ಎಲ್ಲರ ಆರೋಗ್ಯ ಹೇಗಿದೆ ? ಅನಾರೋಗ್ಯದ ವದಂತಿ ಮಧ್ಯೆ ಅಭಿಮಾನಿಗಳಿಗೆ ಸಲ್ಮಾನ್‌ ಖಾನ್‌ ಪ್ರಶ್ನೆ !

Published : Jul 20, 2026, 12:30 PM IST

Salman Khan : ಸಲ್ಮಾನ್‌ ಖಾನ್‌ ಆರೋಗ್ಯದ ಬಗ್ಗೆ ಜನರು ಪ್ರಶ್ನೆ ಕೇಳ್ತಿದ್ರೆ ಅಭಿಮಾನಿಗಳಿಗೆ ಸಲ್ಮಾನ್ ಖಾನ್ ಉಲ್ಟಾ ಪ್ರಶ್ನೆ ಕೇಳಿದ್ದಾರೆ. ಒಂದಿಷ್ಟು ಫೋಟೋ ಜೊತೆ ಸಲ್ಮಾನ್‌ ಖಾನ್‌ ಕೇಳಿದ ಫೋಟೋ ಈಗ ವೈರಲ್‌ ಆಗಿದೆ.

PREV
16
ಸಲ್ಮಾನ್‌ ಖಾನ್‌ ಆರೋಗ್ಯದಲ್ಲಿ ಏರುಪೇರು?

ಬಾಲಿವುಡ್‌ ನ ಬ್ಯಾಚ್ಯುಲರ್ ಸಲ್ಮಾನ್‌ ಖಾನ್‌ ಯಾವಾಗ್ಲೂ ದಬಾಂಗ್‌ ಸ್ಟೈಲ್‌ ನಲ್ಲಿ ಕಾಣಿಸಿಕೊಳ್ತಾರೆ. ಅವರ ಫಿಟ್‌ ದೇಹ ಫ್ಯಾನ್ಸ್‌ ಆಕರ್ಷಿಸುತ್ತೆ. ಆದ್ರೆ ಈ ಬಾರಿ ಸಲ್ಮಾನ್‌ ಖಾನ್‌ ಲುಕ್‌ ಅಭಿಮಾನಿಗಳಲ್ಲಿ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಸಲ್ಮಾನ್‌ ಖಾನ್‌ ಆರೋಗ್ಯ ಸರಿ ಇಲ್ವಾ ಎನ್ನುವ ಪ್ರಶ್ನೆ ಏಳುವಂತೆ ಮಾಡಿದೆ.

26
ಸುಸ್ತಾದಂತೆ ಕಂಡ ಸಲ್ಮಾನ್‌ ಖಾನ್

ಶುಕ್ರವಾರ ಮುಂಬೈನಲ್ಲಿ ನಡೆದ ಸ್ಲಂ ರಿಹ್ಯಾಬಿಲಿಟೇಶನ್ ಅಥಾರಿಟಿಯ ಹೊಸ ಸಪೋರ್ಟ್ ಸೆಂಟರ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಲ್ಮಾನ್ ಖಾನ್ ಕಾಣಿಸಿಕೊಂಡಿದ್ದರು. ಆದ್ರೆ ಎಂದಿನಂತೆ ಸಲ್ಮಾನ್‌ ಲವಲವಿಕೆಯಿಂದ ಇರಲಿಲ್ಲ. ಅವರ ಮುಖದಲ್ಲಿ ದಣಿವು, ಆಯಾಸ ಸ್ಪಷ್ಟವಾಗಿ ಕಾಣ್ತಿತ್ತು. ಇದು ಅಭಿಮಾನಿಗಳ ಗಮನ ಸೆಳೆದಿದೆ. ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೋ ವೇಗವಾಗಿ ವೈರಲ್‌ ಆಗಿದೆ.

36
ಬಳಕೆದಾರರ ಕಮೆಂಟ್

ಸೋಶಿಯಲ್‌ ಮೀಡಿಯಾದಲ್ಲಿ ಸಲ್ಮಾನ್‌ ಖಾನ್ ಅವರ ಈ ಬಾಡಿದ ಮುಖ ನೋಡಿ ಬಳಕೆದಾರರು ಕಮೆಂಟ್‌ ಶುರು ಮಾಡಿದ್ರು. ಸಲ್ಮಾನ್ ಖಾನ್‌ ಆರೋಗ್ಯ ಸರಿ ಇಲ್ಲ, ಅವರಿಗೆ ಯಾವುದೋ ಸಮಸ್ಯೆ ಕಾಡ್ತಿದೆ ಅಂತ ಕಮೆಂಟ್‌ ಮಾಡಿದ್ರು. ಸಲ್ಮಾನ್‌ ಖಾನ್‌ ಗೆ ವಯಸ್ಸಾಯ್ತು, ಹಾಗಾಗಿ ಮುಖ ಬದಲಾಗಿದೆ ಅಂತ ಮತ್ತೊಂದಿಷ್ಟು ಮಂದಿ ವಾದ ಮಂಡಿಸಿದ್ದರು. ಕೆಲವರು ಅತಿಯಾದ ವ್ಯಾಯಾಮ ಇದಕ್ಕೆ ಕಾರಣ ಎಂದಿದ್ದರು. ಒಟ್ಟಿನಲ್ಲಿ ಸಲ್ಮಾನ್‌ ಖಾನ್‌ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು.

46
ಸಲ್ಮಾನ್‌ ಖಾನ್‌ ಹಾಕಿದ ಪೋಸ್ಟ್

ಈ ಮಧ್ಯೆ ಸಲ್ಮಾನ್‌ ಖಾನ್‌, ಸೋಶಿಯಲ್‌ ಮೀಡಿಯಾದಲ್ಲಿ ಒಂದಿಷ್ಟು ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಅದೇ ಕಾರ್ಯಕ್ರಮದಲ್ಲಿ ಧರಿಸಿದ್ದ ಡ್ರೆಸ್‌ ಧರಿಸಿರುವ ಸಲ್ಮಾನ್‌ ಖಾನ್, ನಿಮ್ಮೆಲ್ಲರ ಆರೋಗ್ಯ ಹೇಗಿದೆ ಅಂತ ಪ್ರಶ್ನೆ ಕೇಳಿ ಶೀರ್ಷಿಕೆ ಹಾಕಿದ್ದಾರೆ.

56
ಏನು ಹೇಳ ಹೊರಟಿದ್ದಾರೆ ಸಲ್ಮಾನ್ ?

ಸಲ್ಮಾನ್‌ ಖಾನ್‌ ಈ ಪೋಸ್ಟ್‌ ಹಾಗೂ ಶೀರ್ಷಿಕೆ ಕೂಡ ಈಗ ಚರ್ಚೆ ಆಗ್ತಿದೆ. ನಾನು ಆರಾಮಾಗಿದ್ದೇನೆ ಎಂಬುದನ್ನು ತಿಳಿಸಲು ಸಲ್ಮಾನ್‌ ಈ ಫೋಟೋ ಹಂಚಿಕೊಂಡಿದ್ದಾರಾ ಗೊತ್ತಿಲ್ಲ. ವದಂತಿಗೆ ತೆರೆ ಎಳೆಯಲು ಸಲ್ಮಾನ್‌ ಪ್ರಯತ್ನ ನಡೆಸ್ತಿದ್ದಾರಾ ಎಂಬುದು ಸ್ಪಷ್ಟವಾಗಿಲ್ಲ. ಸಲ್ಮಾನ್ ತಮ್ಮ ಪೋಸ್ಟ್‌ ನಲ್ಲಿ ತಮ್ಮ ಆರೋಗ್ಯದ ಬಗ್ಗೆ ಮಾಹಿತಿ ನೀಡದೆ ಜನರ ಆರೋಗ್ಯ ವಿಚಾರಿಸಿದ್ದರು, ವದಂತಿಗೆ ಪರೋಕ್ಷ ಉತ್ತರ ಎನ್ನುತ್ತಿದ್ದಾರೆ.

66
ಸಲ್ಮಾನ್‌ ಮುಂದಿನ ಸಿನಿಮಾ

ಸಲ್ಮಾನ್ ಖಾನ್ ಶೀಘ್ರದಲ್ಲೇ ಮಾತೃಭೂಮಿ: ಮೇ ವಾರ್ ರೆಸ್ಟ್ ಇನ್ ಪೀಸ್ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾ 2020ರಲ್ಲಿ ನಡೆದ ಗಲ್ವಾನ್ ಕಣಿವೆಯ ಭಾರತ-ಚೀನಾ ಸಂಘರ್ಷದ ಘಟನೆಗಳನ್ನು ಆಧರಿಸಿದೆ. ವಂಶಿ ಪೈಡಿಪಲ್ಲಿ ನಿರ್ದೇಶನದ ಈ ಸಿನಿಮಾದಲ್ಲಿ ನಯನತಾರಾ ಜೊತೆ ಸಲ್ಮಾನ್‌ ಖಾನ್ ಅಭಿನಯಿಸಲಿದ್ದು, ಈ ಚಿತ್ರ 2027ರ ಈದ್ ವೇಳೆಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories