ಬೆಟ್ಟ ಗುಡ್ಡ ನುಂಗಿಲ್ಲಾರಿ, ಮಗು ಹೆತ್ತಿದ್ದೇನಷ್ಟೇ: ಬಾಡಿ ಶೇಮಿಂಗ್​ಗೆ ಗೋಲ್ಡನ್​ ಸ್ಟಾರ್​ ನಾಯಕಿ ಖಡಕ್​ ರಿಪ್ಲೈ

Published : Apr 19, 2026, 11:52 AM IST

ನಟಿ ಪತ್ರಲೇಖಾ ಅವರು ಮಗುವಿನ ಜನನದ ನಂತರ ದಪ್ಪ ಆಗಿದ್ದಕ್ಕೆ ನೆಟ್ಟಿಗರಿಂದ ಬಾಡಿ ಶೇಮಿಂಗ್​ಗೆ ಒಳಗಾಗಿದ್ದಾರೆ. ಇದಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಖಾರವಾಗಿ ಪ್ರತಿಕ್ರಿಯಿಸಿರುವ ಅವರು, ಇದು ಗರ್ಭಧಾರಣೆಯ ನೈಸರ್ಗಿಕ ಪ್ರಕ್ರಿಯೆ, ನಾನು ಬೆಟ್ಟ-ಗುಡ್ಡ ನುಂಗಿಲ್ಲ ಎಂದು ಹೇಳಿ ತರಾಟೆಗೆ ತೆಗೆದುಕೊಂಡಿದ್ದಾರೆ.

PREV
16
ವಿಕೃತಿ ಮೆರೆಯುವ ನೆಟ್ಟಿಗರು

ಕೆಲವರಿಗೆ ಒಂದು ಕೆಟ್ಟ ಚಾಳಿ ಇರುತ್ತದೆ. ಅದೇನೆಂದರೆ ಸ್ವಲ್ಪ ದಪ್ಪನೆಯ ಹೆಣ್ಣು ಅದರಲ್ಲಿಯೂ ಸಿನಿಮಾ ಸೆಲೆಬ್ರಿಟಿಗಳನ್ನು ನೋಡಿದಾಕ್ಷಣ ಬಾಯಿಗೆ ಬಂದ ಹಾಗೆ ಮಾತನಾಡುವುದು. ತಾವು ಹೇಗಿದ್ದೇವೆ, ತಮ್ಮ ಮನೆಯ ಹೆಣ್ಣುಮಕ್ಕಳು ಹೇಗಿದ್ದಾರೆ ಎನ್ನುವುದು ಅವರಿಗೆ ಬೇಕಿರುವುದಿಲ್ಲ. ಆದರೆ ಬೇರೆಯ ಹೆಣ್ಣುಮಕ್ಕಳು ತೆಳ್ಳಗೆ, ಬೆಳ್ಳಗೆ ಇರಬೇಕು ಎಂದು ಬಯಸುವವರು ಇದ್ದಾರೆ. ಇದು ಪುರುಷರಿಗೆ ಮಾತ್ರವಲ್ಲದೇ ಕೆಲವು ಹೆಣ್ಣುಮಕ್ಕಳ ಮನಸ್ಥಿತಿಯೂ ಹೀಗೆಯೇ ಇರುತ್ತದೆ. ಇದೇ ಕಾರಣಕ್ಕೆ ಸ್ವಲ್ಪ ದಪ್ಪ ಇರುವ ಸಿನಿಮಾ ತಾರೆಯರನ್ನು ನೋಡಿದಾಕ್ಷಣ ಟ್ರೋಲ್​ ಮಾಡಿ ವಿಕೃತ ಖುಷಿ ಪಡುತ್ತಾರೆ.

