"ನನ್ನ ಮಗ ನೋಡಿದ್ರೆ..": ಅಶ್ಲೀಲ ಫೋಟೋಗಳು ವೈರಲ್ ಆಗ್ತಿದ್ದಂತೆ ಗಿರಿಜಾ ಓಕ್ ಬೇಸರ

Published : Nov 15, 2025, 03:25 PM IST

AI morphed images controversy: ಗಿರಿಜಾ ಓಕ್ ಗಾಡ್ಬೋಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಾರೆ. ಜನರು ಅವರ ಸೌಂದರ್ಯ ಮತ್ತು ಸರಳತೆಗೆ ಮಾರುಹೋಗುತ್ತಿದ್ದಾರೆ. ಏತನ್ಮಧ್ಯೆ ಅವರು ಡೀಪ್‌ಫೇಕ್‌ಗೆ ಬಲಿಯಾಗಿದ್ದು, ನಟಿಯ ಅಶ್ಲೀಲ ಎಐ ಫೋಟೋಗಳು ವೈರಲ್ ಆಗುತ್ತಿವೆ.  

PREV
15
ದುಃಖ ವ್ಯಕ್ತಪಡಿಸಿದ ಗಿರಿಜಾ ಓಕ್

"ಜವಾನ್" ಮತ್ತು "ತಾರೆ ಜಮೀನ್ ಪರ್" ನಂತಹ ಹಿಟ್ ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ನಟಿ ಗಿರಿಜಾ ಓಕ್ ಗೋಡ್ಬೋಲೆ ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಾರೆ. ಅವರ ಇತ್ತೀಚಿನ ಸಂದರ್ಶನದ ಕ್ಲಿಪ್ ವೈರಲ್ ಆಗಿದ್ದು, ನೆಟಿಜನ್‌ಗಳು ನಟಿಯ ಸೌಂದರ್ಯವನ್ನು ನೋಡಿ ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ. ಗಿರಿಜಾ ಓಕ್ ರಾತ್ರೋರಾತ್ರಿ ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸಿದರು. ಆದರೆ ಈ ಜನಪ್ರಿಯತೆಯು ಅನುಕೂಲಗಳಷ್ಟೇ ಅನಾನುಕೂಲ ಸೃಷ್ಟಿಸಿದೆ. ಸಾಮಾಜಿಕ ಮಾಧ್ಯಮದಲ್ಲಿ ಸಂಚಲನ ಮೂಡಿಸುತ್ತಿದ್ದಂತೆಯೇ ಗಿರಿಜಾ ಅವರ ಅಶ್ಲೀಲ ಎಐ ಫೋಟೋಗಳು ವೈರಲ್ ಆಗಲು ಪ್ರಾರಂಭಿಸಿದವು. ಸದ್ಯ ಅವರು ಈ ಬಗ್ಗೆ ತಮ್ಮ ದುಃಖ ಮತ್ತು ಕೋಪವನ್ನು ವ್ಯಕ್ತಪಡಿಸಿದ್ದಾರೆ.

25
ಅಶ್ಲೀಲ ಎಐ ಫೋಟೋಗಳು

ನಟಿ ಒಂದು ವಿಡಿಯೋ ಹಂಚಿಕೊಂಡಿದ್ದು, ತನಗೆ ಹಠಾತ್ ಸಿಕ್ಕ ಈ ಪ್ರೀತಿಯ ಸುರಿಮಳೆಗೆ ಕೃತಜ್ಞತೆ ಸಲ್ಲಿಸಿದ್ದಾರೆ. ಸಾಮಾಜಿಕ ಮಾಧ್ಯಮಗಳು ಇದ್ದಕ್ಕಿದ್ದಂತೆ ಗಿರಿಜಾ ಓಕ್ ಮೇಲೆ ಪ್ರೀತಿಯನ್ನು ಸುರಿಸಿದ್ದು, ಇದೆಲ್ಲದರ ನಡುವೆ ಅವರ ಅಶ್ಲೀಲ ಎಐ ಫೋಟೋಗಳು ಸಹ ಹರಿದಾಡುತ್ತಿವೆ. ಈ ಫೋಟೋಗಳು ಅವರನ್ನು ಅಸಮಾಧಾನಗೊಳ್ಳುವಂತೆ ಮಾಡಿವೆ.

35
ಮಗ ಏನಂದುಕೊಳ್ತಾನೆ?

ಈ ಫೋಟೋದಿಂದ ತುಂಬಾ ಅನಾನುಕೂಲವಾಗಿದೆ. ತನ್ನ ಮಗ ಕೂಡ ಇವುಗಳನ್ನು ನೋಡುತ್ತಾನೆ ಎಂಬ ಭಯವಿದೆ. ಒಂದು ವೇಳೆ ಅವನು ಈ ಫೋಟೋಗಳನ್ನು ನೋಡಿದರೆ ಏನು ಯೋಚಿಸುತ್ತಾನೆ ಮತ್ತು ಅವು ಅವನ ಮೇಲೆ ಯಾವ ಪರಿಣಾಮ ಬೀರುತ್ತವೆ?. ನನ್ನ ಕೆಲವು ಫೋಟೋಗಳನ್ನು AI ಬಳಸಿ ಮಾರ್ಫ್ ಮಾಡಲಾಗಿದೆ. ಅದು ಚೆನ್ನಾಗಿ ಕಾಣುತ್ತಿಲ್ಲ. ನನಗೆ ಅವುಗಳಿಂದ ಅಸಮಾಧಾನವಾಗಿದೆ ಎಂದು ಗಿರಿಜಾ ಓಕ್ ಹೇಳಿದ್ದಾರೆ.

45
ವೈರಲ್ ಫೋಟೋಗಳು ನಕಲಿ

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಯಾವುದೇ ಟ್ರೆಂಡ್ಸ್ ವೈರಲ್ ಆಗಲಿ ಅವು ಹೆಚ್ಚಾಗಿ ನಕಲಿಯಾಗಿರುತ್ತವೆ. ಜನರು ವೀಕ್ಷಣೆಗೋಸ್ಕರ AI ಬಳಸಿ ಜನರ ಫೋಟೋಗಳನ್ನು ಕುಶಲತೆಯಿಂದ ಮಾರ್ಫ್ ಮಾಡುತ್ತಾರೆ. ಆದರೆ ಈ ಗೇಮ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂದು ಅವರಿಗೆ ಮಾತ್ರ ತಿಳಿದಿದೆ ಎಂದು ಗಿರಿಜಾ ತಿಳಿಸಿದ್ದಾರೆ.

55
ಸಪೋರ್ಟ್ ಮಾಡಿದ ಗುಲ್ಶನ್ ದೇವಯ್ಯ

ಥೆರಪಿ ಶೆರ್ಪಿ ಎಂಬ ವೆಬ್ ಸರಣಿಯಲ್ಲಿ ಗಿರಿಜಾ ಜೊತೆ ಕಾಣಿಸಿಕೊಳ್ಳಲಿರುವ ಗುಲ್ಶನ್ ದೇವಯ್ಯ ಕೂಡ ಅವರ ಬೆಂಬಲಕ್ಕೆ ನಿಂತರು. ನಟಿಯ ನಕಲಿ ಖಾತೆಗಳನ್ನು ಸೃಷ್ಟಿಸಿ ಅವರ ಫೋಟೋಗಳನ್ನು ಪ್ರಸಾರ ಮಾಡಿದವರ ವಿರುದ್ಧ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು. "ಗಿರಿಜಾ ಅವರ ಜನಪ್ರಿಯತೆಯ ಲಾಭವನ್ನು ಕೆಲವರು ಪಡೆದುಕೊಳ್ಳುತ್ತಿದ್ದಾರೆ ಎಂದು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು, ನೀವು ಅವರನ್ನು ಫಾಲೋ ಮಾಡಲು ಬಯಸಿದರೆ ಅವರ ನಿಜವಾದ ಖಾತೆ ಇಲ್ಲಿದೆ" ಎಂದು ಪೋಸ್ಟ್‌ನಲ್ಲಿ ನಟಿಯನ್ನು ಟ್ಯಾಗ್ ಮಾಡಿದ್ದಾರೆ.

Read more Photos on
click me!

Recommended Stories