'Toxic' ಚಿತ್ರದ ತಬಾಹಿ ಹಾಡಿಗೆ ಕಿಶನ್​ ಬೆಳಗಲಿ ಬೋಲ್ಡ್​ ಸ್ಟೆಪ್​: ಜಾಲತಾಣದಲ್ಲಿ ಕಿಚ್ಚು ಹೊತ್ತಿಸಿದ ನಟ-ನಟಿ

Published : Jul 20, 2026, 01:22 PM IST

ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 'ತಬಾಹಿ' ಹಾಡಿಗೆ ಬಿಗ್ ಬಾಸ್ ಖ್ಯಾತಿಯ ಡ್ಯಾನ್ಸರ್ ಕಿಶನ್ ಬಿಳಗಲಿ ಮತ್ತು ಮಾಡೆಲ್ ವಂಶಿ ಉದಯ್ ರೀಲ್ಸ್ ಮಾಡಿದ್ದಾರೆ. ಅವರ ರೊಮ್ಯಾಂಟಿಕ್ ಸ್ಟೆಪ್ಸ್‌ಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ಕಿಶನ್‌ರನ್ನು ಯಶ್‌ಗೆ ಹೋಲಿಸುತ್ತಿದ್ದಾರೆ.

PREV
16
ಟಾಕ್ಸಿಕ್​ ಹವಾ

ಯಶ್​ ನಟನೆಯ ಬಹು ನಿರೀಕ್ಷಿತ ಟಾಕ್ಸಿಕ್​ ಚಿತ್ರ (Toxic Movie) ಇದಾಗಲೇ ಸೋಷಿಯಲ್​ ಮೀಡಿಯಾದಲ್ಲಿ ಕಿಚ್ಚು ಹೊತ್ತಿಸಿದೆ. ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಈ ಸಿನಿಮಾ ಯಾವಾಗ ರಿಲೀಸ್​ ಆಗುತ್ತದೆ, ಯಾವಾಗ ತಾವು ನೋಡುತ್ತೇವೆ ಎಂದು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

26
ತಬಾಹಿ ಹಲ್​ಚಲ್​

ಅದರ ನಡುವೆಯೇ, ಇಂಥ ಹಾಡುಗಳಿಗೆ ತಮ್ಮದೇ ಆದ ರೊಮಾಂಟಿಕ್​ ಹೆಜ್ಜೆಗಳಿಂದ ಹಲ್​ಚಲ್​ ಸೃಷ್ಟಿಸುವಲ್ಲಿ ಫೇಮಸ್​ ಆಗಿರೋ ನಟ, ಬಿಗ್​ಬಾಸ್ ಖ್ಯಾತಿಯ ಕಿಶನ್‌ ಬಿಳಗಲಿ ಅವರು ಮಾಡೆಲ್​ ವಂಶಿ ಉದಯ್​ ಜೊತೆಗೆ ರೀಲ್ಸ್​ ಮಾಡಿದ್ದಾರೆ.

36
ಬೋಲ್ಡ್​ ಹಾಡುಗಳಿಗೆ ಫೇಮಸ್​

ಕಿಶನ್​ ಅವರು ಇದಾಗಲೇ ಹಲವು ನಟಿಯರ ಜೊತೆ ರೊಮ್ಯಾಂಟಿಕ್​ ಸ್ಟೆಪ್​ ಹಾಕುವ ಮೂಲಕ ಫೇಮಸ್​ ಆಗಿದ್ದಾರೆ. ಸೋಷಿಯಲ್​ ಮೀಡಿಯಾದಲ್ಲಿ ಇವರು ಕಿಚ್ಚು ಹೊತ್ತಿಸುತ್ತಿದ್ದಾರೆ. ಇದೀಗ, ಈಗಾಗಲೇ ಹವಾ ಸೃಷ್ಟಿಸಿರುವ ತಬಾಹಿ ಹಾಡಿಗೆ ಇನ್ನಷ್ಟು ಹಾಟ್​ ಸ್ಟೆಪ್​ ಹಾಕುವ ಮೂಲಕ ಟ್ರೆಂಡಿಂಗ್​ನಲ್ಲಿದ್ದಾ ಕಿಶನ್​ ಬೆಳಗಲಿ.

46
ಕಿಶನ್​ ಕುರಿತು

ಕಿಶನ್‌ ಬಿಳಗಲಿ (Kishen Bilagali) ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ. ಕಿಶನ್‌ ಬಿಳಗಲಿ. ಕಿಶನ್​ ಅವರು ಮೂಲತಃ ಡಾನ್ಸರ್​ ಚಿಕ್ಕಮಗಳೂರಿನ ಇವರು ಬಿಗ್​ಬಾಸ್​ 7ರಿಂದ ಸಕತ್​ ಫೇಮಸ್​ ಆಗಿದ್ದರೂ, 2018 ರ ಹಿಂದಿ ರಿಯಾಲಿಟಿ ಷೋ ಡ್ಯಾನ್ಸ್ ದಿವಾನಿಯ ವಿಜೇತರು ಕೂಡ. ಹೀಗೆ ಕನ್ನಡ ಮಾತ್ರವಲ್ಲದೇ ಹಿಂದಿಯಲ್ಲಿಯೂ ಛಾಪು ಮೂಡಿಸಿದ್ದಾರೆ ಕಿಶನ್​.

56
ಬಿಸಿನೆಸ್​ಮನ್​ ಕೂಡ

ಡಾನ್ಸ್​ ಮಾತ್ರವಲ್ಲದೇ ಬಿರಿಯಾನಿ ಪ್ಯಾಲೇಸ್‌ ಫ್ರಾಂಚೈಸಿ ಕೂಡ ಇವರು ಹೊಂದಿದ್ದು, ಬೆಂಗಳೂರಿನಲ್ಲಿ ಇವರ ಔಟ್​ಲೆಟ್​ಗಳಿವೆ. ಇದಕ್ಕೆ ಸಾಕ್ಷಿ ಎಂಬಂತೆ ಖುದ್ದು ಇವರೇ ಬಿರಿಯಾನಿ ತಯಾರಿಸುತ್ತಿದ್ದ ವಿಡಿಯೋ ಒಂದು ವೈರಲ್​ ಆಗಿತ್ತು.

66
ಯಾರೀ ವಂಶಿ ಉದಯ್?

ವಂಶಿ ಉದಯ್ ಅವರು ಕನ್ನಡದ ಖ್ಯಾತ ಮಾಡೆಲ್, ನಟಿ ಹಾಗೂ ವಕೀಲೆಯಾಗಿದ್ದಾರೆ. ಇವರು 2025ರ 'ಮಿಸ್ ಯೂನಿವರ್ಸ್ ಇಂಡಿಯಾ' (Miss Universe India) ಸ್ಪರ್ಧೆಯಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ, ಸ್ಯಾಂಡಲ್‌ವುಡ್‌ನ 'ಬೇಲ್' ಮತ್ತು 'ರುದ್ರ ಕಾಲ', ತೆಲುಗಿನ 'ಕೈಗಲ್' ಹಾಗೂ ತಮಿಳು ಚಿತ್ರಗಳ ಮೂಲಕ ಭರವಸೆಯ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಇದೀಗ ಕಿಶನ್​ ಮತ್ತು ವಂಶಿ ಅವರ ತಬಾಹಿ ಕಾಂಬಿನೇಷನ್​ಗೆ ಅಭಿಮಾನಿಗಳು ಹುಚ್ಚೆದ್ದು ಕುಣಿಯುತ್ತಿದ್ದಾರೆ. ಕಿಶನ್​ ಅವರನ್ನು ಯಶ್​ ಅವರಿಗೆ ಹೋಲಿಕೆ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories