ಶಾರುಖ್​ ಖಾನ್​ Vs ಸೆ*ಕ್ಸ್: ಬಾಲಿವುಡ್​ ಹಸಿಬಿಸಿ ರಾಣಿ ನೇಹಾ ಧೂಪಿಯಾ ಮಾತಿಗೆ ಬಿ-ಟೌನ್​ ಕಿಡಿ

Published : Apr 16, 2026, 11:02 PM IST

ನಟಿ ನೇಹಾ ಧೂಪಿಯಾ ಅವರು 'ಬಾಲಿವುಡ್‌ನಲ್ಲಿ ಶಾರುಖ್ ಖಾನ್ ಅಥವಾ ಸೆ*ಕ್ಸ್ ಮಾತ್ರ ಮಾರಾಟವಾಗುತ್ತದೆ' ಎಂದು ನೀಡಿದ್ದ ಹಳೆಯ ಹೇಳಿಕೆಯೊಂದು ಮತ್ತೆ ವೈರಲ್ ಆಗಿದೆ. 'ಜೂಲಿ' ಚಿತ್ರದ ಮೂಲಕ ಖ್ಯಾತಿ ಪಡೆದಿದ್ದ ನೇಹಾ, ಶಾರುಖ್‌ ಮೇಲಿನ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

PREV
16
ಕಿಂಗ್​ ಖಾನ್​

ಕಿಂಗ್​ ಖಾನ್​ ಎಂದೇ ಫೇಮಸ್​ ಆಗಿರೋ ಶಾರುಖ್​ ಖಾನ್​ ಈಚೆಗೆ ಒಂದರ ಮೇಲೊಂದು ಹಿಟ್​ ಚಿತ್ರಗಳನ್ನು ನೀಡಿ ಮಕಾಡೆ ಮಲಗಿದ್ದ ಬಾಲಿವುಡ್​ಗೆ ಮರುಜೀವ ಕೊಟ್ಟಿದ್ದರು. ಹಿಂದೊಮ್ಮೆ ಐದಾರು ವರ್ಷಗಳವರೆಗೆ ಫ್ಲಾಪ್​​ ಮೇಲೆ ಫ್ಲಾಪ್​ ಚಿತ್ರ ಕೊಟ್ಟಿದ್ದ ನಟ ಕೊನೆಗೆ ಅಂತೂ ಬ್ಲಾಕ್​ಬಸ್ಟರ್​ ಸಿನಿಮಾ ಕೊಟ್ಟರು. ಪಾಕಿಸ್ತಾನದ ಮೇಲೆ ತಮ್ಮ ಪ್ರೀತಿಯನ್ನು ಆಗಾಗ್ಗೆ ತೋರಿಸುತ್ತಾ ಟ್ರೋಲ್​ ಆಗ್ತಿರೋ, ಈ ಬಾಲಿವುಡ್​ ಬಾದ್​ಶಾ ಬಗ್ಗೆ ಹಸಿಬಿಸಿ ದೃಶ್ಯಗಳಿಂದಲೇ ಫೇಮಸ್​ ಆಗಿರೋ ನಟಿ ನೇಹಾ ಧೂಪಿಕಾ ನೀಡಿರುವ ಹೇಳಿಕೆಯೊಂದು ಇದೀಗ ಮತ್ತೊಮ್ಮೆ ವೈರಲ್​ ಆಗುತ್ತಿದೆ.

26
ಸೆ*ಕ್ಸ್​ ಬಾಂಬ್​

ಸೆ*ಕ್ಸ್​ ಬಾಂಬ್​ಗಳೆಂದೇ ಹೇಳಲಾಗುವ ನಟಿಯರಾದ ಮಲ್ಲಿಕಾ ಶೆರಾವತ್, ಬಿಪಾಶಾ ಬಸು (Bipasha Basu) ಅವರನ್ನು ಹಿಂದೆ ಹಾಕಲು ಯಾವ ರೀತಿಯಾದರೂ ದೇಹ ಪ್ರದರ್ಶನಕ್ಕೆ ಸಿದ್ಧ ಎನ್ನುವುದು ನೇಹಾ ಧೂಪಿಯಾ ಮಾತು. ಅಷ್ಟಕ್ಕೂ ಈಕೆ ಫೇಮಸ್​ ಆಗಿದ್ದು, 2004ರಲ್ಲಿ ಭಾರಿ ಚರ್ಚೆಗೆ ಒಳಗಾಗಿದ್ದ ಬಾಲಿವುಡ್​ನ 'ಜೂಲಿ' (Julie) ಶ್ರೀಮಂತ ಉದ್ಯಮಿಯೊಬ್ಬ ವೇಶ್ಯೆಯ ಜೊತೆಗೆ ಪ್ರೀತಿಗೆ ಬಿದ್ದು ಆಕೆಯನ್ನು ಮದುವೆಯಾಗಲು ಹಂಬಲಿಸುವ ಕಥೆಯುಳ್ಳ ಚಿತ್ರವಿದು. ಈ ಚಿತ್ರದಲ್ಲಿ ವೇಶ್ಯೆ ಜೂಲಿಯ ಪಾತ್ರದಲ್ಲಿ ನಟಿಸಿದ್ದಾಕೆ ನೇಹಾ ಧೂಪಿಯಾ.

36
ಲೈಂಗಿ*ಕತೆಯ ಟ್ಯಾಗ್

ಬಹುತೇಕ ನಗ್ನ ರೀತಿಯಲ್ಲಿ ಈಕೆಯನ್ನು ಈ ಚಿತ್ರದಲ್ಲಿ ಚಿತ್ರೀಕರಿಸಲಾಗಿದೆ. ಬ್ಯಾಕ್​ಲೆಸ್​ ಡ್ರೆಸ್​ನಲ್ಲಿ ಈಕೆ ಕಾಣಿಸಿಕೊಂಡಿದ್ದರಿಂದ ಹಾಗೂ ಹಸಿಬಿಸಿ ದೃಶ್ಯಗಳು ಇದ್ದುದರಿಂದ ಆಗಿನ ಸಂದರ್ಭದಲ್ಲಿ ನೇಹಾ ಬಹಳ ಚರ್ಚೆಗೆ ಕೂಡ ಒಳಗಾಗಿದ್ದರು. ಈ ಬಗ್ಗೆ ನೇಹಾ ಸ್ವಲ್ಪವೂ ಬೇಸರ ಪಟ್ಟುಕೊಂಡಿರಲಿಲ್ಲ. 'ಜೂಲಿ ಚಿತ್ರದಲ್ಲಿ ಪ್ರಣಯದ ದೃಶ್ಯಗಳಿವೆ, ನನ್ನ ನಗ್ನ ಬೆನ್ನು ತೋರಿಸಲಾಗಿದೆ. ನನಗೆ ಲೈಂಗಿ*ಕತೆಯ ಟ್ಯಾಗ್ ಕೊಡಲಾಗಿದೆ. ಇದಕ್ಕೆ ನನಗೆ ಸ್ವಲ್ಪವೂ ಬೇಜಾರಿಲ್ಲ ಎಂದಿದ್ದರು.

46
ಶಾರುಖ್​ ಮೇಲೆ ಪ್ರೀತಿ

ಇದೀಗ ನಟಿ ಶಾರುಖ್​ ಮೇಲೆ ಪ್ರೀತಿ ಮೆರೆದಿದ್ದಾರೆ. ಬಾಲಿವುಡ್​ ಚಿತ್ರಗಳು ಸಕ್ಸಸ್​ ಆಗಬೇಕಾದರೆ ಒಂದೋ ಶಾರುಖ್​ ಖಾನ್​ ಇರಬೇಕಂತೆ, ಇಲ್ಲವೇ ಸೆ*ಕ್ಸ್ ಇರಬೇಕು ಎನ್ನೋದು ಈಕೆಯ ಹೇಳಿಕೆ. 'ಈಗಿನ ಕಾಲದ ಸಿನಿಮಾಗಳಲ್ಲಿ ಶಾರುಖ್​ ಖಾನ್​ ಇರಬೇಕು ಇಲ್ಲವೇ ಚಿತ್ರದಲ್ಲಿ ಲೈಂಗಿ*ಕತೆ ಇರಬೇಕು. ಅದಕ್ಕಾಗಿ ನಾನು ಬೇಕಾದರೆ ಮುಂದಿನ 5 ಸಿನಿಮಾಗಳಲ್ಲಿ ಶಾರುಖ್​ಗಾಗಿ ಯಾವ ರೀತಿ ಡ್ರೆಸ್​ ಹಾಕಲೂ ರೆಡಿ ಇದ್ದೇನೆ ಎಂದಿದ್ದರು ನಟಿ.

56
ಶಾರುಖ್ ಖಾನ್ ಅರೆನಗ್ನ ಫೋಟೋ

ಪಠಾಣ್ ಸಿನಿಮಾದ ಶಾರುಖ್ ಖಾನ್ ಅವರ ಅರೆನಗ್ನ ದೇಹದ ಫೋಟೋ ಹಂಚಿಕೊಂಡಿದ್ದ ನೇಹಾ ಧೂಪಿಯಾ ಅವರು, 'ಶಾರುಖ್ ಖಾನ್ ಅವರೇ, ನಾವು ನಿಮ್ಮ ಮೇಲೆ ಇಟ್ಟಿರುವ ಪ್ರೀತಿಯನ್ನು ಬರಿಯ ಮಾತಿನಲ್ಲಿ ಹೇಳುವುದು ತೀರಾ ಕಷ್ಟ. ದೀಪಿಕಾ ಪಡುಕೋಣೆ (Deepika Padukone) ಅವರೇ... ನಿಮ್ಮ ತಂತ್ರ ಮತ್ತು ಕಾಂತಿಯಿಂದ ನೀವು ಪಠಾಣ್​ ಚಿತ್ರಕ್ಕೆ ಕಿಚ್ಚು ಹಚ್ಚಿದ್ದೀರಿ ಎಂದಿದ್ದರು.

66
ನಟರು ಕಿಡಿಕಿಡಿ

ಶಾರುಖ್​ ಇಲ್ಲದಿದ್ದರೆ ಚಿತ್ರ ಓಡುವುದಿಲ್ಲ ಎನ್ನುವ ಅವರ ಮಾತಿಗೆ ಹಲವಾರು ನಟರು ಕಿಡಿ ಕಾರಿದ್ದಾರೆ. ನೀವು ಯಾವ ಕಾಲದಲ್ಲಿ ಇದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಖಾನ್​ ಸಾಹೇಬ್ರು ಬಾಲಿವುಡ್​ಗೆ ಅನಿವಾರ್ಯವಲ್ಲ, ಬೇಕಾದಷ್ಟು ಒಳ್ಳೆಯ ನಟರು, ದೇಶಭಕ್ತರು ಬಾಲಿವುಡ್​ನಲ್ಲಿ ಇದ್ದಾರೆ. ದೇಶಪ್ರೇಮದ ವಿಷ್ಯ ಬಂದಾಗ ಬಾಯಿಮುಚ್ಚಿಕೊಂಡಿರುವ ಇಂಥ ನಟರು ನಿಮಗೇ ಪ್ರೀತಿ ಎಂದು ಕಿಡಿ ಕಾರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories