ನಟಭೂಷಣ, ಅಂದದ ನಟ, ಸೊಗ್ಗಾಡು ಶೋಭನ್ ಬಾಬು. ಇಂಡಸ್ಟ್ರಿ ಅಂತ ಒಂದು ಕಡೆ ಇದ್ರೆ, ಶೋಭನ್ ಬಾಬು ಒಂದು ಕಡೆ. ಅವರ ಪದ್ಧತಿ, ಜೀವನಶೈಲಿ, ಆರೋಗ್ಯಕರ ಜೀವನ, ಆರ್ಥಿಕ ಶಿಸ್ತು, ಸಮಯಪ್ರಜ್ಞೆ, ಹೀಗೆ ಹೇಳ್ತಾ ಹೋದ್ರೆ, ಶೋಭನ್ ಬಾಬು ಜೀವನ ಶಿಸ್ತಿನಿಂದ ಕೂಡಿತ್ತು. ಸಿನಿಮಾದಲ್ಲಿ ದುಡಿದ ಹಣವನ್ನು ವ್ಯವಹಾರದಲ್ಲಿ ಹೂಡಿದ್ರು. ರಿಯಲ್ ಎಸ್ಟೇಟ್‌ನಲ್ಲಿ ಭಾರಿ ಆಸ್ತಿ ಮಾಡಿದ್ರು. ತಮ್ಮ ಕುಟುಂಬದ ಯಾರನ್ನೂ ಸಿನಿಮಾ ಕಡೆಗೆ ಬರದಂತೆ ನೋಡಿಕೊಂಡರು. ಒಮ್ಮೆ ನಿರ್ಧಾರ ತೆಗೆದುಕೊಂಡರೆ ಅದಕ್ಕೆ ಬದ್ಧರಾಗಿರುತ್ತಿದ್ದರು. ನಟಿಸಬಾರದು ಎಂದು ನಿರ್ಧರಿಸಿದ ಮೇಲೆ ಯಾರೇ ಬಂದು ಕೇಳಿದರೂ ಅದೇ ಮಾತು. ಕೋಟಿ ಕೊಡ್ತೀವಿ ಅಂದ್ರೂ ಸಿನಿಮಾ ಮಾಡಲಿಲ್ಲ.