ಧುರಂಧರ್‌ ಸಿನಿಮಾ ಮಾದರಿ ಅನುಸರಿಸುತ್ತಿದ್ದರಾ ರಾಜಮೌಳಿ: ಹಾಗಿದ್ರೆ ವಾರಣಾಸಿ ಕತೆಯೇನು?

Published : Mar 28, 2026, 04:41 PM IST

ವಾರಣಾಸಿ ಸಿನಿಮಾದ್ದು ಬಹುದೊಡ್ಡ ಕ್ಯಾನ್ವಾಸ್‌. ಆ ಕಥೆಯನ್ನು ಮೂರು ಗಂಟೆಗಳಲ್ಲಿ ಹೇಳುವುದು ಕಷ್ಟಸಾಧ್ಯ. ಹೀಗಾಗಿ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ.

PREV
15
ಅದ್ದೂರಿ ಸಿನಿಮಾ

ಮಹೇಶ್‌ ಬಾಬು ನಟನೆಯ, ಎಸ್‌.ಎಸ್‌. ರಾಜಮೌಳಿ ನಿರ್ದೇಶನದ ಬಹು ಅದ್ದೂರಿ ಸಿನಿಮಾ ‘ವಾರಣಾಸಿ’ ಎರಡು ಭಾಗಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ.

25
ಎರಡು ಭಾಗಗಳಲ್ಲಿ ಬಿಡುಗಡೆ

ರಾಜಮೌಳಿ ಆಪ್ತಮೂಲಗಳಿಂದ ಈ ವಿಚಾರ ಬಹಿರಂಗಗೊಂಡಿದೆ. ಈಗಾಗಲೇ ಎರಡು ಭಾಗಗಳಲ್ಲಿ ಬಿಡುಗಡೆಯಾಗಿ ಸಾವಿರಾರು ಕೋಟಿ ಬಿಸಿನೆಸ್‌ ಮಾಡಿರುವ ‘ಧುರಂಧರ್‌’ ಸಿನಿಮಾ ಸರಣಿಯ ಯಶಸ್ಸೇ ರಾಜಮೌಳಿ ಅವರ ಈ ನಿರ್ಧಾರಕ್ಕೆ ಕಾರಣ ಎನ್ನಲಾಗಿದೆ.

35
ಬಹುದೊಡ್ಡ ಕ್ಯಾನ್ವಾಸ್‌

ವಾರಣಾಸಿ ಸಿನಿಮಾದ್ದು ಬಹುದೊಡ್ಡ ಕ್ಯಾನ್ವಾಸ್‌. ಆ ಕಥೆಯನ್ನು ಮೂರು ಗಂಟೆಗಳಲ್ಲಿ ಹೇಳುವುದು ಕಷ್ಟಸಾಧ್ಯ. ಹೀಗಾಗಿ ಈ ಸಿನಿಮಾವನ್ನು ಎರಡು ಭಾಗಗಳಲ್ಲಿ ಬಿಡುಗಡೆ ಮಾಡುವ ಬಗ್ಗೆ ಚಿತ್ರತಂಡ ಚಿಂತಿಸುತ್ತಿದೆ.

45
ಉಸಿರುಗಟ್ಟಿ ಕಥೆ ಹೇಳುವ ಕಷ್ಟ

ಧುರಂಧರ್‌ ಸಿನಿಮಾಕ್ಕೆ ಈ ಫಾರ್ಮ್ಯಾಟ್‌ ಬಹಳ ಚೆನ್ನಾಗಿ ವರ್ಕ್‌ ಆಗಿದೆ. ಹಾಗಾಗಿ ಅದೇ ಮಾದರಿ ಅನುಸರಿಸಿದರೆ ಉಸಿರುಗಟ್ಟಿ ಕಥೆ ಹೇಳುವ ಕಷ್ಟ ತಪ್ಪುತ್ತದೆ.

55
ಅತ್ಯಾಧುನಿಕ ತಂತ್ರಜ್ಞಾನ

ನಿರಾಳವಾಗಿ ಸಾವಧಾನವಾಗಿ ಕಥೆ ಹೇಳಬಹುದು ಎಂದು ವಾರಣಾಸಿ ತಂಡ ನಿರ್ಧರಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಕುರಿತು ಅಧಿಕೃತ ಸುದ್ದಿ ಇನ್ನಷ್ಟೇ ಬರಬೇಕಿದೆ. ಪ್ರಸ್ತುತ ಬೃಹತ್‌ ಸೆಟ್‌ಗಳಲ್ಲಿ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಂಡು ರಾಜಮೌಳಿ ಚಿತ್ರೀಕರಣ ನಡೆಸುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories