116 ನಿಮಿಷದ ಮಲಯಾಳಂ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾ; ಫ್ರೀಯಾಗಿಯೇ ನೋಡಿ

Published : Aug 12, 2026, 11:40 AM IST

ಮಲಯಾಳಂ ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ನಿರ್ಜನ ಪ್ರದೇಶದ ರೈಲ್ವೆ ಗಾರ್ಡ್‌ಗೆ ರೈಲಿನಿಂದ ಬಿದ್ದ ಯುವತಿಯೊಬ್ಬಳು ಸಿಕ್ಕ ನಂತರ ಕಥೆಯು ನಿಗೂಢ ತಿರುವುಗಳನ್ನು ಪಡೆದುಕೊಳ್ಳುತ್ತದೆ. ಯಾವುದು ಈ ಸಿನಿಮಾ ಎಂದು ನೋಡೋಣ ಬನ್ನಿ.

PREV
15
ಕಥೆ ಜೊತೆ ಸಸ್ಪೆನ್ಸ್

OTT ಬಂದ್ಮೇಲೆ ಜನರು ಮನೆಯಲ್ಲಿಯೇ ಕುಳಿತು ತಮ್ಮಿಷ್ಟದ ಹೊಸ ಸಿನಿಮಾಗಳನ್ನು ನೋಡುತ್ತಾರೆ. ವೀಕೆಂಡ್ ಬಂದ್ರೆ ಸಾಕು ಯಾವ ಸಿನಿಮಾ ನೋಡಬೇಕು ಎಂದು ಮೊದಲೇ ಪ್ಲಾನ್ ಮಾಡಿಕೊಳ್ಳುತ್ತಾರೆ. ನೀವು ಹಾರರ್‌, ಥ್ರಿಲ್ಲರ್ ಸಿನಿಮಾ ಪ್ರಿಯರಾಗಿದ್ದು, ನಿಮಗಾಗಿ ಒಳ್ಳೆಯ ಕಥೆ ಜೊತೆ ಸಸ್ಪೆನ್ಸ್ ಹೊಂದಿರುವ ಮಲಯಾಳಂ ಭಾಷೆಯ ಫಿಲಂ ಮಾಹಿತಿಯನ್ನು ತಂದಿದ್ದೇವೆ.

25
Must Watch ಮೂವಿ

ಇದೊಂದು ಸೈಕಲಾಜಿಕಲ್ ಸಸ್ಪೆನ್ಸ್ ಥ್ರಿಲ್ಲರ್ ಕಥೆಯನ್ನು ಹೊಂದಿರುವ ಸಿನಿಮಾ. ಡಿಜಿಟಲ್ ಪ್ಲಾಟ್‌ಫಾರಂನಲ್ಲಿ Must Watch ಮೂವಿಗಳಲ್ಲಿ ಒಂದಾಗಿದೆ. ಇಷ್ಟು ಮಾತ್ರವಲ್ಲ IMDBಯಲ್ಲಿಯೂ 6.8 ಉತ್ತಮ ರೇಟಿಂಗ್ ಪಡೆದುಕೊಂಡಿದೆ. ಹಾಗಾದ್ರೆ ಯಾವುದು ಈ ಸಿನಿಮಾ? ಕಲಾವಿದರು ಯಾರು ಎಂಬುದನ್ನು ನೋಡೋಣ ಬನ್ನಿ.

35
ಲೆವಲ್ ಕ್ರಾಸ್ (Level Cross)

2024ರಲ್ಲಿ ಬಿಡುಗಡೆಯಾದ ಲೆವಲ್ ಕ್ರಾಸ್ (Level Cross) ಸಿನಿಮಾ ಬಗ್ಗೆ ಹೇಳುತ್ತಿದ್ದೇವೆ. ಅರ್ಫಾಜ್ ಅಯೂಬ್ ನಿರ್ದೇಶನದ ಈ ಸಿನಿಮಾದಲ್ಲಿ ಅಮಲಾ ಪೌಲ್, ಆಸಿಪ್ ಅಲಿ, ಶರಾಪ್ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಮಲಯಾಳಂ ಭಾಷೆಯ ಉತ್ತಮ ಸೈಕಾಲಜಿಕಲ್ ಥ್ರಿಲ್ಲರ್ ಸಿನಿಮಾಗಳಲ್ಲಿ ಒಂದಾಗಿದೆ.

45
ಚಿತ್ರದ ಕಥೆ ಏನು?

ಈ ಚಿತ್ರ ನಿರ್ಜನ ಪ್ರದೇಶದಲ್ಲರೋ ರೈಲ್ವೆ ಕ್ರಾಸಿಂಗ್‌ನಿಂದ ಆರಂಭವಾಗುತ್ತದೆ. ಇಲ್ಲಿಯ ರೈಲ್ವೆ ಗಾರ್ಡ್ (ಆಸಿಫ್ ಅಲಿ) ಒಬ್ಬನೇ ಇರುತ್ತಾನೆ. ಈ ವ್ಯಕ್ತಿಯ ಜೀವನಶೈಲಿ ಸಾಮನ್ಯರಿಗಿಂತ ತುಂಬಾನೇ ವಿಭಿನ್ನವಾಗಿರುತ್ತದೆ. ಈ ವ್ಯಕ್ತಿ ರೈಲುಗಳು ಕ್ರಾಸಿಂಗ್‌ನಲ್ಲಿ ಹಾದು ಹೋಗುತ್ತಿರೋದನ್ನು ನೋಡಿ ಮನೆಗೆ ಹಿಂದಿರುಗುತ್ತಿರುತ್ತಾನೆ. ಒಮ್ಮೆ ಈ ಲೆವೆಲ್ ಕ್ರಾಸಿಂಗ್‌ನಲ್ಲಿ ಚಲಿಸುತ್ತಿರೋ ರೈಲಿನಿಂದ ಯುವತಿ (ಅಮಲಾ ಪೌಲ್) ಕೆಳಗೆ ಬೀಳುತ್ತಾಳೆ.

55
ಪ್ರತಿಯೊಂದು ದೃಶ್ಯ ಹೊಸ ತಿರುವು

ಗಾಯಗೊಂಡ ಯುವತಿಯನ್ನು ಆ ವ್ಯಕ್ತಿ ಮನೆಗೆ ಕರೆದುಕೊಂಡು ಹೋಗುತ್ತಾನೆ. ಇಲ್ಲಿಂದ ಕಥೆ ಸಂಪೂರ್ಣವಾಗಿ ಹೊಸ ಆಯಾಮ ಪಡೆದುಕೊಳ್ಳುತ್ತದೆ. ಮುಂದಿನ ಪ್ರತಿಯೊಂದು ದೃಶ್ಯ ಹೊಸ ತಿರುವುಗಳನ್ನು ಪಡೆದುಕೊಳ್ಳುತ್ತಾ ಸಾಗುತ್ತದೆ. ಮುಂದೇನು ಆಗುತ್ತೆ ಎಂಬುದನ್ನು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕು. ಪ್ರೈಮ್ ವಿಡಿಯೋ/Youtubeದಲ್ಲಿ ಲೆವೆಲ್ ಕ್ರಾಸ್ ಸಿನಿಮಾ ನೋಡಬಹುದಾಗಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories