ಅಭಿಮಾನಿಗಳಿಗೆ ವಿಶೇಷ ಪತ್ರ ಬರೆದ ಡಿಂಪಲ್​ ಕ್ವೀನ್​ ರಚಿತಾ ರಾಮ್: ಏನಿದೆ ಅದರಲ್ಲಿ? ಫ್ಯಾನ್ಸ್​ ಫುಲ್​ ಖುಷ್​​

Published : Oct 08, 2026, 06:57 PM IST

ನಟಿ ರಚಿತಾ ರಾಮ್ ತಮ್ಮ 34ನೇ ಹುಟ್ಟುಹಬ್ಬದಂದು ಅಭಿಮಾನಿಗಳು ತೋರಿದ ಅಪಾರ ಪ್ರೀತಿಗೆ ಭಾವುಕರಾಗಿ ಪತ್ರ ಬರೆದು ಕೃತಜ್ಞತೆ ತಿಳಿಸಿದ್ದಾರೆ. ಬೇರೆ ಬೇರೆ ರಾಜ್ಯಗಳಿಂದಲೂ ಶುಭಾಶಯಗಳು ಹರಿದುಬಂದಿದ್ದು, ಪ್ರೀತಿಗೆ ಯಾವುದೇ ಭಾಷೆಯ ಹಂಗಿಲ್ಲ ಎಂದು ಅವರು ಹೇಳಿದ್ದಾರೆ.

PREV
16
ರಚಿತಾ ರಾಮ್​ ಹುಟ್ಟುಹಬ್ಬ

ಡಿಂಪಲ್​ ಕ್ವೀನ್​ ರಚಿತಾ ರಾಮ್​ ಕಳೆದ ವಾರ ಅರ್ಥಾತ್​ ಅಕ್ಟೋಬರ್​ 3ರಂದು 34ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡರು. ಕರ್ನಾಟಕ ಮಾತ್ರವಲ್ಲದೇ ಹೊರ ರಾಜ್ಯಗಳಲ್ಲಿನ ಅಭಿಮಾನಿಗಳು ಕೂಡ ಗುಳಿ ಕೆನ್ನೆಯ ಚೆಲುವೆಯ ಬೃಹತ್​ ಕಟೌಟ್​ಗಳನ್ನು ಹಾಕಿ ವಿಶೇಷ ರೀತಿಯಲ್ಲಿ ಶುಭಾಶಯ ಕೋರಿದರು.

26
ಕಣ್ತುಂಬಿಸಿಕೊಂಡ ನಟಿ

ತಮ್ಮ ಮೇಲೆ ಅಭಿಮಾನಿಗಳು ಇಟ್ಟಿರುವ ಅಭಿಮಾನಕ್ಕೆ ಕಣ್ತುಂಬಿಸಿಕೊಂಡಿದ್ದಾರೆ ನಟಿ ರಚಿತಾ ರಾಮ್​. ಈ ಪರಿಯ ಅಭಿಮಾನ ಕಂಡು ಮೂಕ ವಿಸ್ಮಿತರಾಗಿರುವ ರಚಿತಾ ರಾಮ್​ ಪತ್ರ ಬರೆದು ಅಭಿಮಾನಿಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಪತ್ರ ಬರೆದು ಎಲ್ಲರಿಗೂ ಕೃತಜ್ಞತೆ ತಿಳಿಸಿದ್ದಾರೆ ನಟಿ.

36
ರಚಿತಾ ರಾಮ್ ಏನು ಹೇಳಿದ್ರು

“ನನ್ನ ಹುಟ್ಟುಹಬ್ಬದಂದು ನನಗೆ ಶುಭ ಕೋರಲು ಸಮಯ ಮೀಸಲಿಟ್ಟು, ನನ್ನ ಮೇಲೆ ಅಪಾರ ಪ್ರೀತಿಯನ್ನು ಹರಿಸಿದ ಪ್ರತಿಯೊಬ್ಬರಿಗೂ ನನ್ನ ಹೃದಯದಾಳದ ಲಿಟಲ್‌ ನೋಟ್‌, ಇನ್ಸ್ಟಾಗ್ರಾಮ್, ಯೂಟ್ಯೂಬ್, ಫೇಸ್‌ಬುಕ್ ಮತ್ತು ಇತರ ಎಲ್ಲಾ ಸಾಮಾಜಿಕ ಜಾಲತಾಣಗಳಲ್ಲಿ ನೀವು ನನಗಾಗಿ ಹಂಚಿಕೊಳ್ಳುತ್ತಿರುವ ಸುಂದರವಾದ ವೀಡಿಯೊಗಳು, ಸಂದೇಶಗಳು ಮತ್ತು ಪೋಸ್ಟರ್‌ಗಳನ್ನು ನಾನು ನೋಡುತ್ತಿದ್ದೇನೆ. ನೀವು ನನ್ನ ಮೇಲೆ ತೋರಿಸಿರುವ ಪ್ರೀತಿ ಮತ್ತು ಆದರಗಳು ಪ್ರಾಮಾಣಿಕವಾಗಿ ನನಗೆ ಅತ್ಯಂತ ಸಂತೋಷ ತಂದಿದೆ ಎಂದಿದ್ದಾರೆ ನಟಿ.

46
ಭಾಷೆ ಬೇರೆಯಾದರೂ...

“ಇದನ್ನು ಇನ್ನಷ್ಟು ವಿಶೇಷಗೊಳಿಸುವ ವಿಷಯವೆಂದರೆ, ಈ ಪ್ರೀತಿಯು ದೇಶದಾದ್ಯಂತ ಇರುವ ಹಲವು ವಿಭಿನ್ನ ರಾಜ್ಯಗಳಿಂದ ಹರಿದುಬಂದಿದೆ. ನಿಮ್ಮೆಲ್ಲರ ಮೂಲಕ ದೇವರು ತನ್ನ ಪ್ರೀತಿ ಮತ್ತು ಆಶೀರ್ವಾದಗಳನ್ನು ನನಗೆ ಕಳುಹಿಸಿದ್ದಾನೆ ಎಂದು ನಾನು ನಿಜವಾಗಿಯೂ ಭಾವಿಸುತ್ತೇನೆ. ನಾವು ಬೇರೆ ಬೇರೆ ಭಾಷೆಗಳನ್ನು ಮಾತನಾಡಬಹುದು, ಆದರೆ ನಾವು ಹಂಚಿಕೊಳ್ಳುವ ಪ್ರೀತಿಗೆ ಯಾವುದೇ ಭಾಷೆಯ ಹಂಗಿಲ್ಲ. ಆ ವೀಡಿಯೊಗಳನ್ನು ಮಾಡಲು, ಆ ಸಂದೇಶಗಳನ್ನು ಬರೆಯಲು ಮತ್ತು ನನ್ನೊಂದಿಗೆ ನನ್ನ ಹುಟ್ಟುಹಬ್ಬವನ್ನು ಆಚರಿಸಲು ಸಮಯ ಮೀಸಲಿಟ್ಟಿದ್ದಕ್ಕಾಗಿ ನಿಮಗೆ ಧನ್ಯವಾದಗಳು ಎಂದಿದ್ದಾರೆ.

56
ನಟಿಯ ಕುರಿತು

ಇನ್ನು ನಟಿಯ ಕುರಿತು ಹೇಳುವುದಾದರೆ, ಅವರು ನಟಿ ರಚಿತಾ ರಾಮ್‌ ಅವರು ಅಕ್ಟೋಬರ್‌ 3ರ 1992ರಲ್ಲಿ ಜನಿಸಿದರು. ಇವರು ತಮ್ಮ ಬಣ್ಣದ ಪಯಣ ಆರಂಭಿಸಿದ್ದು 2012ರಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಸಿ’ ಧಾರಾವಾಹಿ ಮೂಲಕ. ಇದರಲ್ಲಿ ಅವರದ್ದು ನೆಗೆಟಿವ್​ ಶೇಡ್​.

66
ದರ್ಶನ್​ ಕೊಟ್ಟರು ಛಾನ್ಸ್​

ಮರುವರ್ಷವೇ 2013ರಲ್ಲಿ ದರ್ಶನ್‌ ತೂಗುದೀಪ ಅವರೊಟ್ಟಿಗೆ ‘ಬುಲ್ ಬುಲ್‌’ ಸಿನಿಮಾ ಮಾಡಿದ್ರು. ಮಾಡಿದ ಮೊದಲೇ ಸಿನಿಮಾ ಸೂಪರ್ ಡ್ಯೂಪರ್‌ ಹಿಟ್‌ ಆಯ್ತು. ಬಿಂದಿಯಾ ರಾಮ್‌ ಎಂಬುವುದು ರಚಿತಾ ಅವರ ಮೂಲ ಹೆಸರು. ‘ಬುಲ್‌ ಬುಲ್‌’ ಸಿನಿಮಾದಿಂದ ರಚಿತಾ ರಾಮ್‌ ಆದರು. ಅಲ್ಲಿಂದ ಸಿಕ್ಕಾಪಟ್ಟೆ ಫೇಮಸ್​ ಆದ ನಟಿಗೆ ಈಗ ಅವಕಾಶಗಳು ಹುಡುಕಿ ಬರುತ್ತಿವೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories