ಕೆನಡಾದಲ್ಲಿ ಕಪಿಲ್ ಶರ್ಮಾ ಕೆಫೆ ಮೇಲೆ ದಾಳಿ ಯಾಕಾಯ್ತು? ಮೊದಲ ಪ್ರತಿಕ್ರಿಯೆ ಕೊಟ್ಟ ಆಂಕರ್...!

Published : Jul 11, 2025, 11:23 AM ISTUpdated : Jul 11, 2025, 11:25 AM IST

ಕಪಿಲ್ ಶರ್ಮಾ ಅವರ ಕೆನಡಾದ ಕ್ಯಾಪ್ಸ್ ಕೆಫೆಯಲ್ಲಿ ಗುರುವಾರ ಗುಂಡಿನ ದಾಳಿ ನಡೆದಿದೆ. ಈ ಘಟನೆಗೆ ಕಪಿಲ್ ಶರ್ಮಾ ಅವರ ಮೊದಲ ಪ್ರತಿಕ್ರಿಯೆ ಹೊರಬಿದ್ದಿದೆ. ಕಪಿಲ್ ಇತ್ತೀಚೆಗೆ ಕೆನಡಾದಲ್ಲಿ ಈ ಕೆಫೆಯನ್ನು ತೆರೆದಿದ್ದರು. 

PREV
19
ಕಾಮಿಡಿ ಕಿಂಗ್ ಕಪಿಲ್ ಶರ್ಮಾ ಕೆನಡಾದಲ್ಲಿ ಹೊಸದಾಗಿ ಕ್ಯಾಪ್ಸ್ ಕೆಫೆ ತೆರೆದಿದ್ದರು. ಆದರೆ, ಇಲ್ಲಿ ಗುಂಡಿನ ದಾಳಿ ನಡೆದಿದೆ.
29
ಕ್ಯಾಪ್ಸ್ ಕೆಫೆಯಲ್ಲಿ ರುಚಿಕರವಾದ ಕಾಫಿ ಜೊತೆಗೆ ಎಲ್ಲರನ್ನೂ ಒಟ್ಟಿಗೆ ಸೇರಿಸಿ ಸಂತೋಷ ಪಡುವ ಉದ್ದೇಶದಿಂದ ತೆರೆದಿದ್ದೆ ಎಂದು ಕಪಿಲ್ ಹೇಳಿದ್ದಾರೆ.
39
ನಡೆದ ಘಟನೆಯಿಂದ ನಾನು ಶಾಕ್ ಆಗಿದ್ದೇನೆ. ಆದರೆ, ಧೃತಿಗೆಡದೆ ಮುಂದುವರಿಯುತ್ತೇನೆ ಎಂದು ಕಪಿಲ್ ಹೇಳಿದ್ದಾರೆ.
49
ನಿಮ್ಮೆಲ್ಲರ ಬೆಂಬಲಕ್ಕೆ ಧನ್ಯವಾದಗಳು. ನಿಮ್ಮ ವಿಶ್ವಾಸದಿಂದಲೇ ಕ್ಯಾಪ್ಸ್ ಕೆಫೆ ನಿಂತಿದೆ ಎಂದು ಕಪಿಲ್ ಹೇಳಿದ್ದಾರೆ.
59
ಹಿಂಸೆ ವಿರುದ್ಧ ದೃಢವಾಗಿ ನಿಂತು ಕ್ಯಾಪ್ಸ್ ಕೆಫೆಯನ್ನು ಮತ್ತೆ ನಿಲ್ಲಿಸೋಣ ಎಂದು ಕಪಿಲ್ ಹೇಳಿದ್ದಾರೆ.
69
ಕಪಿಲ್ ಶರ್ಮಾ ಕೆಫೆ ಮೇಲೆ ಖಾಲಿಸ್ತಾನ್ ಉಗ್ರರು ದಾಳಿ ನಡೆಸಿ 9 ಸುತ್ತು ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ.
79
ಗುರುವಾರ ಬೆಳಗ್ಗೆ 1.50ಕ್ಕೆ ಪೊಲೀಸರಿಗೆ ಕರೆ ಬಂದಿತ್ತು. ಕೂಡಲೇ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ.
89
ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇತರೆ ಘಟನೆಗಳ ಜೊತೆ ಸಂಬಂಧ ಇರಬಹುದು ಎಂದು ಶಂಕಿಸಲಾಗಿದೆ.
99
ಕಪಿಲ್ ಶರ್ಮಾ ಇತ್ತೀಚೆಗೆ ಕೆನಡಾದಲ್ಲಿ ಕ್ಯಾಪ್ಸ್ ಕೆಫೆ ತೆರೆದಿದ್ದರು. ಇಲ್ಲಿ ತಿಂಡಿ-ತಿನಿಸುಗಳ ಬೆಲೆ 500 ರೂ.ಗಳಿಂದ ಶುರು.
Read more Photos on
click me!

Recommended Stories