ನನ್ನ- ನಿನ್ನ ಪ್ರೇಮಗೀತೆ ಚಿನ್ನ... ಎನ್ನುತ್ತಲೇ ಪ್ರೀತಿಯ ಕಿಚ್ಚು ಹೊತ್ತಿಸಿದ Namruta Gowda- ಕಿಶನ್​ ಬಿಳಗಲಿ

Published : Sep 17, 2025, 02:39 PM IST

ಬಿಗ್​ಬಾಸ್​ ಖ್ಯಾತಿಯ ಕಿಶನ್‌ ಬಿಳಗಲಿ ಮತ್ತು ನಮ್ರತಾ ಗೌಡ ತಮ್ಮ ಕೆಮಿಸ್ಟ್ರಿಯಿಂದ ಸದಾ ಸುದ್ದಿಯಲ್ಲಿರುತ್ತಾರೆ. ಇದೀಗ ಈ ಜೋಡಿ 'ಪ್ರೇಮಲೋಕ' ಚಿತ್ರದ ಜನಪ್ರಿಯ ಹಾಡಿಗೆ ರೊಮ್ಯಾಂಟಿಕ್ ಆಗಿ ಹೆಜ್ಜೆ ಹಾಕಿದೆ. 

PREV
17
ಬಿಗ್​ಬಾಸ್​ನಿಂದ ನಮ್ರತಾ-ಕಿಶನ್​ ಫೇಮಸ್​

ಬಿಗ್​ಬಾಸ್ ಮೂಲಕವೇ ಸಕತ್​ ಫೇಮಸ್​ ಆಗಿರೋ ಕಿಶನ್‌ ಬಿಳಗಲಿ ಮತ್ತು ನಮ್ರತಾ ಗೌಡ (Namruta Gowda) ಅವರ ಕೆಮೆಸ್ಟ್ರಿಗೆ ಇದಾಗಲೇ ಫ್ಯಾನ್ಸ್​ ಫಿದಾ ಆಗಿದ್ದಾರೆ. ಈ ಜೋಡಿ ವೇದಿಕೆಯ ಮೇಲೆ ಬಂದರೆ, ಅಲ್ಲೊಂದು ಸಕತ್ ರೊಮಾನ್ಸ್​ ಇರುತ್ತದೆ ಎನ್ನುವುದು ಅಭಿಮಾನಿಗಳಿಗೆ ಗೊತ್ತು. ಇದಾಗಲೇ ಈ ಜೋಡಿ ಸೋಷಿಯಲ್​ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸುತ್ತಿದ್ದಾರೆ. ಇದಾಗಲೇ ಇಬ್ಬರೂ ಸೇರಿ ಕೆಲವು ಡ್ಯೂಯೆಟ್​ ಹಾಡಿದ್ದು, ಅದಕ್ಕೆ ಅಭಿಮಾನಿಗಳು ಮನಸೋತಿದ್ದಾರೆ.

27
ನಮ್ರತಾ- ಕಿಶನ್​ ಕೆಮೆಸ್ಟ್ರಿಗೆ ಫಿದಾ

ಇದೀಗ ಈ ಜೋಡಿ, ಪ್ರೇಮಲೋಕ ಚಿತ್ರದ ಇದು ನನ್ನ ನಿನ್ನ ಪ್ರೇಮ ಗೀತೆ ಚೆನ್ನ ಹಾಡಿಗೆ ಡ್ಯುಯೆಟ್​ ಮಾಡಿದ್ದಾರೆ. ಮಾಮೂಲಿನಂತೆ ಜೋಡಿ ಪ್ರೇಮದ ಕಿಚ್ಚನ್ನು ಹೊತ್ತಿಸಿದೆ. ಇವರ ಈ ಕೆಮೆಸ್ಟ್ರಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

37
ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಹೊಂದಿರುವ ಕಿಶನ್​

ಅಂದಹಾಗೆ, ನಮ್ರತಾ ಗೌಡ ಬಿಗ್‌ಬಾಸ್‌ ಕನ್ನಡ ಸೀಸನ್‌ 10ರ ಸ್ಪರ್ಧಿಯಾಗಿದ್ದರೆ, ಮತ್ತು ಬಿಗ್‌ಬಾಸ್‌ ಕನ್ನಡ ಸೀಸನ್‌ 7 ಸ್ಪರ್ಧಿಯಾಗಿದ್ದರು ಕಿಶನ್‌ ಬಿಳಗಲಿ (Kishen Bilagali). ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​. ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿತ್ತು.

47
ಬಿಗ್​ಬಾಸ್​ ಮೂಲಕ ಫೇಮಸ್​

ಇನ್ನು ನಮ್ರತಾ ಗೌಡ ಅವರ ಕುರಿತು ಹೇಳುವುದೇ ಬೇಡ. ಬಿಗ್​ಬಾಸ್​ 10 ಮೂಲಕ ಸಕತ್​ ಫೇಮಸ್​ ಆಗಿರುವವರು ಇವರು. ಕನ್ನಡ ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಆಗಿರುವ ನಮ್ರತಾ 1993 ಏಪ್ರಿಲ್ 15ರಲ್ಲಿ ಬೆಂಗಳೂರಿನಲ್ಲಿ ಜನಿಸಿದವರು. ನಮ್ರತಾ 2011ರಲ್ಲಿ ಸ್ಟಾರ್ ಸುವರ್ಣದಲ್ಲಿ ಪ್ರಸಾರವಾದ `ಕೃಷ್ಣ ರುಕ್ಮಿಣಿ' ಸೀರಿಯಲ್ ಮೂಲಕ ಕಿರುತೆರೆ ಪದಾರ್ಪಣೆ ಮಾಡಿದ ನಮ್ರತಾ ಅದಾದ ಬಳಿಕ ಪುಟ್ಟಗೌರಿ ಮದುವೆ ಧಾರಾವಾಹಿಯಲ್ಲಿ 'ಹಿಮಾ' ಪಾತ್ರದ ಮೂಲಕ ಗಮನ ಸೆಳೆದರು.

57
ತಕಮಿಧಿತ ಡ್ಯಾನ್ಸ್ ಶೋನಲ್ಲಿ ಮಿಂಚಿಂಗ್​

ನಂತರ ತಕಮಿಧಿತ ಡ್ಯಾನ್ಸ್ ಶೋನಲ್ಲಿ ಭಾಗವಹಿಸಿ ಟಾಪ್ 5ಗೆ ಆಯ್ಕೆಯಾಗಿದ್ದರು. ನಂತರ ನಾಗಿಣಿ 2 ಧಾರಾವಾಹಿಯ ಶಿವಾನಿ ಪಾತ್ರದ ಮೂಲಕ ಗಮನ ಸೆಳೆದರು. ಈಗ ಎಲ್ಲಕ್ಕಿಂತಲೂ ಹೆಚ್ಚು ಖ್ಯಾತಿ ತಂದುಕೊಟ್ಟಿರುವುದು ಬಿಗ್​ಬಾಸ್​ 10. ಇಲ್ಲಿ ಇವರು ಮತ್ತು ಸ್ನೇಹಿತ್​ ಸ್ನೇಹ ಸಾಕಷ್ಟು ಸದ್ದು ಕೂಡ ಮಾಡಿತ್ತು.

67
ಫ್ರೆಂಡ್​ಷಿಪ್​ ಬಗ್ಗೆ ಹೇಳಿಕೊಂಡಿದ್ದ ಜೋಡಿ

ಈ ಹಿಂದೆ ಸಂದರ್ಶನವೊಂದರಲ್ಲಿ ಈ ಜೋಡಿ ಮಾತನಾಡುತ್ತಾ ತಮ್ಮ ಫ್ರೆಂಡ್​ಷಿಪ್​ ಬಗ್ಗೆ ಹೇಳಿಕೊಂಡಿದ್ದರು. ಮನೆ ಪಕ್ಕದಲ್ಲೇ ಇದ್ದರೂ ನಮ್ರತಾ ನನಗೆ ಕರೆ ಮಾಡುವುದಿಲ್ಲ, ತಿಂಡಿ ತಿನ್ನಲು ಸುತ್ತಾಡಲು ಬೇರೆ ಬೇರೆ ಸ್ನೇಹಿತರು ಇದ್ದಾರೆ ನಾನು ಲೆಕ್ಕನೇ ಇಲ್ಲ ಎಂದು ಕಿಷನ್ ಹೇಳಿದ್ದರು. ಅಷ್ಟೇ ಅಲ್ಲದೇ ತಮ್ಮ ಮೊಬೈಲ್​ ಫೋನ್​ನಲ್ಲಿ ನಮ್ರತಾ ಹೆಸರನ್ನು ಹೇಗೆ ಸೇವ್​ ಮಾಡಿಕೊಂಡಿದ್ದೇನೆ ಎನ್ನುವ ಬಗ್ಗೆ ಮಾತನಾಡಿದ್ದರು.

77
ಮೊಬೈಲ್​ನಲ್ಲಿ ಹೀಗೆ ಸೇವ್​

ಸಾಮಾನ್ಯವಾಗಿ ನಮ್ರತಾ ಮಾತಿಗೆ ಮುಂಚೆ What the Fu** ಪದವನ್ನು ಬಳಸುತ್ತಾರೆ ಹೀಗಾಗಿ ನಾನು ಆಕೆ ನಂಬರ್‌ನ ನಮ್ರತಾ F** ಎಂದೇ ಸೇವ್ ಮಾಡಿಕೊಂಡಿದ್ದೀನಿ ಎಂದು ಕಿಷನ್ ಹೇಳಿದ್ದರು. ಆಗ ಹುಸಿಮುನಿಸು ತೋರಿದ್ದ ನಮ್ರತಾ, ಅಯ್ಯೋ ನಮ್ಮ ಸ್ನೇಹದ ಬಗ್ಗೆ ಮಾತನಾಡಿ ಅಂದ್ರೆ ಮಾನ ಮರ್ಯಾದೆ ತೆಗೆಯುತ್ತಿದ್ದೀರಿ ಎಂದಿದ್ದರು. ಇದೀಗ ಪ್ರೇಮ ಲೋಕದ  (Prema Loka)ಹಾಡಿಗೆ ಸಕತ್​ ರೊಮಾನ್ಸ್​ ಮಾಡಿದ್ದಾರೆ. 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories