ವಿಜಯ್ ಸೂರ್ಯ-ವೈಷ್ಣವಿ ಗೌಡ 'ಜೋಡಿ'ಯಾಗಿ ಗೆದ್ದಿರೋದು ಹೌದು! ಆದ್ರೆ ಈಗ 'ಬೇರೆ-ಬೇರೆ' ಯಾಗಿ ಗೆಲ್ಲೋದು ಯಾರು?

Published : Jul 29, 2026, 07:01 PM IST

ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ.

PREV
17

ಕಿರುತೆರೆ ಸ್ಟಾರ್ ನಟ ವಿಜಯ್ ಸೂರ್ಯ (Vijay Surya) ಹಾಗೂ ಸ್ಟಾರ್ ನಟಿ ವೈಷ್ಣವಿ ಗೌಡ (Vaishnavi Gowda) ಜೋಡಿಯ ಬಗ್ಗೆ ಯಾರಿಗೆ ತಾನೇ ಗೊತ್ತಿಲ್ಲ? ಈ ಇಬ್ಬರೂ ಟಿವಿ ಪ್ರೇಕ್ಷಕರ ಮನೆಮನ ತಲುಪಿರುವ ಮಹಾನ್ ಜೋಡಿ. ಕನ್ನಡದ ಕಿರುತೆರೆಯಲ್ಲಿ ಹಿಂದೆ ಬಂದಿಲ್ಲ, ಮುಂದೆ ಬರುತ್ತೋ ಇಲ್ಲವೋ ಗೊತ್ತಿಲ್ಲ ಎಂಬಷ್ಟರ ಮಟ್ಟಿಗೆ ಸೂಪರ್ ಹಿಟ್ ಆಗಿದ್ದ ಅಗ್ನಿಸಾಕ್ಷಿ ಸೀರಿಯಲ್ ಮುಗಿದ ಬಳಿಕ ಮತ್ತೊಮ್ಮೆ ಈ ಜೋಡಿ ಒಂದಾಗಿಲ್ಲ.

27

ಆದರೆ ಈಗ ನಟ ವಿಜಯ್ ಸೂರ್ಯ ಅವರು ಜೀ ಕನ್ನಡದ 'ಜಗದ್ಧಾತ್ರಿ' ಧಾರಾವಾಹಿ ಮೂಲಕ ಮನೆಮನೆಗೆ ಬರಲು ಸಜ್ಜಾಗಿದ್ದಾರೆ. ವಿಜಯ್ ಸೂರ್ಯಗೆ ನಾಯಕಿಯಾಗಿ ಮೋಕ್ಷಿತಾ ಪೈ ನಟಿಸುತ್ತಿದ್ದಾರೆ.

37

ಜಗದ್ದಾತ್ರಿ (Jagadhatri) ಕನ್ನಡದ ಹೊಸ ಧಾರಾವಾಹಿಯಾಗಿದ್ದು, ಸದ್ಯದಲ್ಲೇ ಜೀ ಕನ್ನಡದಲ್ಲಿ ಪ್ರಸಾರ ಕಾಣಲಿದೆ. ಇದರಲ್ಲಿ ಪ್ರಮುಖ ನಟರಾಗಿ ಮೋಕ್ಷಿತಾ ಪೈ ಮತ್ತು ವಿಜಯ್ ಸೂರ್ಯ ನಟಿಸುತ್ತಿದ್ದಾರೆ. ಇದು ಸಾಂಸಾರಿಕ ಹಾಗೂ ಧೈರ್ಯದ ಕಥೆಯನ್ನು ಹೊಂದಿರುವ ಅಪರೂಪದ ಧಾರಾವಾಹಿಯಾಗಿದ್ದು, ಸೀರಿಯಲ್ ಲೋಕದಲ್ಲಿ ಸಂಚಲನ ಸೃಷ್ಟಿಸಲಿದೆ ಎಂಬ ಟಾಕ್ ಸೃಷ್ಟಿಯಾಗಿದೆ.

47

ಇತ್ತ, ಸನ್ ಉದಯ (Sun Uadaya) ವಾಹಿನಿಯಲ್ಲಿ 'ಗೆಳತಿ ಗಾಯತ್ರಿ' ಸೀರಿಯಲ್ ಮೂಲಕ ವೈಷ್ಣವಿ ಗೌಡ ಮಿಂಚಲಿದ್ದಾರೆ. ಈ ಸೀರಿಯಲ್ 17 ಆಗಸ್ಟ್ 2026 ರಂದು ತನ್ನ ಪ್ರಸಾರ ಆರಂಭಿಸಲಿದೆ. ಈ ಧಾರಾವಾಹಿಯಲ್ಲಿ ನಟಿ ವೈಷ್ಣವಿ ಗೌಡ ಹಾಗೂ ಕೃತಿಕಾ ರವೀಂದ್ರ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಈ ಸೀರಿಯಲ್ ಕೂಡ ಬಹಳಷ್ಟು ನಿರೀಕ್ಷೆ ಹುಟ್ಟಿಸಿದೆ.

57

ಕಾರಣ, 'ರಾಧಾ ಕಲ್ಯಾಣ' ಸೀರಿಯಲ್ ಮೂಲಕ ಜೀ ಕನ್ನಡ ವಾಹಿನಿಯಲ್ಲಿ ದಾಖಲೆ ಟಿಆರ್‌ಪಿ ಹಾಗೂ ಜನಪ್ರಿಯತೆ ಸೃಷ್ಟಿಸಿದ್ದ ಧಾರಾವಾಹಿಯಲ್ಲಿ ಇದೇ ನಟಿ ಕೃತಿಕಾ ರವೀಂದ್ರ ಅವರು ಮಿಂಚಿದ್ದರು. ಇನ್ನು, ವೈಷ್ಣವಿ ಗೌಡ ನಟನೆಯ 'ಅಗ್ನಿಸಾಕ್ಷಿ' ಹಾಗೂ 'ಸೀತಾ ರಾಮ' ಧಾರಾವಾಹಿ ಬಗ್ಗೆಯಂತೂ ಯಾರಿಗೂ ಮತ್ತೆ ನೆನಪಿಸಬೇಕಾಗಿಲ್ಲ ಎನ್ನಬಹುದು.

67

ಸದ್ಯಕ್ಕೆ, ಸೀರಿಯಲ್ ಪ್ರಿಯರಲ್ಲಿ ಹುಟ್ಟಿರು ಕುತೂಹಲ ಎಂದರೆ, ಅದು ವೈಷ್ಣವಿ ಗೌಡ ನಟನೆಯ 'ಗೆಳತಿ ಗಾಯತ್ರಿ' ಗೆಲ್ಲುತ್ತೋ ಅಥವಾ ವಿಜಯ ಸೂರ್ಯ ನಟನೆಯ 'ಜಗದ್ದಾತ್ರಿ' ಸೀರಿಯಲ್ಲೋ ಎಂಬುದು. ಈ ಬಗ್ಗೆ ಹಲವರಲ್ಲಿ ಮಾತುಕತೆಯ ಹಂತವನ್ನೂ ಮೀರಿ ಡಿಬೇಟ್ ಶುರುವಾಗಿದೆ. ಕೆಲವರು ವಿಜಯ್ ಸೂರ್ಯ ಗೆಲ್ಲೋದು ಎಂದರೆ ಇನ್ನೂ ಕೆಲವರು ವೈಷ್ಣವಿ ಗೌಡ ಪರ ಬ್ಯಾಟ್ ಬೋಸುತ್ತಿದ್ದಾರೆ. ಆದರೆ, ನಿಖರವಾಗಿ ಯಾವ ಸೀರಿಯಲ್ ಗೆಲ್ಲುತ್ತೆ? ವಿಜಯ್-ವೈಷ್ಣವಿ ಅವರಿಬ್ಬರಲ್ಲಿ ಗೆಲ್ಲೋರು ಯಾರು ಎಂಬುದನ್ನು ಕಾಲವೇ ನಿರ್ಧರಿಸಬೇಕಷ್ಟೇ!

77

ಸದ್ಯಕ್ಕೆ ಈ ಎರಡೂ ಸೀರಿಯಲ್‌ಗಳ ಬಗ್ಗೆ ವೀಕ್ಷಕರ ವಲಯದಲ್ಲಿ ಸಾಕಷ್ಟು ನಿರೀಕ್ಷೆಗಳು ಮನೆ ಮಾಡಿವೆ. ಆಗಸ್ಟ್ 17ಕ್ಕೆ ಗೆಳತಿ ಗಾಯತ್ರಿ ಮನೆಮನೆಗಳ ಟಿವಿಯಲ್ಲಿ ದರ್ಶನ ನೀಡಲಿದ್ದಾಳೆ. ಆದರೆ, ಜಗದ್ದಾತ್ರಿ ಧಾರಾವಾಹಿ ಮೂಲಕ ವಿಜಯ್ ಸೂರ್ಯ 'ದರ್ಶನ' ಯಾವಾಗ ಅನ್ನೋದು ಮಾತ್ರ ಇನ್ನೂ ಗೊತ್ತಿಲ್ಲ. ಆದರೆ, ಈಗಾಗಲೇ ಶೂಟಿಂಗ್ ಹಂತದಲ್ಲಿರುವ ಈ ಸಿನಿಮಾ ಶೀಘ್ರದಲ್ಲೇ ಪ್ರಸಾರ ಪ್ರಾರಂಭಿಸಲಿದೆ ಎನ್ನೋದಂತೂ ಸತ್ಯ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories