ಕನ್ನಡಿಗರಿಗೆ ‘ಮಿಲನ’ ಚಿತ್ರದ ಮೂಲಕ ಪರಿಚಿತರಾದ ಮಲಯಾಳಂ ನಟಿ ಪಾರ್ವತಿ ತಿರುವೋತ್ತು ಇದೀಗ ತಮ್ಮ ಹೊಸ ಗ್ಲಾಮರಸ್ ಫೋಟೋಶೂಟ್ ಮೂಲಕ ಗಮನ ಸೆಳೆಯುತ್ತಿದ್ದಾರೆ. ‘ಮಿಲನ’ ಹಾಗೂ ‘ಪೃಥ್ವಿ’..
ಕನ್ನಡ ಸಿನಿಪ್ರೇಕ್ಷಕರಿಗೆ ‘ಮಿಲನ’ ಚಿತ್ರದ ಮೂಲಕ ಹತ್ತಿರವಾದ ಮಲಯಾಳಂ ನಟಿ ಪಾರ್ವತಿ ತಿರುವೋತ್ತು, ತಮ್ಮ ವಿಭಿನ್ನ ಅಭಿನಯದ ಮೂಲಕವೇ ವಿಶೇಷ ಅಭಿಮಾನಿ ಬಳಗವನ್ನು ಸಂಪಾದಿಸಿಕೊಂಡಿದ್ದಾರೆ. ಗ್ಲಾಮರ್ ಪಾತ್ರಗಳಿಗಷ್ಟೇ ಸೀಮಿತವಾಗದೆ, ಸವಾಲಿನ ಹಾಗೂ ಗಂಭೀರ ಪಾತ್ರಗಳಲ್ಲೂ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿರುವ ಈ ನಟಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಕಾರಣ ಅವರ ಹೊಸ ಗ್ಲಾಮರಸ್ ಫೋಟೋಶೂಟ್!
28
‘ಮಿಲನ’ ಮೂಲಕ ಕನ್ನಡಿಗರ ಮನಗೆದ್ದ ನಟಿ
ಪಾರ್ವತಿ ತಿರುವೋತ್ತು ಅವರಿಗೆ ಕನ್ನಡ ಪ್ರೇಕ್ಷಕರೊಂದಿಗೆ ವಿಶೇಷ ನಂಟಿದೆ. ಪುನೀತ್ ರಾಜ್‌ಕುಮಾರ್ ಅಭಿನಯದ ‘ಮಿಲನ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ಅವರು, ತಮ್ಮ ಸಹಜ ಅಭಿನಯದಿಂದ ಕನ್ನಡಿಗರ ಗಮನ ಸೆಳೆದಿದ್ದರು.
38
ಶಿವಣ್ಣನ ಜೊತೆಗೂ ನಟನೆ
‘ಮಿಲನ’ ಬಳಿಕ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಜೊತೆ ಮತ್ತೊಮ್ಮೆ ‘ಪೃಥ್ವಿ’ ಸಿನಿಮಾದಲ್ಲೂ ನಟಿಸಿದರು. ಇದರ ಜೊತೆಗೆ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಜೊತೆಗೂ ತೆರೆ ಹಂಚಿಕೊಂಡು ಕನ್ನಡ ಸಿನಿಮಾಗಳಲ್ಲಿ ತಮ್ಮದೇ ಛಾಪು ಮೂಡಿಸಿದರು.
ಕನ್ನಡದಲ್ಲಿ ಗಮನ ಸೆಳೆದ ಬಳಿಕ ಪಾರ್ವತಿ ತಿರುವೋತ್ತು ಮಲಯಾಳಂ ಸೇರಿದಂತೆ ಹಲವು ಚಿತ್ರರಂಗಗಳಲ್ಲಿ ಬ್ಯುಸಿಯಾಗಿದ್ದಾರೆ. ವಿಭಿನ್ನ ಕಥೆಗಳು ಮತ್ತು ಗಟ್ಟಿ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಮೂಲಕ ತಮ್ಮದೇ ಆದ ಸ್ಥಾನವನ್ನು ಉಳಿಸಿಕೊಂಡಿದ್ದಾರೆ.
58
ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ
ಇತ್ತೀಚೆಗೆ ಬಿಡುಗಡೆಯಾದ ಅವರ ‘ಪ್ರಥಮ ದೃಶ್ಯ ಕುಟ್ಟಕಾರ್’ ಮಲಯಾಳಂ ಸಿನಿಮಾ ಕೂಡ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ. ಚಿತ್ರಕ್ಕೆ ಉತ್ತಮ ವಿಮರ್ಶೆಗಳು ಸಿಕ್ಕಿದ್ದು, ಬಾಕ್ಸ್ ಆಫೀಸ್‌ನಲ್ಲೂ ಸಿನಿಮಾ ಸದ್ದು ಮಾಡಿದೆ.
68
ನಟನೆಯಷ್ಟೇ ಅಲ್ಲ, ಗ್ಲಾಮರ್‌ನಲ್ಲೂ ಪಾರ್ವತಿ ಸಖತ್!
ಪಾರ್ವತಿ ತಿರುವೋತ್ತು ಅವರನ್ನು ಕೇವಲ ಗಂಭೀರ ಪಾತ್ರಗಳ ಮೂಲಕವೇ ಗುರುತಿಸುವಂತಿಲ್ಲ. ವಿಭಿನ್ನ ಲುಕ್‌ಗಳಲ್ಲಿ ಕಾಣಿಸಿಕೊಳ್ಳುವ ನಟಿ, ತಮ್ಮ ಸ್ಟೈಲಿಶ್ ಹಾಗೂ ಗ್ಲಾಮರಸ್ ಅವತಾರಗಳಿಂದಲೂ ಆಗಾಗ್ಗೆ ಅಭಿಮಾನಿಗಳ ಗಮನ ಸೆಳೆಯುತ್ತಾರೆ.
78
ಸಖತ್ ವೈರಲ್
ಇದೀಗ ಪಾರ್ವತಿ ಮಾಡಿಸಿರುವ ಹೊಸ ಫೋಟೋಶೂಟ್‌ನ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ. ಟ್ರೆಂಡಿ ಲುಕ್‌ನಲ್ಲಿ ಕಾಣಿಸಿಕೊಂಡಿರುವ ನಟಿಯ ಫೋಟೋಗಳು ಫ್ಯಾನ್ಸ್ ಗಮನ ಸೆಳೆಯುತ್ತಿದ್ದು, ‘ಮಿಲನ’ ಚಿತ್ರದ ಆ ಸಿಂಪಲ್ ಪಾರ್ವತಿಗೂ, ಈಗಿನ ಈ ಗ್ಲಾಮರಸ್ ಅವತಾರಕ್ಕೂ ಎಷ್ಟು ಬದಲಾವಣೆ! ಎಂದು ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.
88
ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ
ಇನ್ನು ಪಾರ್ವತಿಯ ಈ ಹೊಸ ಫೋಟೋಶೂಟ್, ಅವರ ನಟನೆಯ ಮತ್ತೊಂದು ವಿಭಿನ್ನ ಮುಖವನ್ನು ಅಭಿಮಾನಿಗಳಿಗೆ ಪರಿಚಯಿಸಿದೆ. ಸಿನಿಮಾ, ಪಾತ್ರ, ಫ್ಯಾಷನ್-ಮೂರರಲ್ಲೂ ತಮ್ಮದೇ ಸ್ಟೈಲ್ ಉಳಿಸಿಕೊಂಡಿರುವ ನಟಿಯ ಹೊಸ ಲುಕ್‌ಗಳು ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆಯಲ್ಲಿವೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.