ಮೈದುನನ ಜೊತೆ 14 ಸಿನಿಮಾ ನಟಿಸಿ ಹಿಟ್ ಆದ ನಟಿ; ಗಂಡನೊಂದಿಗೆ ಒಂದು ಮೂವಿ ಸಹ ಮಾಡಲಿಲ್ಲ

Published : Apr 16, 2026, 08:14 PM IST

ಖ್ಯಾತ ನಟಿ ತಮ್ಮ ವೃತ್ತಿಜೀವನದಲ್ಲಿ ಮೈದುನನ ಜೊತೆ 14 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆರೆಯ ಮೇಲೆ ಸೂಪರ್ ಹಿಟ್ ಜೋಡಿಯಾಗಿದ್ದ ಇವರು, ನಿಜ ಜೀವನದಲ್ಲಿ ಅತ್ತಿಗೆ-ಮೈದುನ ಸಂಬಂಧ ಹೊಂದಿದ್ದರು. ಸದ್ಯ ಈ ನಟಿ ಇಬ್ಬರು ಮಕ್ಕಳು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. 

PREV
15
ಮೈದುನನ ಜೊತೆಯಲ್ಲಿ 14 ಸಿನಿಮಾಗಳಲ್ಲಿ ನಟನೆ

ತೆರೆ ಮೇಲೆ ಕಾಣಿಸಿಕೊಳ್ಳುವ ಜೋಡಿಗಳು ನಿಜ ಜೀವನದಲ್ಲಿ ಒಂದಾದ್ರೆ ಚೆಂದ ಎಂದು ಅಭಿಮಾನಿಗಳು ಬಯಸುತ್ತಾರೆ. ಕೆಲವು ಜೋಡಿಗಳು ಜೊತೆಯಾಗಿ ಸೂಪರ್ ಹಿಟ್ ಸಿನಿಮಾಗಳನ್ನು ನೀಡಿವೆ. ಇಂದು ನಾವು ಹೇಳುತ್ತಿರುವ ಖ್ಯಾತ ನಟಿ ಬಾಲ ಕಲಾವಿದೆಯಾಗಿ ಸಿನಿಮಾ ಅಂಗಳಕ್ಕೆ ಬಂದವರು. ಮೈದುನನ ಜೊತೆಯಲ್ಲಿ 14 ಸಿನಿಮಾಗಳಲ್ಲಿ ನಟಿಸಿದ್ದಾರೆ. ತೆರೆ ಮೇಲಿನ ಇವರ ಕೆಮಿಸ್ಟ್ರಿ ನೋಡಿ ಫ್ಯಾನ್ಸ್ ಫಿದಾ ಆಗಿದ್ದರು.

25
ಖ್ತಾತ ನಿರ್ಮಾಪಕನ ಮಡದಿಯಾಗಿರುವ ಸ್ಟಾರ್ ನಟಿ

250 ರಿಂದ 300 ಸಿನಿಮಾಗಳಲ್ಲಿ ನಟಿಸಿರುವ ನಟಿ ಇಂದು ನಮ್ಮೊಂದಿಗಿಲ್ಲ. ಸದ್ಯ ಇವರಿಬ್ಬರ ಮಕ್ಕಳು ಒಬ್ರು ಸ್ಟಾರ್ ನಟಿಯಾಗಿ ತಮ್ಮ ಛಾಪು ಮೂಡಿಸಿದ್ದಾರೆ. ಮತ್ತೋರ್ವ ಮಗಳು ಸಿನಿಮಾ ರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ಖ್ಯಾತ ನಿರ್ಮಾಪಕ ಮಡದಿಯಾಗಿರುವ ನಟಿ, ಹಿಂದಿ, ತಮಿಳು, ತೆಲಗು, ಕನ್ನಡ ಸೇರಿದಂತೆ ಹಲವು ಭಾಷೆಗಳ ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾದ್ರೆ ಯಾರು ಈ ನಟಿ ಎಂಬುದನ್ನು ನೋಡೋಣ ಬನ್ನಿ

35
ಅತಿಲೋಕದ ಸುಂದರಿ

ಅತಿಲೋಕದ ಸುಂದರಿ ಶ್ರೀದೇವಿ ಬಗ್ಗೆ ನಾವು ಹೇಳುತ್ತಿದ್ದೇವೆ. ನಟ ಅನಿಲ್ ಕಪೂರ್ ಜೊತೆಗಿನ ಶ್ರೀದೇವಿ ಸಿನಿಮಾಗಳು ಅಂದ್ರೆ ಜನರು ಥಿಯೇಟರ್‌ನತ್ತ ನುಗ್ಗಿ ಬರುತ್ತಿದ್ದರು. ಆದರೆ ನಿಜ ಜೀವನದಲ್ಲಿ ಶ್ರೀದೇವಿಗೆ ಅವರಿಗೆ ಅನಿಲ್ ಕಪೂರ್ ಮೈದುನನಾಗಬೇಕು. ಶ್ರೀದೇವಿ ಪತಿ ಬೋನಿ ಕಪೂರ್ ಸೋದರನೇ ಅನಿಲ್ ಕಪೂರ್. ಮನೆಯಲ್ಲಿ ಅತ್ತಿಗೆ, ಸ್ಕ್ರೀನ್ ಮೇಲೆ ಜೋಡಿಯಾಗಿ ನಟಿಸುತ್ತಿದ್ದರು.

45
ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್

ಬಾಲನಟಿಯಾಗಿ ತಮ್ಮ ವೃತ್ತಿಜೀವನ ಆರಂಭಿಸಿದ ಶ್ರೀದೇವಿ ಚಿಕ್ಕವಯಸ್ಸಿನಲ್ಲಿಯೇ ದಕ್ಷಿಣ ಚಿತ್ರರಂಗದ ಸ್ಟಾರ್ ನಟಿಯಾದರು. ನಂತರ ಚಾಂದನಿ, ಮಿಸ್ಟರ್ ಇಂಡಿಯಾ, ನಾಗಿನಾ ಸಿನಿಮಾಗಳು ಶ್ರೀದೇವಿ ಅವರಿಗೆ ದೊಡ್ಡ ಜನಪ್ರಿಯತೆಯನ್ನು ತಂದುಕೊಟ್ಟವು. ತಮ್ಮ ಅದ್ಭುತ ಅಭಿನಯದೊಂದಿಗೆ ಭಾರತದ ಮೊದಲ ಮಹಿಳಾ ಸೂಪರ್ ಸ್ಟಾರ್ ಆದರು.

ಇದನ್ನೂ ಓದಿ: ಡ್ಯಾನ್ಸ್ ಮಾಡ್ತಿರುವಾಗಲೇ ಜಾರಿದ ಭಾರ್ಗವಿ LLB ಸೀರಿಯಲ್ ನಟ ಮನೋಜ್ ಕುಮಾರ್ ಲುಂಗಿ

55
ಶ್ರೀದೇವಿ-ಅನಿಲ್ ಕಪೂರ್ ಜೋಡಿ

ನಟಿ ಶ್ರೀದೇವಿ ಎಂದಿಗೂ ಪತಿಯೊಂದಿಗೆ ಸಿನಿಮಾದಲ್ಲಿ ನಟಿಸಿಲ್ಲ. ಆದ್ರೆ ಶ್ರೀದೇವಿ-ಅನಿಲ್ ಕಪೂರ್ ಜೋಡಿಯನ್ನು ಬಾಲಿವುಡ್‌ನ ಅತ್ಯಂತ ಜನಪ್ರಿಯ ಪೇರ್ ಎಂದು ಗುರುತಿಸಲಾಗುತ್ತದೆ. ಶ್ರೀದೇವಿ ಹಿರಿಯ ಮಗಳು ಜಾನ್ವಿ ಕಪೂರ್ ಸಹ ತಾಯಿಯಂತೆ ಎಲ್ಲಾ ಭಾಷೆಗಳ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಬೋನಿ ಕಪೂರ್ ಜೊತೆಗಿನ ಮದುವೆ ಬಳಿಕ ಸಿನಿಮಾ ರಂಗದಿಂದ ಅಂತರ ಕಾಯ್ದುಕೊಂಡಿದ್ದ ಶ್ರೀದೇವಿ, ಮತ್ತೆ ಇಂಗ್ಲಿಷ್-ವಿಂಗ್ಲಿಷ್ ಚಿತ್ರದ ಮೂಲಕ ಕಂಬ್ಯಾಕ್ ಮಾಡಿದ್ದರು.

ಇದನ್ನೂ ಓದಿ: ವಯಸ್ಸು 41, ಅಮ್ಮನಾಗುವ ಆಸೆ ನನಗಿಲ್ಲ; ಅಂಥಾ ಹುಡುಗ್ರು ನನ್ನ ಜೀವನದಲ್ಲಿ ಬೇಡ ಎಂದ ಡ್ಯಾನ್ಸರ್

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories