Deepthi Manne marriage: 'ಪದ್ಮಾವತಿ' ಧಾರಾವಾಹಿ ಖ್ಯಾತಿಯ ನಟಿ ದೀಪ್ತಿ ಮಾನೆ, ತಮ್ಮ ಭಾವಿ ಪತಿ ರೋಹನ್ ಅವರನ್ನು ಅಭಿಮಾನಿಗಳಿಗೆ ಅಧಿಕೃತವಾಗಿ ಪರಿಚಯಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ತಮ್ಮ ಪ್ರೀತಿಯನ್ನು ಬಹಿರಂಗಪಡಿಸಿದ್ದಾರೆ.
ಕನ್ನಡ ಕಿರುತೆರೆಯಲ್ಲಿ ಹೊಸ ಅಲೆಯನ್ನು ಸೃಷ್ಟಿಸಿದ್ದ ಪದ್ಮಾವತಿ ಧಾರಾವಾಹಿಯ ತುಳಸಿ ತಾವು ಲವ್ವಲ್ಲಿ ಇರೋದಾಗಿ ಕೆಲ ದಿನಗಳ ಹಿಂದೆ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡು ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು. ಆದರೆ ಅವರು ತಾವು ಮದ್ವೆಯಾಗ್ತಿರುವ ಹುಡುಗ ಯಾರು ಎಂಬುದನ್ನು ರಿವೀಲ್ ಮಾಡಿರಲಿಲ್ಲ. ಆದರೆ ಈಗ ಭಾವಿ ಪತಿಯನ್ನು ತಮ್ಮ ಅಭಿಮಾನಿಗಳಿಗೆ ಪರಿಚಯ ಮಾಡಿಕೊಟ್ಟಿದ್ದು, ತಮ್ಮ ಭಾವಿ ಪತಿ ಹಾಗೂ ತಾನು ಜೊತೆಗಿರುವ ಕೆಲ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ.
211
ಜಗಧಾತ್ರಿಗೆ ಮಡಿಲು ತುಂಬಿದ ಝೀ ಕುಟುಂಬ
ಹೌದು ಪದ್ಮಾವತಿಯ ತುಳಸಿ ಅಲಿಯಾಸ್ ದೀಪ್ತಿ ಮಾನೆ ಮದ್ವೆಯಾಗ್ತಿದ್ದಾರೆ. ತೆಲುಗು ಕಿರುತೆರೆಯಲ್ಲಿ ಬ್ಯುಸಿಯಾಗಿರುವ ದೀಪ್ತಿ ಮಾನೆ ಅವರಿಗೆ ಅಲ್ಲಿ ಇತ್ತೀಚೆಗೆ ನಡೆದ ಜೀ ತೆಲುಗುವಿನ ಜೀ ಕುಟುಂಬ ಅವಾರ್ಡ್‌ನಲ್ಲಿ ಬಾಗಿನ ನೀಡಿ ಮಡಿಲು ತುಂಬುವ ಮೂಲಕ ಆಕೆಯ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದರು.
311
ಅರಿಶಿಣ ಕುಂಕುಮ ಹಚ್ಚಿ ಶುಭ ಹಾರೈಸಿದ ಕಲಾವಿದರು
ನಮ್ಮ ಜಗಧಾತ್ರಿ ಶೀಘ್ರದಲ್ಲೇ ಮದ್ವೆಯಾಗ್ತಿದ್ದಾರೆ. ನಮ್ಮ ಕುಟುಂಬದ ಹೆಣ್ಣಿಗೆ ಮದ್ವೆಯಾಗ್ತಿರುವ ಕಾರಣಕ್ಕೆ ನಾವು ಆಕೆಗೆ ಬಾಗಿನ ನೀಡಿ ಶುಭಹಾರೈಸುತ್ತಿದ್ದೇವೆ ಎಂದು ಹೇಳಿ ಜೀ ತೆಲುಗು ವಾಹಿನಿಯವರು ಆಕೆಗೆ ಮದುವೆಯ ವಿಶೇಷ ಉಡುಗೊರೆ ನೀಡಿದ್ದರು.
