ಸಾಮಾಜಿಕ ಜಾಲತಾಣದಲ್ಲಿ ನಿತ್ಯಶ್ರೀ ಹಾಡಿರುವ 'Hoovina Baanadante viral song' ಟ್ರೆಂಡಿಂಗ್ ಆಗಿದೆ. ಚಿತ್ರ ತಾರೆಯರು, ಕಿರುತೆರೆ ಕಲಾವಿದರು ಸಹ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಇದರ ಜೊತೆಗೆ, ಬಾಲಕಿ ಮಹಿತಾ ಹಾಡಿರುವ 'ನಾ ನಿನ್ನ ಬಿಡಲಾರೆ' ಹಾಡು ಕೂಡ ಜನಪ್ರಿಯತೆ ಗಳಿಸುತ್ತಿದೆ.
ಸದ್ಯ ಸೋಷಿಯಲ್ ಮೀಡಿಯಾದಲ್ಲಿ ಮಂಡ್ಯದ ಯುವತಿ ನಿತ್ಯಶ್ರೀ ಅವರ ಹಾಡಿರೋ ಹೂವಿನ ಬಾಣದಂತೆ... (Hoovina Baanadante) ಹಾಡು ಸಕತ್ ಸೌಂಡ್ ಮಾಡುತ್ತಿದೆ. ಚಿತ್ರ ತಾರೆಯರಿಂದ ಹಿಡಿದು ಕಿರುತೆರೆ ಕಲಾವಿದರೂ ಈ ಹಾಡಿಗೆ ರೀಲ್ಸ್ ಮಾಡುತ್ತಿದ್ದಾರೆ. ಕೆಲವರು ಇದನ್ನು ತಮಾಷೆಯ ರೂಪದಲ್ಲಿಯೂ ಹಾಡಿ, ಈ ಹಾಡಿರುವ ಯುವತಿಯನ್ನು ಟ್ರೋಲ್ ಮಾಡುತ್ತಲೇ ವ್ಯೂವ್ಸ್ ಹೆಚ್ಚಿಸಿಕೊಳ್ಳಲು ನೋಡುತ್ತಿದ್ದಾರೆ.
27
ತಮಾಷೆಯ ಹಾಡು ಟ್ರೆಂಡಿಂಗ್
ಅಷ್ಟಕ್ಕೂ ತಮಾಷೆಗಾಗಿ ತನ್ನ ಸ್ನೇಹಿತೆಯರ ಎದುರು ನಿತ್ಯಶ್ರೀ ಹೀಗೆ ಹಾಡಿದ್ದು, ಇಷ್ಟೊಂದು ಫೇಮಸ್ ಆಗುತ್ತದೆ ಎಂದು ಗೊತ್ತೇ ಇರಲಿಲ್ಲ. ಯಾಕೆ ಈ ಹಾಡು ಇಷ್ಟು ಟ್ರೆಂಡ್ ಆಯಿತೋ ತಿಳಿಯುತ್ತಿಲ್ಲ ಎಂದು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅದೇನೇ ಇದ್ದರೂ ರಾತ್ರೋರಾತ್ರಿ ಆಕೆ ಫೇಮಸ್ ಆಗಿದ್ದಾರೆ.
37
ನಾ ನಿನ್ನ ಬಿಡಲಾರೆ ಹಿತಾಳ ಕಂಠದಿಂದ ಹಾಡು
ಶ್ರೇಯಾ ಘೋಷಲ್ (Shreya Ghoshal) ಅವರು ಹಾಡಿರುವ ಈ ಹಾಡಿನ ಧಾಟಿಯಲ್ಲಿಯೇ Naa Ninna Bidalaare ಬಾಲಕಿ ಹಿತಾ ಉರ್ಫ್ ಮಹಿತಾ ಹಾಡಿದ್ದಾಳೆ. ಇದಾಗಲೇ ಹಲವಾರು ಹಾಡುಗಳನ್ನು ಹಾಡಿ ಸೈ ಎನ್ನಿಸಿಕೊಂಡಿರುವ ಗಾಯಕಿಯೂ ಆಗಿರುವ ಮಹಿತಾ ಈ ಹಾಡನ್ನು ಹಾಡುವ ಮೂಲಕ ಎಲ್ಲರ ಮನಸ್ಸನ್ನು ಗೆದ್ದಿದ್ದಾಳೆ.
