ನಟಿ ನಮ್ರತಾ ಗೌಡ ಅವರು ಸಿಂಪಲ್ ಮೇಕಪ್ ಹಾಗೂ ಸಿಂಪಲ್ ಸೀರೆಯಲ್ಲಿ ಕ್ಯೂಟ್ ವಿಡಿಯೋಶೂಟ್ ಮಾಡಿಸಿಕೊಂಡಿದ್ದಾರೆ. ಶವರ್ ವಿಡಿಯೋದಿಂದ ಸೀರೆಯ ಮೆರುಗಿನವರೆಗೆ, ನಿತ್ಯಾಳ ಹೊಸ ಲುಕ್ ವೈರಲ್ ಆಗಿದೆ. ಬಾಲನಟಿಯಿಂದ ಬಿಗ್ಬಾಸ್ವರೆಗಿನ ನಮ್ರತಾ ಪಯಣವನ್ನೂ ಇಲ್ಲಿ ನೋಡಬಹುದು.
ಜೀ ಕನ್ನಡದಲ್ಲಿ ಪ್ರಸಾರ ಆಗ್ತಿರೋ ಕರ್ಣ ಸೀರಿಯಲ್ (Karna Serial )ಸಕತ್ ಇಂಟರೆಸ್ಟಿಂಗ್ ಆಗಿದ್ದು, ಇದು ವೀಕ್ಷಕರ ಮನಸ್ಸನ್ನು ಗೆದ್ದಿದೆ. ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತ ಸುತ್ತುವ ಕಥೆ ಇದು. ಇದೀಗ ಸೀರಿಯಲ್ ರೋಚಕ ತಿರುವಿನಲ್ಲಿ ಬಂದು ನಿಂತಿದೆ. ಕರ್ಣ ನಿಧಿಯನ್ನು ಮದ್ವೆಯಾಗಬೇಕು ಎನ್ನುವುದು ಕೆಲವರ ಮಾತಾದರೆ, ಕರ್ಣ ಮತ್ತು ನಿತ್ಯಳ ಕೆಮೆಸ್ಟ್ರಿ ಚೆನ್ನಾಗಿದೆ ಎನ್ನುವುದು ಮತ್ತೆ ಕೆಲವರ ಮಾತು. ಇದಾಗಲೇ ನಿತ್ಯ ಮತ್ತು ನಿಧಿ ಇಬ್ಬರ ಮೇಲೂ ಅರಿಶಿಣ-ಕುಂಕುಮ ಬಿದ್ದಾಗಿದ್ದು, ಯಾರನ್ನು ಮದುವೆಯಾಗುತ್ತಾನೆ ಎನ್ನುವ ಬಗ್ಗೆ ವೀಕ್ಷಕರು ತಲೆ ಕೆಡಿಸಿಕೊಳ್ಳುತ್ತಿದ್ದಾರೆ.
27
ನಿತ್ಯಾ ಪಾತ್ರಧಾರಿ ನಮ್ರತಾ ಗೌಡ
ಈ ಸೀರಿಯಲ್ನಲ್ಲಿ ನಿತ್ಯಾ ಪಾತ್ರವನ್ನು ನಟಿ ನಮ್ರತಾ ಗೌಡ (Namratha Gowda) ಮಾಡುತ್ತಿದ್ದಾರೆ. ಬಿಗ್ಬಾಸ್ ಮೂಲಕವೇ ಫೇಮಸ್ ಆಗಿರೊ ನಟಿ ನಮ್ರತಾ ಗೌಡ ಅವರ ಬಗ್ಗೆ ಅಭಿಮಾನಿಗಳಿಗೆ ಗೊತ್ತಿದ್ದದ್ದೇ. ನಟಿ ನಮ್ರತಾ ಗೌಡ ಹೆಸರು ಕಿರುತೆರೆ ವೀಕ್ಷಕರಿಗೆ ಚಿರಪರಿಚಿತ. ಅದರಲ್ಲಿಯೂ ಬಿಗ್ಬಾಸ್ ವೀಕ್ಷಕರಿಗಂತೂ ತುಂಬಾ ಹತ್ತಿರವಾಗಿದ್ದಾರೆ ನಟಿ.
37
ಕ್ಯೂಟ್ ವಿಡಿಯೋಶೂಟ್
ಇದೀಗ ನಟಿ ಸಿಂಪಲ್ ಮೇಕಪ್ ಹಾಗೂ ಸಿಂಪಲ್ ಸೀರೆಯ ಮೂಲಕ ಕ್ಯೂಟ್ ವಿಡಿಯೋಶೂಟ್ ಮಾಡಿಸಿಕೊಂಡಿದ್ದಾರೆ. ಇದರಲ್ಲಿ ಮಾಮೂಲಿ ಮನೆಯಲ್ಲಿ ಡ್ರೆಸ್ನಲ್ಲಿ ಕಾಣಿಸಿಕೊಂಡಿರೋ ನಟಿ, ಸ್ನಾನ ಮಾಡಿಕೊಂಡು ಬರೋಣ ಬನ್ನಿ ಎನ್ನುತ್ತಲೇ ಕೊನೆಗೆ, ಶವರ್ ವಿಡಿಯೋ ಹಾಕಿ ಬಳಿಕ ಸೀರೆಯಿಂದ ಮೆರುಗು ಹೆಚ್ಚಿಸಿಕೊಂಡಿದ್ದಾರೆ.
ತಮ್ಮ ವಿವಿಧ ಬ್ರ್ಯಾಂಡ್ಗಳನ್ನು ಬಳಸಿ ಮೇಕಪ್ ಮಾಡಿಕೊಂಡಿರುವ ನಟಿ, ಕೊನೆಗೆ ವಿಡಿಯೋ ಶೂಟ್ನಲ್ಲಿ ಮಿಂಚುವುದನ್ನು ನೋಡಬಹುದು.
57
ಬಾಲನಟಿಯಾಗಿ ಎಂಟ್ರಿ
ಬಾಲನಟಿಯಾಗಿ ಕನ್ನಡ ಸಿನಿಮಾಗಳಲ್ಲಿ ಎಂಟ್ರಿ ಕೊಟ್ಟಿದ್ದ ನಮ್ರತಾಗೆ ಹೆಚ್ಚು ಹೆಸರು ತಂದುಕೊಟ್ಟಿದ್ದು, ಸೀರಿಯಲ್ಗಳು. ಅದರಲ್ಲಿಯೂ ನಾಗಿಣಿ ಸೀರಿಯಲ್ ಅವರಿಗೆ ದೊಡ್ಡ ಖ್ಯಾತಿಯನ್ನೇ ಕೊಟ್ಟಿತು. ಅದಕ್ಕಿಂತ ಅವರ ಜೀವನದಲ್ಲಿ ದೊಡ್ಡ ಬ್ರೇಕ್ ಸಿಕ್ಕಿದ್ದು, ಬಿಗ್ ಬಾಸ್ ಕನ್ನಡ ಸೀಸನ್ 10. ಅಲ್ಲಿಂದ ಬಂದ ಮೇಲೆ ಒಂದಷ್ಟು ಷೋಗಳಲ್ಲಿ ಅವಕಾಶ ಸಿಕ್ಕಿತು. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿಯೂ ಆ್ಯಕ್ಟೀವ್ ಆಗಿದ್ದಾರೆ.
67
ಪುನೀತ್ ರಾಜ್ ಅಭಿಮಾನಿ
ನಮ್ರತಾ ಗೌಡ ಅವರು ಹಲವಾರು ಸೆಲೆಬ್ರಿಟಿಗಳಂತೆಯೇ ಪುನೀತ್ ರಾಜ್ಕುಮಾರ್ (Puneet Rajkumar) ಅವರ ಅಭಿಮಾನಿ ಕೂಡ. ಇದೇ ಕಾರಣಕ್ಕೆ ನಟಿ ಮೂರು ವರ್ಷಗಳ ಹಿಂದೆ, ಅಂದರೆ 2022ರಲ್ಲಿ ಅಪ್ಪು ಅವರ ಜನ್ಮದಿನದ ಸಂದರ್ಭದಲ್ಲಿ ನಟನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ.
77
ಪುನೀತ್ ರಾಜ್ ಕುಮಾರ್ ಟ್ಯಾಟೂ
ತಮ್ಮ ಕೈಮೇಲೆ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹೆಸರನ್ನು ಟ್ಯಾಟೂ ಹಾಕಿಸಿಕೊಳ್ಳುವ ಮೂಲಕ ಗೌರವ ಸಲ್ಲಿಸಿದ್ದರು. ಇನ್ನು ಜ್ಯೂನಿಯರ್ ಚಿತ್ರದ ಕುರಿತು ಹೇಳುವುದಾದರೆ, ರಾಧಾಕೃಷ್ಣ ರೆಡ್ಡಿ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಸಾಯಿ ಕೊರ್ರಪಾಟಿ ನಿರ್ಮಾಣದ ಚಿತ್ರವಾಗಿದ್ದು, ಕೆ ಕೆ ಸೆಂಥಿಲ್ ಕುಮಾರ್ ಅವರ ಛಾಯಾಗ್ರಹಣವಿದೆ.