ಜೀ ತೆಲುಗು ಕುಟುಂಬದ ಎಲ್ಲಾ ಕಲಾವಿದರು ಅಲ್ಲಿ ಸೇರಿ ನಟಿಗೆ ಅರಿಶಿಣ ಕುಂಕುಮ ಹಚ್ಚಿ ಶುಭ ಹಾರೈಸಿದ್ದರು. ಈ ವೇಳೆ ಮಾತನಾಡಿದ ದೀಪ್ತಿ ಮಾನೆ ನನ್ನ ಬದುಕಿಗೆ ಬಂದಿದ್ದಕ್ಕೆ ಧನ್ಯವಾದ. ಇದು ನನ್ನ ಮತ್ತೊಂದು ಕುಟುಂಬ ಎಲ್ಲರನ್ನೂ ಈಗ ನಾನು ನಿನಗೆ ಪರಿಚಯಿಸುತ್ತಿದ್ದೇನೆ ಎಂದು ಪರಿಚಯ ಮಾಡಿಕೊಟ್ಟಿದ್ದರು.
511
ಇನ್ಸ್ಟಾಗ್ರಾಮ್‌ನಲ್ಲಿ ಫೋಟೋ ರಿವೀಲ್
ಹಾಗೆಯೇ ಇನ್ಸ್ಟಾಗ್ರಾಮ್‌ನಲ್ಲೂ ಅವರು ತಾನು ಪ್ರೀತಿಯಲ್ಲಿದ್ದೇನೆ ಎಂದು ಕೆಲ ಫೋಟೋಗಳನ್ನು ಈ ಹಿಂದೆ ರಿವೀಲ್ ಮಾಡಿದ್ದರು. ಆದರೆ ಅದರಲ್ಲಿ ಪತಿಯ ಮುಖ ತೋರಿಸಿರಲಿಲ್ಲ. ಆದರೆ ಈಗ ತಮ್ಮ ಭಾವಿ ಪತಿಯ ಜೊತೆಗಿನ ಹಲವು ಫೋಟೋಗಳನ್ನು ದೀಪ್ತಿ ಮಾನೆ ಹಂಚಿಕೊಂಡಿದ್ದು, ಜೊತೆಗೆ ಆತನ ಹೆಸರನ್ನು ರಿವೀಲ್ ಮಾಡಿದ್ದಾರೆ.
611
ರೋಹನ್ ಕೈ ಹಿಡಿಯಲಿರುವ ಪದ್ಮಾವತಿ
ಡಿಯರ್ ರೋಹನ್, ನಾನು ಕಾಯುತ್ತಿದ್ದ ವ್ಯಕ್ತಿ ನೀವು, ಮೇಲಿನಿಂದ ಬಂದ ಸ್ವರ್ಗೀಯ ಉಡುಗೊರೆ. ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ಧನ್ಯವಾದಗಳು ನಾನು ನಿಮ್ಮನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.
711
ತೆಲುಗಿನಲ್ಲಿ ಸಾಕಷ್ಟು ಅಭಿಮಾನಿಗಳನ್ನು ಹೊಂದಿರುವ ದೀಪ್ತಿ
ದೀಪ್ತಿಮಾನೆ ಅವರು ತೆಲುಗಿನ ಜಗಧಾತ್ರಿ ಸೀರಿಯಲ್‌ನಲ್ಲಿ ನಟಿಸುತ್ತಿದ್ದುಅವರಿಗೆ ಸಾಕಷ್ಟು ಅಭಿಮಾನಿಗಳಿದ್ದಾರೆ. ಭಾವಿ ದಂಪತಿಯ ಫೋಟೋ ನೋಡಿದ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
811
ದೀಪ್ತಿ ಮಾನೆ ಭಾವಿ ಪತಿ ರೋಹನ್
ದೀಪ್ತಿ ಮಾನೆಯವರು ಕನ್ನಡದ ಜನಪ್ರಿಯ ಧಾರಾವಾಹಿಗಳಲ್ಲಿ ಒಂದು ಪದ್ಮಾಪತಿ(Padmavathi serial)ಯಲ್ಲಿ ನಟಿಸಿದ್ದರು. ಐತಿಹಾಸಿಕ ಮತ್ತು ಪ್ರಸ್ತುತ ಕಾಲಘಟ್ಟದ ಕಥೆಯನ್ನು ಸೇರಿಸಿ ಮಾಡಿದಂತಹ ಸೀರಿಯಲ್ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಈ ಧಾರಾವಾಹಿಯಲ್ಲಿ ಪದ್ಮಾವತಿ ಮತ್ತು ತುಳಸಿ ಪಾತ್ರಕ್ಕೆ ಜೀವ ತುಂಬಿದವರು ನಟಿ ದೀಪ್ತಿ ಮಾನೆ.
911
ತುಳಸಿ ಪಾತ್ರಕ್ಕೆ ಜೀವ ತುಂಬಿದ್ದ ದೀಪ್ತಿ
ಪದ್ಮಾವತಿ ಧಾರಾವಾಹಿಯಲ್ಲಿ ತುಳಸಿ ಪಾತ್ರ ಮತ್ತು ತುಳಸಿ ಮತ್ತು ಸಾಮ್ರಾಟ್ ಜೋಡಿಯನ್ನು ಜನ ತುಂಬಾ ಇಷ್ಟಪಟ್ಟಿದ್ದರು. ಈ ಧಾರಾವಾಹಿಯಲ್ಲಿ ನಾಯಕನಾಗಿ ಸದ್ಯ ಮುದ್ದು ಸೊಸೆ ನಾಯಕನಾಗಿರುವ ತ್ರಿವಿಕ್ರಮ್ (Trivikram) ಅಭಿನಯಿಸಿದ್ದರು.
1011
ತೆಲುಗಿನ ಹಲವು ಸೀರಿಯಲ್‌ಗಳಲ್ಲಿ ನಟಿಸಿರುವ ದೀಪ್ತಿ
ಕನ್ನಡದಲ್ಲಿ ಒಂದೇ ಧಾರಾವಾಹಿಯಲ್ಲಿ ನಟಿಸಿದ್ದ ದೀಪ್ತಿ ಮಾನೆ (Deepthi Manne), ನಂತರ ತೆಲುಗು ಕಿರುತೆರೆಗೆ ಎಂಟ್ರಿ ಕೊಟ್ಟು, ಅಲ್ಲಿ ಸ್ಟಾರ್ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ತೆಲುಗಿನಲ್ಲಿ ಸಾಲು ಸಾಲು ಧಾರಾವಾಹಿಗಳಲ್ಲಿ ನಟಿಸಿ ಜನ ಮೆಚ್ಚುಗೆ ಪಡೆದಿದ್ದಾರೆ.
1111
ದಾವಣಗೆರೆಯ ದೀಪ್ತಿ
ಮೂಲತಃ ದಾವಣಗೆರೆಯವರಾದ ದೀಪ್ತಿ, ಬೆಂಗಳೂರಿನ ಇಂಡಿಯನ್ ಇನ್ಸ್ ಟ್ಯೂಟ್ ಆಫ್ ಫ್ಯಾಷನ್ ಟೆಕ್ನಾಲಜಿಯಲ್ಲಿ ಡಿಗ್ರಿ ಪಡೆದಿದ್ದಾರೆ. ನಟನೆಯಲ್ಲಿ ಆಸಕ್ತಿ ಬಂದಿದ್ದರಿಂದ ನಂತರ ಆಡಿಷನ್ ನೀಡಿದ ಅವರು ತಮಿಳಿನ ಎವನ್ ಸಿನಿಮಾದಲ್ಲಿ ಮೊದಲಿಗೆ ಕಾಣಿಸಿಕೊಂಡರು. ನಂತರ ಕನ್ನಡದ 'ನಮ್ಮೂರ ಹೈಕ್ಳು' ತೆಲುಗಿನ 'ಇಕ್ ಸೇ ಲವ್ ' ಹಾಗೂ ತಮಿಳಿನ 'ದೇವದಾಸ್ ಬ್ರದರ್ಸ್' ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ನಂತರ ಕಿರುತೆರೆಗೆ ಕಾಲಿಟ್ಟ ದೀಪ್ತಿ ಮೊದಲಿಗೆ ಪದ್ಮಾವತಿ ಧಾರಾವಾಹಿಯಲ್ಲಿ ನಟಿಸಿದ ಬಳಿಕ ತೆಲುಗಿನಲ್ಲು ಬ್ಯುಸಿಯಾಗಿದ್ದು, ರಾಧಮ್ಮ ಕೂತುರು, ಜಗಧಾತ್ರಿ ಧಾರಾವಾಹಿಗಳಲ್ಲಿ ನಟಿಸಿದ್ದಾರೆ.