ನಾ ನಿನ್ನ ಬಿಡಲಾರೆ ಸೀರಿಯಲ್ನಲ್ಲಿ ಅದ್ಭುತ ನಟನೆಯಿಂದ ಮೋಡಿ ಮಾಡ್ತಿರೋ ಬಾಲಕಿ ಅಷ್ಟೇ ಅದ್ಭುತ ಗಾಯಕಿ ಕೂಡ. ಅಂದಹಾಗೆ ಮಹಿತಾ, ಸ್ಕೂಲ್ ಮತ್ತು ಸೀರಿಯಲ್ ಎರಡನ್ನೂ ಮ್ಯಾನೇಜ್ ಮಾಡುತ್ತಿದ್ದಾಳೆ. ಈ ಕುರಿತು ಹಿಂದೊಮ್ಮೆ ಈಕೆಯ ಅಮ್ಮ ತನುಜಾ ಮಾಧ್ಯಮದ ಜೊತೆ ಮಾತನಾಡಿದ್ದರು.
57
ಹಾಡಿನಲ್ಲಿ ಚಿಕ್ಕಂದಿನಿಂದಲೇ ಆಸಕ್ತಿ
'ಚಿಕ್ಕ ವಯಸ್ಸಿನಲ್ಲಿ ಮಹಿತಾಗೆ ಹಾಡಿನಲ್ಲಿ ತುಂಬಾ ಆಸಕ್ತಿ ಇತ್ತು. ಕೋವಿಡ್ ಸಮಯದಲ್ಲಿ ನಾನು ಜನರಿಗೆ ಅರಿವು ಮೂಡಿಸುವ ವಿಡಿಯೋ ಮಾಡುತ್ತಿದ್ದ ವೇಳೆ ಅವಳಲ್ಲಿ ಇದ್ದ ನಟನೆಯ ಕಲೆಯನ್ನು ಗುರುತಿಸಿದೆ. ಮಗಳು ಬರೀ ಓದಬೇಕು ಎಂದು ನಾನು ಯಾವತ್ತೂ ಒತ್ತಡ ಹಾಕುವುದಿಲ್ಲ. ಆಕೆಗೆ ಯಾವುದೇ ಟ್ಯಾಲೆಂಟ್ ಇದ್ದರೂ ಸಪೋರ್ಟ್ ಮಾಡಬೇಕು ಅನ್ನೋ ಆಸೆ ನನಗೆ ಇತ್ತು. ಅದರಂತೆಯೇ ಅವಳ ಆಸಕ್ತಿಗೆ ನೀರೆರೆದೆ. ಅವರಿಗೆ ಒಳ್ಳೆಯ ವೇದಿಕೆಯೂ ಸಿಗುತ್ತಾ ಹೋಯಿತು ಎಂದಿದ್ದರು.
67
ಭವಿಷ್ಯದ ಕನಸೇನು?
ಅವಳ ಹಣೆಯಲ್ಲಿ ನಟಿಯಾಗುವುದೇ ಬರೆದಿದ್ದರೆ ಅದೇ ಆಗುತ್ತಾಳೆ. ಅವಳಿಗೆ ಏನೇ ಆಸಕ್ತಿ ಇದ್ದರೂ ಆ ಕ್ಷೇತ್ರದಲ್ಲಿ ನಾವು ಮುಂದುವರೆಯಲು ಬಿಡುತ್ತೇವೆ ಎಂದಿದ್ದರು.
77
ನನ್ನಮ್ಮ ಸೂಪರ್ ಸ್ಟಾರ್...
ಈ ಹಿಂದೆ ನನ್ನಮ್ಮ ಸೂಪರ್ ಸ್ಟಾರ್ (Nannamma Super Star) ಸೇರಿದಂತೆ ಕೆಲ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಂಡಿದ್ದ ಮಹಿತಾ, ನಂತರ ಚುಕ್ಕಿತಾರೆ ಧಾರಾವಾಹಿಯಲ್ಲಿ ಲೀಡ್ ರೋಲ್‌ನಲ್ಲಿ ಕಾಣಿಸಿಕೊಂಡಿದ್ದಳು. ಸದಾ ನಟನೆಯಲ್ಲಿ ಮಿಂಚುತ್ತಿರುವ ಮಹಿತಾ ಒಳ್ಳೆಯ ಸಿಂಗರ್ ಕೂಡ. ಈಕೆ ಇನ್ಸ್ಟಾಗ್ರಾಮ್ ಪುಟ ಹೊಂದಿದ್ದು ಅದರಲ್ಲಿ, ನಾನಿನ್ನ ಬಿಡಲಾರೆ ಸೀರಿಯಲ್ನ ಟೈಟಲ್ ಸಾಂಗ್ ಸೇರಿದಂತೆ ಹಲವು ಹಾಡುಗಳನ್ನು ಹಾಡಿದ್ದಾಳೆ.