26
ಗೋಲ್ಡನ್​ ಸ್ಟಾರ್​ ನಟಿ

ಅದೇ ರೀತಿ ಇದೀಗ, ನಟಿ-ನಿರ್ಮಾಪಕಿ ಪತ್ರಲೇಖಾ ಅವರಿಗೂ ಇದೇ ಅನುಭವವಾಗಿದೆ. (ಗೋಲ್ಡನ್​ ಸ್ಟಾರ್​ ಗಣೇಶ್​ ಅವರ ಜೊತೆ ಇವರು Where is my ಕನ್ನಡಕ ಸಿನಿಮಾದಲ್ಲಿ ನಟಿಸಿದ್ದರು) ಸಾಮಾನ್ಯವಾಗಿ ಹೆಣ್ಣುಮಕ್ಕಳು ಮಗುವನ್ನು ಹೆತ್ತ ಬಳಿಕ ದಪ್ಪ ಆಗುತ್ತಾರೆ. ಹಾರ್ಮೋನಲ್​ ಚೇಂಜಸ್​ನಿಂದ ಇದು ಸಹಜ ಪ್ರಕ್ರಿಯೆ. ಸಿನಿಮಾ ತಾರೆಯರಿಗೆ ತೆಳ್ಳನೆಯ ದೇಹವೇ ಬಂಡವಾಳ ಆಗಿರುವ ಕಾರಣ, ಮಗು ಹುಟ್ಟಿದ ಬಳಿಕವೂ ಇನ್ನಿಲ್ಲದಂತೆ ಕಸರತ್ತು ಮಾಡಿ, ಯೋಗ, ಧ್ಯಾನ, ವ್ಯಾಯಾಮ, ಡಯೆಟ್ ಮಾಡಿಕೊಂಡು ದೇಹವನ್ನು ಮೊದಲಿನ ಸ್ಥಿತಿಗೆ ತರಿಸಿಕೊಳ್ಳುತ್ತಾರೆ. ಆದರೆ ಎಲ್ಲರಿಗೂ ಇದು ಸಾಧ್ಯವಾಗದ ಮಾತು.

36
ನಟಿಗೆ ಬಾಡಿ ಶೇಮಿಂಗ್​

ಅದೇ ರೀತಿ ನಟಿ ಪತ್ರಲೇಖಾ ಅವರು ಮಗುವನ್ನು ಹೆತ್ತ ಬಳಿಕ ದಪ್ಪ ಆಗಿರುವುದಕ್ಕೆ ಅತ್ಯಂತ ಕೆಟ್ಟ ರೀತಿಯಲ್ಲಿ ಕಮೆಂಟ್ಸ್​ ಬರುತ್ತಿವೆ. ನಟಿ ಕಾರಿನಿಂದ ಇಳಿಯುತ್ತಿರುವ ವಿಡಿಯೋ ಶೇರ್​ ಮಾಡಿ ಬಾಡಿ ಶೇಮಿಂಗ್ ಮಾಡಲಾಗುತ್ತಿದೆ. ಇಂಥ ಕಮೆಂಟ್​ ಮಾಡುವವರು ಮುಟ್ಟಿಕೊಂಡು ನೋಡಿಕೊಳ್ಳುವ ರೀತಿಯಲ್ಲಿ ನಟಿ ಈಗ ಸೋಷಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಹಾಕಿದ್ದಾರೆ.

46
ಗರ್ಭಧಾರಣೆ ನೈಸರ್ಗಿಕ ಪ್ರಕ್ರಿಯೆ

ನಟಿ, ನನಗೇನಾಗಿದೆ, ನಾನು ಈಗಷ್ಟೇ ಜನ್ಮ ನೀಡಿದ್ದೇನೆ. ಹೌದು, ನಾನು ತೂಕ ಹೆಚ್ಚಿಸಿಕೊಂಡಿದ್ದೇನೆ. ಅದು ನಿಮ್ಮೆಲ್ಲರಿಗೂ ಅಸಾಮಾನ್ಯವಾಗಿ ಕಾಣಿಸಬಹುದು. ತೂಕ ಹೆಚ್ಚಾಗುವುದು ಅತಿಯಾಗಿ ತಿನ್ನುವುದರಿಂದಲ್ಲ, ಬದಲಾಗಿ ಗರ್ಭಧಾರಣೆಯ ನೈಸರ್ಗಿಕ ಪ್ರಕ್ರಿಯೆಯಿಂದ. ಇದನ್ನು ನೀವು ಒಪ್ಪಿಕೊಳ್ಳಬೇಕು ಎಂದಿದ್ದಾರೆ.

56
ಗುಡ್ಡ-ಬೆಟ್ಟ ನುಂಗಲಿಲ್ಲ

ದೇವರ ಸಲುವಾಗಿ, ದಯವಿಟ್ಟು ಸ್ವಲ್ಪ ದಯೆಯಿಂದ ಇರಲು ಕಲಿಯಿರಿ ಎಂದಿರುವ ನಟಿ, ನಾನು ಬೆಟ್ಟ-ಗುಡ್ಡ ನುಂಗಲಿಲ್ಲ. ಮಗುವನ್ನು ಹೆತ್ತಿದ್ದೇನೆ ಅಷ್ಟೇ. ಇದರ ಜೊತೆ ಎರಡು ಚಲನಚಿತ್ರಗಳನ್ನು ಸಹ ನಿರ್ಮಿಸಿದ್ದೇನೆ, ಅವು ಸುಲಭದ ಕೆಲಸಗಳಲ್ಲ. ಅದರ ಬಗ್ಗೆ ಮಾತನಾಡಿ, ನಾನು ಸ್ಲಿಮ್​ ಆಗಲು ಸಾಧ್ಯವಾಗಿದ್ದರೆ, ಅದನ್ನು ಮಾಡುತ್ತಿದ್ದೆ. ಆದರೆ ಗರ್ಭಧಾರಣೆಯಿಂದ ದೇಹದ ಪ್ರಕೃತಿ ಹೀಗಾಗಿದೆ ಎಂದಿದ್ದಾರೆ ನಟಿ.

66
ಯಾರೀ ಪತ್ರಲೇಖಾ?

ಈಕೆ ನಟ ರಾಜ್​ಕುಮಾರ್ ಅವರ ಪತ್ನಿ. ಖುದ್ದು ನಟಿ ಹಾಗೂ ನಿರ್ಮಾಪಕಿ. ನವೆಂಬರ್ 15, 2025 ರಂದು ಪತ್ರಲೇಖಾ ಮತ್ತು ರಾಜ್‌ಕುಮಾರ್ ರಾವ್ ತಮ್ಮ ಮೊದಲ ಮಗುವಾದ ಹೆಣ್ಣು ಮಗುವನ್ನು ಪಡೆದರು. ಅವರು ಆಕೆಗೆ ಪಾರ್ವತಿ ಪಾಲ್ ರಾವ್ ಎಂದು ರಾವ್ ಅವರ ದಿವಂಗತ ತಾಯಿಯ ಹೆಸರನ್ನು ಇಟ್ಟರು. ರಾಜ್‌ಕುಮಾರ್ ಈ ಹಿಂದೆ ಜಾಹೀರಾತಿನಲ್ಲಿ ಪತ್ರಲೇಖಾ ಅವರನ್ನು ನೋಡಿದ್ದನ್ನು ನೆನಪಿಸಿಕೊಂಡರು, ಅವರು ತಕ್ಷಣವೇ ಅವರತ್ತ ಆಕರ್ಷಿತರಾದರು ಮತ್ತು ಒಂದು ದಿನ ಅವರನ್ನು ಭೇಟಿಯಾಗುವ ಆಶಯ ವ್ಯಕ್ತಪಡಿಸಿದರು. ಅಂತಿಮವಾಗಿ, ಅವರು ಹನ್ಸಲ್ ಮೆಹ್ತಾ ನಿರ್ದೇಶನದ ಸಿಟಿ ಲೈಟ್ಸ್ (2014) ಚಿತ್ರದಲ್ಲಿ ಕೆಲಸ ಮಾಡುವಾಗ ಭೇಟಿಯಾದರು, ಅಲ್ಲಿ ಅವರ ವೃತ್ತಿಪರ ಸಹಯೋಗವು ಕ್ರಮೇಣ ಸಂಬಂಧವಾಗಿ ಅರಳಿತು. ಹಲವಾರು ವರ್ಷಗಳ ನಂತರ, ರಾಜ್‌ಕುಮಾರ್ ಅಕ್ಟೋಬರ್ 2021 ರಲ್ಲಿ ಪತ್ರಲೇಖಾ ಅವರನ್ನು ಪ್ರಪೋಸ್ ಮಾಡಿದರು. ಮುಂದಿನ ತಿಂಗಳು, ನವೆಂಬರ್ 2021 ರಲ್ಲಿ, ಆಪ್ತ ಸ್ನೇಹಿತರು ಮತ್ತು ಕುಟುಂಬದವರು ಭಾಗವಹಿಸಿದ ಖಾಸಗಿ ಸಮಾರಂಭದಲ್ಲಿ ದಂಪತಿಗಳು ವಿವಾಹವಾದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories