ಹೊಸ ಸೀರೆ, ಬಳೆ ತೊಟ್ಟು ಲೈವ್​ನಲ್ಲಿ ವಿಶೇಷ ಸುದ್ದಿ ಕೊಟ್ಟ Karna Serial ನಮ್ರತಾ ಗೌಡ

Published : Aug 12, 2026, 12:39 PM IST

ಕರ್ಣ ಸೀರಿಯಲ್‌ನ ನಿತ್ಯಾ ಪಾತ್ರದ ಮೂಲಕ ಜನಪ್ರಿಯರಾಗಿದ್ದ ನಟಿ ನಮ್ರತಾ ಗೌಡ ಇದೀಗ ಧಾರಾವಾಹಿಯಿಂದ ಹೊರಬಂದಿದ್ದಾರೆ. ಸದ್ಯ ಅವರು ಪಿಸಿ. ಶೇಖರ್ ನಿರ್ದೇಶನದ 'ಮಹಾನ್' ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಅವರೊಂದಿಗೆ ನಟಿಸುತ್ತಿದ್ದು, ರೈತರ ಹಕ್ಕುಗಳಿಗಾಗಿ ಹೋರಾಡುವ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ.

PREV
16
ಕರ್ಣ ಸೀರಿಯಲ್​

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಸ್ಟೋರಿಯೇ ಫುಲ್​ ಬದಲಾಗಿ ಹೋಗಿದೆ. ಆರಂಭದಲ್ಲಿ ನಿಧಿ, ನಿತ್ಯಾ ಮತ್ತು ಕರ್ಣನ ಸುತ್ತಲೂ ಸುತ್ತುತ್ತಿದ್ದ ಸ್ಟೋರಿ ಬೇರೆ ರೂಪ ಪಡೆದು ನಿತ್ಯಾ ಕಣ್ಮರೆಯಾಗಿದ್ದಾಳೆ. ಈಗ ಸ್ಟೋರಿ ಕರ್ಣನ ಕುಟುಂಬದ ಸುತ್ತಲೂ ಸುತ್ತುತ್ತಿದೆ.

26
ನಿತ್ಯಾಗೆ ಡಿಮಾಂಡ್​

ಆರಂಭದಲ್ಲಿ ನಿತ್ಯಾ ಇದ್ದಾಗ ಸೀರಿಯಲ್​ ಅನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದರು. ನಿತ್ಯಾನ್ನು ಕರ್ಣ ಅನಿವಾರ್ಯವಾಗಿ ಮದುವೆಯಾದಾಗ, ಮುಂದೇನು ಎನ್ನುವ ತವಕ ಇತ್ತು. ಕೊನೆಗೆ ಈಗ ನಿತ್ಯಳನ್ನು ಸಂಪೂರ್ಣ ದೂರ ಮಾಡಿದ್ದು, ನಿತ್ಯಾ ಪಾತ್ರಧಾರಿಯಾಗಿದ್ದ ನಮ್ರತಾ ಗೌಡ (Namratha Gowda) ಸದ್ಯ ಸೋಷಿಯಲ್​ ಮೀಡಿಯಾದಲ್ಲಿ ಮಾತ್ರ ಆ್ಯಕ್ಟೀವ್​ ಆಗಿದ್ದಾರೆ.

36
ಸಿನಿಮಾದಲ್ಲಿ ನಾಯಕಿಯಾಗಿ

ಅಷ್ಟಕ್ಕೂ ನಟಿ ನಮ್ರತಾ ಗೌಡ ಸದ್ಯ ಪಿಸಿ. ಶೇಖರ್ ನಿರ್ದೇಶನದ ʻಮಹಾನ್ʼ ಸಿನಿಮಾದಲ್ಲಿ ನಗರದಿಂದ ಹಳ್ಳಿಗೆ ಮರಳಿ ರೈತರ ಹಕ್ಕುಗಳಿಗಾಗಿ ಹೋರಾಡುವ ವಿದ್ಯಾವಂತ ಯುವತಿಯಾಗಿ ಅವರು ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಚಿತ್ರತಂಡ ಇದರ ಫಸ್ಟ್​ ಲುಕ್​ ಬಿಡುಗಡೆ ಮಾಡಿದೆ. ನಟ ಶಿವರಾಜ್‌ಕುಮಾರ್ ಹಾಗೂ ವಿಜಯ ರಾಘವೇಂದ್ರ ಅವರಂತಹ ದೊಡ್ಡ ನಟರ ಜೊತೆ ನಮ್ರತಾ ಅವರ ಈ ಹೊಸ ಅವತಾರ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ.

46
ವಿಶೇಷ ಸುದ್ದಿ ಕೊಟ್ಟ ನಟಿ

ಇದರ ನಡುವೆಯೇ ಲೈವ್​ಗೆ ಬಂದ ನಟಿ ನಮ್ರತಾ ಗೌಡ ವಿಶೇಷ ಸುದ್ದಿ ನೀಡಿದ್ದಾರೆ. ಅದೇನೆಂದರೆ ಒಂದು ಫಂಕ್ಷನ್​ಗೆ ಹೋಗಲು ರೆಡಿಯಾಗಿರುವ ನಟಿ, ವಿಶೇಷ ಸೀರೆಯನ್ನು ತೋರಿಸಿ, ದೇವಸ್ಥಾನದಲ್ಲಿ ಅದನ್ನು ಕೊಟ್ಟಿರುವುದಾಗಿ ಹೇಳಿದ್ದಾರೆ. ಜೊತೆಗೆ ಬಳೆ, ಸರ ಎಲ್ಲವನ್ನೂ ತೋರಿಸುತ್ತಾ ಅದನ್ನು ಧರಿಸಿ ಅಪ್ಪಟ ಭಾರತೀಯ ನಾರಿಯಾಗಿ ಕಂಗೊಳಿಸಿದ್ದಾರೆ.

56
ದೇವಸ್ಥಾನದಲ್ಲಿ ಪೂಜೆ

ಬಳಿಕ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಇದರ ವಿಡಿಯೋ ಶೇರ್​ ಮಾಡಿಕೊಂಡಿದ್ದಾರೆ. ಇದರಲ್ಲಿ ಕೆಲವೊಂದು ಐಟಮ್ಸ್​ ಜಾಹೀರಾತಿನ ಭಾಗವಾಗಿದ್ದರೂ, ಅರ್ಥಾತ್​ ಪ್ರಮೋಷನ್​ ಆ್ಯಡ್​ ಆಗಿದ್ದರೂ, ವೀಕ್ಷಕರು ನಮ್ರತಾ ಗೌಡ ಅವರ ಲುಕ್​ಗೆ ಫಿದಾ ಆಗಿದ್ದಾರೆ.

66
ಸಿನಿಮಾ ಕುರಿತು

ಇನ್ನು ನಮ್ರತಾ ಗೌಡ ಅವರು ನಟಿಸುತ್ತಿರುವ ಸಿನಿಮಾ ಕುರಿತು ಹೇಳುವುದಾದರೆ, ಇಲ್ಲಿ ನಟಿ ಸಮಾಜಕ್ಕೆ ಪ್ರೇರಣೆಯಾಗುವಂತಹ ಅತ್ಯಂತ ಜವಾಬ್ದಾರಿಯುತ ಪಾತ್ರದಲ್ಲಿದ್ದಾರೆ. ನಗರದಲ್ಲಿ ಉನ್ನತ ವಿದ್ಯಾಭ್ಯಾಸವನ್ನ ಪೂರೈಸಿ, ನಂತರ ಹಳ್ಳಿಗೆ ಮರಳಿ ರೈತರ ಕಷ್ಟ-ನಷ್ಟಗಳಿಗೆ ಹೆಗಲು ಕೊಡುವ ಹಾಗೂ ಅವರ ಹಕ್ಕುಗಳಿಗಾಗಿ ಧ್ವನಿಯಾಗುವ ಕಳಕಳಿಯುಳ್ಳ ವಿದ್ಯಾವಂತ ಯುವತಿಯಾಗಿ ಮಿಂಚಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories