ಮೊನಾಲಿಸಾ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವುದಾಗಿ ಗುಡುಗಿದ ಸನೋಜ್ ಮಿಶ್ರಾ; ರುದ್ರಾಕ್ಷಿ ಹುಡುಗಿ ಕಥೆ ಏನಾಗ್ತಿದೆ?

Published : Mar 28, 2026, 03:12 PM IST

ನಾನು ಅವಳಿಗೆ ನಟನೆಯನ್ನು ಕಲಿಸಿದವನು. ಅವಳು ನಟನೆಯ ಮೂಲಕವೇ ನನ್ನನ್ನು ಬಲೆಗೆ ಬೀಳಿಸುತ್ತಿದ್ದಾಳೆ. ಅವಳು ನನ್ನನ್ನು ಇಷ್ಟು ದೊಡ್ಡ ವಿವಾದದಲ್ಲಿ ಸಿಲುಕಿಸುತ್ತಿರೋದು ಏಕೆಂದರೆ ಅವಳ ಕುಟುಂಬವು ಇಂದಿಗೂ ಉಜ್ಜಯಿನಿಯಲ್ಲಿರುವ ನನ್ನ ಮನೆಯಲ್ಲಿ ವಾಸಿಸುತ್ತಿದೆ." ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ.

PREV
18

ಮೊನಾಲಿಸಾ ಭೋಸ್ಲೆ (Monalisa Bhosle), ಮಹಾ ಕುಂಭಮೇಳದಲ್ಲಿ ವೈರಲ್ ಆಗಿ ಸದ್ಯ ನಟಿಯಾಗಿರುವ ಹುಡುಗಿ ಇತ್ತೀಚೆಗೆ ನಿರ್ದೇಶಕ ಸನೋಜ್ ಮಿಶ್ರಾ (Sanoj Mishra) ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮೊನಾಲಿಸಾ ನಿರ್ದೇಶಕ ಸನೋಜ್ ವಿರುದ್ಧ ಲೈಂಗಿಕ ಕಿರುಕುಳದ ( misconduct allegations) ಆರೋಪ ಮಾಡಿದ್ದರು.

28

ವಿವಾದದ ನಂತರ, ನಿರ್ದೇಶಕರು ಕೊನೆಗೂ ಕೌಂಟರ್ ಕೊಟ್ಟಿದ್ದಾರೆ. ಹಾಗೂ, ತಮ್ಮ ಮೇಲಿನ ಆರೋಪಗಳನ್ನು ನಿರಾಕರಿಸಿದ್ದಾರೆ. ವೈರಲ್ ಆಗಿರುವ ಮಹಾ ಕುಂಭಮೇಳದ ಹುಡುಗಿ ಮತ್ತು ನಟಿ ಮೊನಾಲಿಸಾ ಸನೋಜ್ ನಿರ್ದೇಶನದ ( defamation case) ಚಿತ್ರ 'ದಿ ಡೈರಿ ಆಫ್ ಮಣಿಪುರ'ದಲ್ಲಿ ನಟಿಸಿದ್ದಾರೆ, ಇದು ಪ್ರಸ್ತುತ ನಿರ್ಮಾಣ ಹಂತದಲ್ಲಿದೆ.

38

ಸಂದರ್ಶನದಲ್ಲಿ ಈ ಬಗ್ಗೆ ನಿರ್ದೇಶಕ ಮಾತನಾಡಿ' ಮೊನಾಲಿಸಾ ಮಾಡಿದ್ದು ತುಂಬಾ ದೊಡ್ಡ ತಪ್ಪು. ನಾನು ಅವಳ ಕುಟುಂಬದ ಪರವಾಗಿ ನಿಂತು ಬೆಂಬಲಿಸಿದವನು. ಅವರ ಕುಟುಂಬದ ಸುಮಾರು 7-8 ಜನರು ಇನ್ನೂ ಉಜ್ಜಯಿನಿಯಲ್ಲಿರುವ ನನ್ನ ಮನೆಯಲ್ಲಿ ವಾಸಿಸುತ್ತಿದ್ದಾರೆ.

48

ನಾನು ಅವಳಿಗೆ ನಟನೆಯನ್ನು ಕಲಿಸಿದವನು. ಅವಳು ನಟನೆಯ ಮೂಲಕವೇ ನನ್ನನ್ನು ಬಲೆಗೆ ಬೀಳಿಸುತ್ತಿದ್ದಾಳೆ. ಅವಳು ನನ್ನನ್ನು ಇಷ್ಟು ದೊಡ್ಡ ವಿವಾದದಲ್ಲಿ ಸಿಲುಕಿಸುತ್ತಿರೋದು ಏಕೆಂದರೆ ಅವಳ ಕುಟುಂಬವು ಇಂದಿಗೂ ಉಜ್ಜಯಿನಿಯಲ್ಲಿರುವ ನನ್ನ ಮನೆಯಲ್ಲಿ ವಾಸಿಸುತ್ತಿದೆ." ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ.

58

ಇಷ್ಟೆಲ್ಲಾ ಆಗೋದಕ್ಕೆ, ಅವಳು ನನ್ನ ವಿರುದ್ಧ ತಿರುಗಿ ಬೀಳೋದಕ್ಕೆ ಕಾರಣವಿದೆ.. ಆಕೆಯ ಹೆತ್ತವರ ವೀಡಿಯೊಗಳು ಈಗಾಗಲೇ ಹೊರಬಂದಿವೆ. ಅಲ್ಲಿ ಆಕೆಯ ಪೋಷಕರು ಆಕೆಯ ಮದುವೆಯನ್ನು ವಿರೋಧಿಸುತ್ತಿದ್ದಾರೆ. ಆ ನಟನಿಗೆ ಅವಳು ಇನ್ನೂ ಅಪ್ರಾಪ್ತ ವಯಸ್ಕಳಾಗಿರುವುದರಿಂದ ಅದನ್ನು ಅನೂರ್ಜಿತ ಎಂದು ಕರೆಯುತ್ತಿದ್ದಾರೆ. ಮತ್ತು, ಅವಳು ಇನ್ನೂ ಅಪ್ರಾಪ್ತ ವಯಸ್ಕಳಾಗಿದ್ದಾಳೆ ಮತ್ತು ಇದು ದಾಖಲೆಗಳೊಂದಿಗೆ ಬಹಿರಂಗವಾಗಿದೆ' ಎಂದು ಅವರು ಹೇಳಿದರು.

68

ನಿರ್ದೇಶಕರು ಮೊನಾಲಿಸಾ ಅವರ ಆರೋಪಗಳನ್ನೂ ಉಲ್ಲೇಖಿಸಿ, 'ಈ ನಟಿಯ ಮೇಲೆ ಹಲ್ಲೆ ನಡೆದಿದ್ದರೆ, ಅವರು ಆಗಲೇ ತಮ್ಮ ಕುಟುಂಬಕ್ಕೆ ದೂರು ನೀಡಬಹುದಿತ್ತು. ಆದರೆ ಆಕೆ ಹಾಗೆ ಮಾಡಿಲ್ಲ. ಮದುವೆ ಬಳಿಕ ಈ ಬೆಳವಣಿಗೆ ನಡೆದಿದೆ. ಕಾರಣ, ಅವರ ಮದುವೆಯನ್ನು 'ಲವ್-ಜಿಹಾದ್' ಎಂದು ಬಿಂಬಿಸಲಾಯಿತು ಮತ್ತು ನಾನು ಕೂಡ ಅದನ್ನು ಮೊದಲಿನಿಂದಲೂ ವಿರೋಧಿಸಿದೆ ಎಂಬ ಕಾರಣಕ್ಕಾಗಿ, ನನ್ನನ್ನು ಇದರಲ್ಲಿ ಸಿಲುಕಿದೆ" ಎಂದು ಸನೋಜ್ ಮಿಶ್ರಾ ಹೇಳಿದ್ದಾರೆ.

78

ಸನೋಜ್ ಮಿಶ್ರಾ ಈಗ ಫುಲ್ ರಾಂಗ್ ಆಗಿದ್ದಾರೆ. "ನಾನು ಒಂದು ಅಥವಾ ಎರಡು ದಿನಗಳಲ್ಲಿ ಅವಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡುತ್ತೇನೆ. ಅವಳು ನನ್ನ ಹೆಸರನ್ನು ಹೀಗೆ ಹಾಳು ಮಾಡಲು ಸಾಧ್ಯವಿಲ್ಲ. ಅವಳು ಹೇಳಿದ್ದು ಸರಿಯಾಗಿದ್ದರೆ, ಅವಳು ಕೂಡ ಕಾನೂನು ಮಾರ್ಗವನ್ನು ತೆಗೆದುಕೊಳ್ಳಬಹುದು' ಎಂದಿದ್ದಾರೆ.

88

ಮೊನಾಲಿಸಾ ಗಂಭೀರ ಆರೋಪಗಳನ್ನು ಮಾಡಿದ ನಂತರ, ನಿರ್ದೇಶಕರ ಹೇಳಿಕೆಗಳು ಬಂದಿವೆ. ಬುಧವಾರ ತಮ್ಮ ಪತಿ ನಟ ಫರ್ಮಾನ್ ಖಾನ್ ಅವರೊಂದಿಗೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮೊನಾಲಿಸಾ, 'ಸನೋಜ್ ಮಿಶ್ರಾ ಅವರ ಚಿತ್ರದಲ್ಲಿ ಕೆಲಸ ಮಾಡುವಾಗ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದೆ' ಎಂದು ಹೇಳಿದ್ದಾರೆ. ಅವರ ಪ್ರಕಾರ, ಡೆಹ್ರಾಡೂನ್ ಮತ್ತು ನೇಪಾಳದಂತಹ ಸ್ಥಳಗಳಲ್ಲಿ ಹಲವಾರು ಶೂಟಿಂಗ್ ವೇಳಾಪಟ್ಟಿಗಳಲ್ಲಿ ಈ ಘಟನೆಗಳು ನಡೆದಿವೆ.

'ನಿರ್ದೇಶಕರು ಕೆಲಸದಲ್ಲಿ ಅನುಚಿತವಾಗಿ ವರ್ತಿಸುತ್ತಿದ್ದರು ಮತ್ತು ಆಗಾಗ್ಗೆ ತನ್ನನ್ನು ಅನುಚಿತವಾಗಿ ಸ್ಪರ್ಶಿಸುತ್ತಿದ್ದರು, ಕೆಲವು ಸಂದರ್ಭಗಳಲ್ಲಿ ಅವರನ್ನು ಹೆದರಿಸುತ್ತಿದ್ದರು' ಎಂದು ಅವರು ಹೇಳಿಕೊಂಡಿದ್ದಾರೆ. ಜೊತೆಗೆ, 'ಆ ಸಮಯದಲ್ಲಿ ತನ್ನ ಕುಟುಂಬಕ್ಕೆ ಹೇಳಿದ್ದರೂ, ಅದು ತನ್ನ ಮೊದಲ ಚಿತ್ರವಾದ್ದರಿಂದ ದೂರು ನೀಡಬೇಡಿ ಮತ್ತು ಅವಕಾಶದ ಮೇಲೆ ಗಮನಹರಿಸುವಂತೆ ಅವರು ಸೂಚಿಸಿದ್ದರು' ಎಂದು ಮೊನಾಲಿಸಾ ಹೇಳಿಕೊಂಡಿದ್ದಾರೆ. ಈ ಆರೋಪ-ಪ್ರತ್ಯಾರೋಪಗಳು ಮುಂದಿನ ದಿನಗಳಲ್ಲಿ ಎಲ್ಲಿಗೆ ಹೋಗಿ ತಲುಪುತ್ತೆ ಎಂಬುದನ್ನು ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories