಕೊಡುಗೆಯನ್ನು ಯಾವಾಗಲೂ ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು.
26
ಹಿಟ್ ಚಿತ್ರಗಳು
ಕಭಿ ಕಭಿ (1976) ಅಮರ್ ಅಕ್ಬರ್ ಆಂಥೋನಿ (1977) ನಸೀಬ್ (1981) ಕೂಲಿ (1983) ಕೊನೆಯ ಚಿತ್ರ: 102 ನಾಟ್ ಔಟ್ (2018) ಸೇರಿದಂತೆ ವಿವಿಧ ಚಿತ್ರಗಳಲ್ಲಿ ಈ ಜೋಡಿ ಕಾಣಿಸಿಕೊಂಡಿದೆ. ಇಬ್ಬರೂ ಕೊನೆಯ ಬಾರಿಗೆ 2018 ರ '102 ನಾಟ್ ಔಟ್' ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡರು. ಈ ಚಿತ್ರದಲ್ಲಿ, ಅಮಿತಾಭ್ ಬಚ್ಚನ್ 102 ವರ್ಷದ ತಂದೆಯ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದರು ಮತ್ತು ರಿಷಿ ಕಪೂರ್ ಅವರ 75 ವರ್ಷದ ಮಗನ ಪಾತ್ರವನ್ನು ನಿರ್ವಹಿಸಿದರು.
36
ಕ್ಯಾನ್ಸರ್ನಿಂದ ನಿಧನ
ರಿಷಿ ಕಪೂರ್ ಏಪ್ರಿಲ್ 30, 2020 ರಂದು ಲ್ಯುಕೇಮಿಯಾ (ರಕ್ತ ಕ್ಯಾನ್ಸರ್) ನಿಂದ ನಿಧನರಾದರು. ಇವರಿಬ್ಬರೂ ತೆರೆಯ ಮೇಲಿನ ಸ್ನೇಹಿತರಾಗಿರದೇ ಎರಡೂ ಕುಟುಂಬಗಳು ದಶಕಗಳ ಹಿಂದಿನ ಆಳವಾದ ಬಾಂಧವ್ಯವನ್ನು ಹೊಂದಿದ್ದವು. ಅಮಿತಾಭ್ ಬಚ್ಚನ್ ಅವರು ರಿಷಿ ಕಪೂರ್ ಅವರನ್ನು ತಮ್ಮನಂತೆ ನೋಡುತ್ತಿದ್ದರು.
ಈ ಜೋಡಿಯ ಶಾಲೆಯ ಐಡೆಂಟಿಟಿ ಕಾರ್ಡ್ಗಳು ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ. ರಿಷಿ ಕಪೂರ್ ಅವರು 8ನೇ ಕ್ಲಾಸ್ನಲ್ಲಿ ಇದ್ದಾಗಿನ ಐಡೆಂಟಿಟಿ ಕಾರ್ಡ್ ಹಾಗೂ ಅಮಿತಾಭ್ ಬಚ್ಚನ್ ಅವರು 6ನೇ ಕ್ಲಾಸ್ನಲ್ಲಿ ಇರುವಾಗಿನ ಐ ಕಾರ್ಡ್ ಇದಾಗಿದೆ.
56
ಬಾಂಬೆ ಸ್ಕೂಲ್ನಲ್ಲಿ ರಿಷಿ ಕಪೂರ್
ರಿಷಿ ಕಪೂರ್ ಅವರು ಬಾಂಬೆ ಸ್ಕಾಟಿಷ್ ಸ್ಕೂಲ್ನಲ್ಲಿ ಕಲಿಯುತ್ತಿದ್ದರು ಎನ್ನುವುದನ್ನು ಇದು ತೋರಿಸುತ್ತದೆ. 04-09-1952ರಲ್ಲಿ ಹುಟ್ಟಿರುವ ಇವರು 1970-71ರಲ್ಲಿ 8ನೇ ಕ್ಲಾಸ್ನಲ್ಲಿ ಕಲಿಯುತ್ತಿದ್ದು, ಅವರ ರೋಲ್ ನಂಬರ್ 23 ಎನ್ನುವುದನ್ನು ಐ ಕಾರ್ಡ್ನಲ್ಲಿ ನೋಡಬಹುದು.
66
ನೈನಿತಾಲ್ನಲ್ಲಿ ಅಮಿತಾಭ್
ಅದೇ ರೀತಿ, ಅಮಿತಾಭ್ ಬಚ್ಚನ್ ಅವರು 6ನೇ ಕ್ಲಾಸ್ನ ಐ ಕಾರ್ಡ್ನಲ್ಲಿ ಅವರು ನೈನಿತಾಲ್ನ ಶೇರ್ವುಡ್ ಕಾಲೇಜಿನಲ್ಲಿಲ ಕಲಿಯುತ್ತಿದ್ದುದು ಇದರಿಂದ ತಿಳಿಯುತ್ತದೆ. 1965-66ನೇ ಇಸ್ವಿಯ ಕಾರ್ಡ್ ಇದಾಗಿದ್ದು 6ನೇ ಕ್ಲಾಸ್ನಲ್ಲಿ ರೋಲ್ ನಂಬರ್ 7 ಇವರದ್ದಾಗಿತ್ತು ಎನ್ನುವುದು ತಿಳಿಯುತ್ತದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.