ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿ ಗಿಲ್ಲಿ ನಟ, ಮನೆಯ ಮುಖ್ಯದ್ವಾರದ ಬಳಿ ನಿಂತು ತಮಾಷೆಯಾಗಿ ವಿದಾಯದ ಮಾತುಗಳನ್ನಾಡಿದ್ದಾರೆ. ಸಹ ಸ್ಪರ್ಧಿಗಳಾದ ಕಾವ್ಯಾ, ಸ್ಪಂದನಾ ಮತ್ತು ಧನುಷ್ ಅವರೊಂದಿಗಿನ ಈ ತಮಾಷೆಯ ಕ್ಷಣದ ವಿಡಿಯೋ ವೈರಲ್ ಆಗಿದ್ದು, ಫಿನಾಲೆ ತಲುಪುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಬಿಗ್‌ಬಾಸ್ ಕನ್ನಡ ಸೀಸನ್ 12ರ ಸ್ಪರ್ಧಿಯಾಗಿರುವ ಗಿಲ್ಲಿ ನಟ ಫಿನಾಲೆ ತಲುಪುತ್ತಾರೆ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ನಡೆಯುತ್ತವೆ. ಇದೀಗ ಮನೆಯಿಂದ ಹೊರಗೆ ಹೋಗುವ ಸಂದರ್ಭದ ಮಾತುಗಳನ್ನು ಗಿಲ್ಲಿ ನಟ ಹೇಳಿದ್ದಾರೆ. ಈ ವಿಡಿಯೋವನ್ನು ಸ್ಪರ್ಧಿಯ ಅಭಿಮಾನಿಗಳು ಶೇರ್ ಮಾಡಿಕೊಳ್ಳುತ್ತಿದ್ದಾರೆ.
25
ಮುಖ್ಯದ್ವಾರದ ಬಳಿ ನಿಂತ ಗಿಲ್ಲಿ ನಟ
ಸ್ವಿಮ್ಮಿಂಗ್ ಪೂಲ್‌ನಲ್ಲಿ ಕಾವ್ಯಾ ಶೈವ ಮತ್ತು ಸ್ಪಂದನಾ ಸೋಮಣ್ಣ ಸ್ವಿಮ್ ಮಾಡುತ್ತಿದ್ದಾರೆ. ಬಿಗ್‌ಬಾಸ್ ಮನೆಯ ಮುಖ್ಯದ್ವಾರದ ಬಳಿ ನಿಂತ ಗಿಲ್ಲಿ ನಟ, ಗಾರ್ಡನ್ ಏರಿಯಾದಲ್ಲಿರುವ ಎಲ್ಲಾ ಸ್ಪರ್ಧಿಗಳನ್ನು ಕರೆಯುತ್ತಾ ತಮಾಷೆಯಾಗಿ ಬೈ ಹೇಳುತ್ತಾರೆ. ಕಾವು ನಾನು ಮನೆಯಿಂದ ಹೋಗುತ್ತೇನೆ ಎಂದು ಗಿಲ್ಲಿ ನಟ ಹೇಳುತ್ತಾರೆ.
35
ಗಿಲ್ಲಿ ಹೇಳಿದ್ದೇನು?
ಗಿಲ್ಲಿ ಮಾತುಗಳನ್ನು ಕೇಳಿ ಎಲ್ಲರೂ ನಗುತ್ತಾರೆ. ಬಿಗ್‌ಬಾಸ್ ಮನೆಯಿಂದ ಹೊರಗೆ ಹೋಗುವಾಗ ಕೊನೆಯಲ್ಲಿ ಏನು ಹೇಳ್ತಿಯಾ ಎಂದು ರಘು ಮತ್ತು ಕಾವ್ಯಾ ಕೇಳುತ್ತಾರೆ. ಇಬ್ಬರ ಪ್ರಶ್ನೆ ಕೇಳುತ್ತಿದ್ದಂತೆ ಗಿಲ್ಲಿ ನಟ ತಮ್ಮ ವಿದಾಯದ ಮಾತುಗಳನ್ನು ತಮಾಷೆಯಲ್ಲಿ ಹೇಳಲು ಆರಂಭಿಸುತ್ತಾರೆ. ಗಿಲ್ಲಿ ಹೇಳಿದ್ದೇನು ಅಂತ ನೋಡೋಣ ಬನ್ನಿ.
ಐ ಲವ್ ಯು ಬಿಗ್‌ಬಾಸ್, ಈ ಏಳೆಂಟು ವಾರದ ನೆನಪುಗಳನ್ನು ನನ್ನಿಂದ ಮರೆಯೋಕೆ ಆಗಲ್ಲ. ಇಂತಹ ಒಳ್ಳೆಯ ಕ್ಷಣ ನೀಡಿದ ಬಿಗ್‌ಬಾಸ್‌ಗೆ ಥ್ಯಾಂಕ್ ಯು. ಆಚೆ ನಿಮಗೋಸ್ಕರ ಕಾಯುತ್ತಿರುತ್ತೇನೆ. ಫಿನಾಲೆ ಮುಗಿಸ್ಕೊಂಡು ಬನ್ನಿ. ಎಲ್ಲರೂ ಒಂದೆಡೆ ಸೇರೋಣ. ಕಾವು ಗೊತ್ತು ಗೊತ್ತಿಲ್ಲದೇ ನಾನು ಲೈನ್ ಕ್ರಾಸ್ ಮಾಡಿದ್ರೆ ಬೇಜಾರು ಆಗಬೇಡ.
ಕಳ್ಳಪುಟ್ಟಿ ಅಂತ ಹೆಸರಿಟಿದ್ದಕ್ಕೆ ಸ್ಪಂದನಾ ನೀನು ಬೇಸರ ಆಗಬೇಡ. ಏನಾದ್ರು ಅಂದಿದ್ರೆ ಧನು ಅಣ್ಣಾ ಬೇಸರ ಮಾಡಿಕೊಳ್ಳಬೇಡ. ಕಾವು ನೀನು ಫಿನಾಲೆಯಲ್ಲಿ ಕಪ್ ಹಿಡಿಯೋದನ್ನು ನೋಡಬೇಕು ಎಂದು ಗಿಲ್ಲಿ ನಟ ಹೇಳುತ್ತಾರೆ.
ಗಿಲ್ಲಿ ನಟ ಇಷ್ಟೆಲ್ಲಾ ಮಾತನಾಡುತ್ತಿರುವಾಗ ಮುಖ್ಯದ್ವಾರದ ಬಳಿಗೆ ಬರುವ ಧನುಷ್, ಹೋಗಬೇಡ ಬಾ ಎಂದು ಎಳೆಯುತ್ತಾರೆ. ನಮ್ಮ ಚಂದ್ರಣ್ಣ ಹೋಗಿದ್ದಾರೆ. ನಾನು ಹೋಗಿ ಕೋಳಿ ಫಾರಂ ತೆರೆಯಬೇಕೆಂದು ಮತ್ತೆ ತಮಾಷೆ ಮಾಡುತ್ತಾ ಮುಖ್ಯದ್ವಾರದ ಸಮೀಪ ಹೋಗುತ್ತಾರೆ. ಆಗ ನಿಜವಾಗಿಯೂ ಬಾಗಿಲು ಓಪನ್ ಮಾಡಿ ನಿನ್ನನ್ನು ಹೊರಗೆ ಎಳೆದುಕೊಳ್ಳಬೇಕು ಎಂದು ರಘು ಹೇಳುತ್ತಾರೆ.