Su From So ಕಲಾವಿದರ ಬಗ್ಗೆ ನಿಮಗೆಷ್ಟು ಗೊತ್ತು? ರವಿ ಅಣ್ಣಾ, ಅಶೋಕ್, ಬಾನು, ಬಾವ ನಿಜವಾದ ಹೆಸರೇನು ಗೊತ್ತಾ?

Published : Jul 31, 2025, 08:58 AM ISTUpdated : Jul 31, 2025, 04:30 PM IST

Sulochana From Someshwara Movie: Su From So ಚಿತ್ರದಲ್ಲಿ ರವಿ ಅಣ್ಣಾ, ಬಾನು, ಚಂದ್ರ, ಬಾವ ಸೇರಿದಂತೆ ಪ್ರತಿಯೊಂದು ಪಾತ್ರಗಳು ಗಮನ ಸೆಳೆಯುತ್ತವೆ. ಕರಾವಳಿ ಪ್ರಾದೇಶಿಕತೆಯನ್ನು ಹೊಂದಿದ್ದರೂ, ಎಲ್ಲಾ ಕನ್ನಡಿಗರಿಗೂ ಈ ಚಿತ್ರ ಇಷ್ಟವಾಗುತ್ತದೆ. ಈ ಚಿತ್ರ ಗೆಲುವಿನತ್ತ ದಾಪುಗಾಲು ಹಾಕುತ್ತಿದೆ.

PREV
19
Su From So ಸಿನಿಮಾ

ಚಂದನವನಕ್ಕೆ ಮತ್ತೆಗ ಗೆಲುವಿನ ರುಚಿಯನ್ನು ನೀಡುತ್ತಿರುವ ಚಿತ್ರವೇ Su From So. 25ನೇ ಜುಲೈ 2025ರಂದು ಬಿಡುಗಡೆಯಾದ Su From So ಸಿನಿಮಾ ಮೊದಲ ದಿನದಂದು ಅತ್ಯತ್ತುಮ ಪ್ರದರ್ಶನ ಕಾಣುತ್ತಿದೆ. ಕಲಾವಿದರನ್ನು ಅವರು ಅಭಿನಯಿಸಿದ ಪಾತ್ರಗಳಿಂದ ಗುರುತಿಸಲು ಆರಂಭಿಸಿದ್ರ ಆ ಸಿನಿಮಾ ಗೆದ್ದಿದೆ ಮತ್ತು ನಟ/ಟಿಯರು ನೀಡಲಾದ ರೋಲ್‌ನಲ್ಲಿ ಪರಾಕಯ ಪ್ರವೇಶ ಮಾಡಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು.

29
Su From So ಕಲಾವಿದರು

ಸಿನಿಮಾವೊಂದ ಯಶಸ್ಸು ಕಂಡ್ರೆ ಚಿತ್ರದ ಸಣ್ಣ ಪಾತ್ರವೂ ಪ್ರೇಕ್ಷಕರ ಗಮನವನ್ನು ಸೆಳೆಯುತ್ತದೆ. ಇತ್ತೀಚಿನ ವರ್ಷಗಳಲ್ಲಿ ಕಾಂತಾರಾ, ಕೆಜಿಎಫ್‌ ನಂತಹ ಸಿನಿಮಾಗಳು ಬಿಡುಗಡೆಯಾದಾಗ ಪ್ರತಿಯೊಂದು ಪಾತ್ರವನ್ನು ವೀಕ್ಷಕರು ಗುರುತಿಸಿದ್ದಾರೆ. ಇದೀಗ ಆ ಸಾಲಿಗೆ Su From So ಸೇರ್ಪಡೆಯಾಗುತ್ತದೆ. 

ಚಿತ್ರದ ನಿರ್ದೇಶಕರಾದ ಜೆ.ಪಿ.ತುಮಿನಾಡ್ ಅವರು ಪ್ರತಿಯೊಂದು ಪಾತ್ರವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ. ಹಾಗಾಗಿ ಯಾವ ಸನ್ನಿವೇಶದಲ್ಲಿಯೂ Su From So ನಿಮಗೆ ಬೇಸರವನ್ನುಂಟು ಮಾಡಲ್ಲ. ಇದೊಂದು ಪಕ್ಕಾ ಕರಾವಳಿ ಪ್ರಾದೇಶಿಕತೆಯನ್ನು ಹೊದ್ದುಕೊಂಡಿರುವ ಚಿತ್ರವಾಗಿದ್ದರೂ, ಎಲ್ಲಾ ಭಾಗದ ಕನ್ನಡಿಗರಿಗೂ ಇಷ್ಟವಾಗುತ್ತಿದೆ. Su From So ಚಿತ್ರದ ಪಾತ್ರಗಳ ಕುರಿತಾದ ಒಂದಿಷ್ಟು ಮಾಹಿತಿ ಇಲ್ಲಿದೆ.

39
1.ರವಿ ಅಣ್ಣಾ

Su From So ಚಿತ್ರದ ಪ್ರಮುಖ ಆಕರ್ಷಣೆಯೇ ಎಲ್ಲರ ಮೆಚ್ಚಿನ ರವಿ ಅಣ್ಣಾ. ಅವಿವಾಹಿತನಾಗಿರುವವ ರವಿ ಅಣ್ಣಾ ಬಂದ್ರೆ ಒಂದು ಗತ್ತು. ಇಡೀ ಊರಿನಲ್ಲಿ ರವಿ ಅಣ್ಣನಿಗೆ ವಿಶೇಷ ಗೌರವ ಇರುತ್ತದೆ. ರವಿ ಅಣ್ಣಾ ಪಾತ್ರದಲ್ಲಿ ನಟಿಸಿರುವ ಕಲಾವಿದರ ಹೆಸರು ಶನೀಲ್ ಗೌತಮ್ (Shaneel Gautham). 

ನಟನೆಯ ಜೊತೆಯಲ್ಲಿಯೂ ಬರಹಗಾರರಾಗಿಯೂ ಗುರುತಿಸಿಕೊಂಡಿದ್ದಾರೆ. ಕಾಂತಾರ ಸಿನಿಮಾದಲ್ಲಿ ರವಿ ಅಣ್ಣಾ ಭಾಗವಾಗಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ (shaneel.gautham) ಈವರೆಗೆ 15.6K ಫಾಲೋವರ್ಸ್‌ಗಳನ್ನು ಹೊಂದಿದ್ದಾರೆ. ನಟ ಶನೀಲ್ ಗೌತಮ್ ಅವರು ಬಂಟ್ವಾಳ ಮೂಲದವರಾಗಿದ್ದು, ಮಂಗಳೂರು ವಿಶ್ವವಿದ್ಯಾಲಯದಿಂದ ಪದವಿ ಪಡೆದುಕೊಂಡಿದ್ದಾರೆ.

49
2.ಅಶೋಕ್/ಸೋಮೇಶ್ವರದ ಸುಲೋಚನ

ಚಿತ್ರದ ನಿರ್ದೇಶಕರಾಗಿರುವ ಜೆ.ಪಿ.ತುಮಿನಾಡ್ ಅವರೇ ಅಶೋಕ್ ಪಾತ್ರದಲ್ಲಿ ನಟಿಸಿದ್ದಾರೆ. ಕಥಾ ಸಂಗಮ, ಸಪ್ತ ಸಾಗರದಾಜೆ ಎಲ್ಲೋ ಸಿನಿಮಾಗಳಲ್ಲಿಯೂ ಜೆ.ಪಿ.ತುಮಿನಾಡ್ ಕೆಲಸ ಮಾಡಿದ್ದಾರೆ. ಲಭ್ಯವಿರೋ ಮಾಹಿತಿ ಪ್ರಕಾರ, ಇವರದ್ದೇ ಆದ ಸ್ವಂತ ತುಳು ನಾಟಕ ತಂಡವಿದ್ದು, ಕಳೆದ 10 ವರ್ಷಗಳಿಂದ ಯಶಸ್ವಿಯಾಗಿ ನಡೆಸುತ್ತಿದ್ದಾರೆ. ಸಪ್ತ ಸಾಗರದಾಚೆ ಎಲ್ಲೊ side B ಸಿನಿಮಾದಲ್ಲಿ ನಟಿಸಿದ್ದಾರೆ. ರಾಜ್ ಬಿ ಶೆಟ್ಟಿ ತಂಡದೊಂದಿಗೆ ಜೆ.ಪಿ.ತುಮಿನಾಡ್ ಗುರುತಿಸಿಕೊಂಡಿದ್ದಾರೆ.

59
3.ಬಾನು

ಬಾನು ಪಾತ್ರ Su From So ಸಿನಿಮಾದಲ್ಲಿ ರೋಚಕ ತಿರುವು ನೀಡುತ್ತದೆ. ಬಾನು ಪಾತ್ರದಲ್ಲಿ ನಟಿಸಿರೋದು ಅದ್ಭುತ ಕಲಾವಿದೆ ಹೆಸರು ಸಂಧ್ಯಾ ಅರಕೆರೆ. ಮಂಡ್ಯ ಜಿಲ್ಲೆಯವರಾದ ಸಂಧ್ಯಾ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಸಂಧ್ಯಾ ಅರಕೆರೆ ನಟಿಸಿದ ಮೊದಲ ಸಿನಿಮಾ 'ಸುಳಿ'. 

ಹೀಗೆ ಭೀಮ ಸೇನ ನಳ ಮಹರಾಜ, ಬೈ ಟು ಲವ್, ಒಂದಲ್ಲ ಎರಡಲ್ಲ ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ರಂಗಭೂಮಿ ಕಲಾವಿದೆಯಾಗಿರುವ ಸಂಧ್ಯಾ ಅವರು ಗಾಂಧಿ ವರ್ಸಸ್ ಗಾಂಧಿ, ಸೀತಾ ಸ್ವಯಂವರ, ಅಂಬೇಡ್ಕರ್ ಅಂತಹ ನಾಟಕಗಳಲ್ಲಿಯೂ ನಟಿಸಿದ್ದಾರೆ.

69
4.ಚಂದ್ರ

ಚಿತ್ರದ ಕಚಗುಳಿಯನ್ನು ಹೆಚ್ಚುವಂತೆ ಮಾಡುವ ಮತ್ತೊಂದು ಪಾತ್ರವೇ ಚಂದ್ರ. ಹಿರಿಯ ಕಲಾವಿದರಾಗಿರುವ ಪ್ರಕಾಶ್ ತುಮಿನಡ್ ಈಗಾಗಲೇ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಮ್ಮ ವಿಶೇಷ ಅಭಿನಯದ ಮೂಲಕ ಕನ್ನಡಿಗರಿಗೆ ಹತ್ತಿರವಾಗಿರುವ ಚಂದ್ರ, ಇಲ್ಲಿಯೂ ಎಲ್ಲರಿಗೂ ಇಷ್ಟವಾಗುತ್ತಾರೆ. 

ಒಂದು ಮೊಟ್ಟೆಯ ಕಥೆ, ಕಥೆಯೊಂದು ಶುರುವಾಗಿದೆ, ಲೌಡ್ ಸ್ಪೀಕರ್, ಸ.ಹಿ.ಪ್ರಾ. ಶಾಲೆ ಕಾಸರಗೋಡು, ಯುವರತ್ನ, ಕಾಂತಾರ, ಗಾಳಿಪಟ-2, ಬ್ಯಾಚುಲರ್ ಪಾರ್ಟಿ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

79
5.ಬಾವ

ಇನ್ನು Su From So ಸಿನಿಮಾದ ಮತ್ತೊಂದು ಹೈಲೈಟ್ ಅಂದ್ರೆ ಬಾವ. ಕಡಿಮೆ ಸಮಯ ಕಾಣಿಸಿಕೊಂಡರೂ ಇಡೀ ಚಿತ್ರವನ್ನು ಆವರಿಸಿಕೊಳ್ಳುತ್ತಾರೆ. ಬಾವ ಬಂದ್ರೂ ಹಾಡು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಜನರು ರೀಲ್ಡ್ ಮಾಡಲು ಆರಂಭಿಸಿದ್ದಾರೆ. ಪುಷ್ಪರಾಜ್ ಬೋಳಾರ್ ಈ ಪಾತ್ರದಲ್ಲಿ ನಟಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.

89
6.ಸತೀಶ

ಕಾಡಲ್ಲೊಂದು ಸೊಪ್ಪಿದೆ ಅಂತ ಇಡೀ ಕರುನಾಡನ್ನು ನಕ್ಕು ನಲಿಸಿದ್ದ ನಟ ದೀಪಕ್ ರೈ ಪನಜೆ, Su From So ಸಿನಿಮಾದಲ್ಲಿ ಸತೀಶನಾಗಿ ನಟಿಸಿದ್ದಾರೆ. ರವಿ ಅಣ್ಣನ ನೆರಳಿನಂತೆ ಕಾಣಿಸುವ ಸತೀಶನ ಪಾತ್ರ ನಿಮ್ಮನ್ನು ಯಾವ ಸಮಯದಲ್ಲಿಯೂ ಬೇಸರವನ್ನುಂಟು ಮಾಡಲಾರದು. ದೀಪಕ್ ರೈ ಪನಜೆ ಅವರು ಹರಿಕಥೆ ಅಲ್ಲ ಗಿರಿಕಥೆ, ಒಂದು ಮೊಟ್ಟೆಯ ಕಥೆ, ಗರುಡ ಗಮನ ವೃಷಭ ವಾಹನ, ದೂರದರ್ಶನ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

99
7.ಸ್ವಾಮೀಜಿ

ಇನ್ನು ಸ್ವಾಮೀಜಿ ಪಾತ್ರದಲ್ಲಿ ನಟಿಸಿರುವ ರಾಜ್ ಬಿ. ಶೆಟ್ಟಿ ಅವರನ್ನು ಪರಿಚಯ ಮಾಡಿಸಿಕೊಡುವ ಅಗತ್ಯವೇ ಇಲ್ಲ. ಸ್ವಾಮೀಜಿಯ ಪಾತ್ರದಲ್ಲಿ ನಟಿಸಿರುವ ರಾಜ್ ಬಿ ಶೆಟ್ಟಿ ಅವರ ವಿಭಿನ್ನ ಅಭಿನಯ ನಿಮ್ಮನ್ನು ರಂಜಿಸುತ್ತದೆ. ನಟನೆ ಜೊತೆಯಲ್ಲಿ ನಿರ್ಮಾಣ ಕೆಲಸದಲ್ಲಿಯೂ ರಾಜ್ ಬಿ. ಶೆಟ್ಟಿ ಸಿನಿಮಾದ ಭಾಗವಾಗಿದ್ದಾರೆ.

Read more Photos on
click me!

Recommended Stories