ಶಾಕಿಂಗ್.. 15 ವರ್ಷದಿಂದ ಸಿನಿಮಾನೇ ಮಾಡಿಲ್ಲ; ಆದ್ರೂ ಈಕೆ ಭಾರತದ ಅತ್ಯಂತ ಶ್ರೀಮಂತ ನಟಿ; ಸೀಕ್ರೆಟ್ ಇದು!

Published : Jun 14, 2026, 11:58 AM IST

ಬಾಲಿವುಡ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಥವಾ ಆಲಿಯಾ ಭಟ್. ಇವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ನಿಜ. ಆದರೆ, ಭಾರತದ ಅತ್ಯಂತ ಶ್ರೀಮಂತ ನಟಿ ಅವರಲ್ಲ, ಇವರು..!

PREV
18

ಬರೋಬ್ಬರಿ 7,790 ಕೋಟಿ ಒಡತಿ! 16 ವರ್ಷಗಳಿಂದ ಸಿನಿಮಾದಿಂದ ದೂರವಿದ್ದರೂ ಇವರೇ ಇಂಡಿಯಾದ ‘ರಿಚೆಸ್ಟ್’ ಹೀರೋಯಿನ್!

ಮುಂಬೈ: ಬಾಲಿವುಡ್ ಅಂದಾಕ್ಷಣ ನಮಗೆ ಮೊದಲು ನೆನಪಾಗುವುದು ದೀಪಿಕಾ ಪಡುಕೋಣೆ, ಪ್ರಿಯಾಂಕಾ ಚೋಪ್ರಾ ಅಥವಾ ಆಲಿಯಾ ಭಟ್. ಇವರು ಒಂದು ಸಿನಿಮಾಗೆ ಕೋಟಿ ಕೋಟಿ ಸಂಭಾವನೆ ಪಡೆಯುತ್ತಾರೆ ನಿಜ. ಆದರೆ, ಭಾರತದ ಅತ್ಯಂತ ಶ್ರೀಮಂತ ನಟಿ ಯಾರು ಎಂಬ ಪ್ರಶ್ನೆಗೆ ಉತ್ತರ ಮಾತ್ರ ಇವರಲ್ಲ!

28

ಕಳೆದ 16 ವರ್ಷಗಳಿಂದ ಬೆಳ್ಳಿತೆರೆಯ ಮೇಲೆ ಮುಖ್ಯ ಭೂಮಿಕೆಯಲ್ಲಿ ಅಷ್ಟಾಗಿ ಕಾಣಿಸಿಕೊಳ್ಳದಿದ್ದರೂ, ಬರೋಬ್ಬರಿ 7,790 ಕೋಟಿ ರೂಪಾಯಿ ಆಸ್ತಿಯೊಂದಿಗೆ ಇಡೀ ಭಾರತೀಯ ಚಿತ್ರರಂಗವೇ ಹುಬ್ಬೇರಿಸುವಂತೆ ಮಾಡಿದ್ದಾರೆ ನಮ್ಮ 'ಪ್ರೇಮಲೋಕ'ದ ಸುಂದರಿ ಜೂಹಿ ಚಾವ್ಲಾ!

38

ಸೌಂದರ್ಯದ ಖನಿಯಿಂದ ಸಾಮ್ರಾಜ್ಯದ ಒಡತಿಯವರೆಗೆ:

1984ರಲ್ಲಿ ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಜೂಹಿ ಚಾವ್ಲಾ, 1986ರಲ್ಲಿ 'ಸುಲ್ತಾನತ್' ಚಿತ್ರದ ಮೂಲಕ ಸಿನಿಮಾರಂಗಕ್ಕೆ ಪದಾರ್ಪಣೆ ಮಾಡಿದರು. ಆದರೆ ಅವರಿಗೆ ಭರ್ಜರಿ ಬ್ರೇಕ್ ನೀಡಿದ್ದು ಮಾತ್ರ ಅಮೀರ್ ಖಾನ್ ಜೊತೆಗಿನ 'ಖಯಾಮತ್ ಸೆ ಕಯಾಮತ್ ತಕ್'.

48

ಅಲ್ಲಿಂದ ಶುರುವಾದ ಅವರ ವಿಜಯಯಾತ್ರೆ ಕನ್ನಡದ 'ಪ್ರೇಮಲೋಕ' ಸೇರಿದಂತೆ ದಕ್ಷಿಣದ ಹಲವು ಭಾಷೆಗಳಿಗೂ ಹಬ್ಬಿತು. 90ರ ದಶಕದ ಟಾಪ್ ನಟಿಯಾಗಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿದ್ದ ಜೂಹಿ, ಕಾಲಕ್ರಮೇಣ ನಟನೆಯಿಂದ ದೂರವುಳಿದು ಉದ್ಯಮದತ್ತ ಮುಖ ಮಾಡಿದರು.

58

ಕೇವಲ ನಟಿಯಲ್ಲ, ಈಕೆ ಬಿಜಿನೆಸ್ ಟೈಕೂನ್!

ಜೂಹಿ ಚಾವ್ಲಾ ಅವರ ಈ ದೈತ್ಯ ಆಸ್ತಿಯ ಹಿಂದೆ ಕೇವಲ ನಟನೆಯಿಲ್ಲ, ಅವರ ಶಾರ್ಪ್ ಬಿಸಿನೆಸ್ ಮೈಂಡ್ ಕೂಡ ಇದೆ. ಕಿಂಗ್ ಖಾನ್ ಶಾರುಖ್ ಖಾನ್ ಅವರ ಬೆನ್ನೆಲುಬಾಗಿ ನಿಂತಿರುವ ಜೂಹಿ, 'ರೆಡ್ ಚಿಲ್ಲೀಸ್ ಗ್ರೂಪ್'ನ ಸಹ-ಸಂಸ್ಥಾಪಕಿ. ಅಷ್ಟೇ ಅಲ್ಲದೆ, ಐಪಿಎಲ್ ಕ್ರೇಜ್ ಶುರುವಾದಾಗಿನಿಂದ 'ಕೋಲ್ಕತ್ತಾ ನೈಟ್ ರೈಡರ್ಸ್' (KKR) ತಂಡದ ಮಾಲೀಕತ್ವದಲ್ಲಿ ಶಾರುಖ್ ಜೊತೆ ಜೂಹಿ ಕೂಡ ಸಮಾನ ಪಾಲುದಾರರು. ಇನ್ನು ರಿಯಲ್ ಎಸ್ಟೇಟ್ ಕ್ಷೇತ್ರದಲ್ಲೂ ಇವರ ಹೂಡಿಕೆ ಅಪಾರವಾಗಿದೆ. ಮುಂಬೈನ ಗುಸ್ಟೊಸೊ ಮತ್ತು ರೂ ಡು ಲಿಬನ್ ನಂತಹ ಐಷಾರಾಮಿ ರೆಸ್ಟೋರೆಂಟ್‌ಗಳು ಜೂಹಿ ಅವರ ಆಸ್ತಿಯ ಮೌಲ್ಯವನ್ನು ಹೆಚ್ಚಿಸಿವೆ.

68

ಇಂದಿನ ಸ್ಟಾರ್ ನಟಿಯರಿಗಿಂತ ಹತ್ತು ಪಟ್ಟು ಹೆಚ್ಚು ಆಸ್ತಿ!

ಜೂಹಿ ಚಾವ್ಲಾ ಅವರ ಆಸ್ತಿಯ ಮುಂದೆ ಇಂದಿನ ಪೀಳಿಗೆಯ ನಟಿಯರು ಏನೇನೂ ಅಲ್ಲ ಎನ್ನುತ್ತಿವೆ ಅಂಕಿ-ಅಂಶಗಳು. 2026ರ ವೇಳೆಗೆ ಅವರ ಒಟ್ಟು ಆಸ್ತಿ ಸುಮಾರು 7,790 ಕೋಟಿ ರೂಪಾಯಿ ತಲುಪಲಿದೆ ಎಂದು ಅಂದಾಜಿಸಲಾಗಿದೆ. 

78

ಇನ್ನುಳಿದಂತೆ ಆಲಿಯಾ ಭಟ್ (600 ಕೋಟಿ), ಅನುಷ್ಕಾ ಶರ್ಮಾ (665 ಕೋಟಿ), ದೀಪಿಕಾ ಪಡುಕೋಣೆ (500 ಕೋಟಿ), ಕರೀನಾ ಕಪೂರ್ (550 ಕೋಟಿ) ಮತ್ತು ಕತ್ರಿನಾ ಕೈಫ್ (240 ಕೋಟಿ) ಅವರ ಆಸ್ತಿಯನ್ನೆಲ್ಲಾ ಒಟ್ಟುಗೂಡಿಸಿದರೂ ಅದು ಜೂಹಿ ಚಾವ್ಲಾ ಅವರ ಆಸ್ತಿಯ ಅರ್ಧದಷ್ಟು ಕೂಡ ಆಗುವುದಿಲ್ಲ!

88

2022ರಲ್ಲಿ 'ಶರ್ಮಾಜಿ ನಮ್ಕೀನ್' ಚಿತ್ರದಲ್ಲಿ ಕೊನೆಯದಾಗಿ ಮಿಂಚಿದ್ದ ಜೂಹಿ, ಈಗ ಸಿನಿಮಾಗಳಿಗಿಂತ ಹೆಚ್ಚಾಗಿ ತಮ್ಮ ಬಿಸಿನೆಸ್ ಸಾಮ್ರಾಜ್ಯವನ್ನು ವಿಸ್ತರಿಸುವಲ್ಲಿ ಬ್ಯುಸಿಯಾಗಿದ್ದಾರೆ. ಒಟ್ಟಿನಲ್ಲಿ, ಸ್ಕ್ರೀನ್ ಮೇಲೆ ಕಾಣಿಸಿಕೊಳ್ಳದಿದ್ದರೂ ಇಡೀ ಇಂಡಿಯಾದಲ್ಲಿ ಅತಿ ಹೆಚ್ಚು ಆಸ್ತಿ ಹೊಂದಿರುವ ನಟಿ ಎಂಬ ಹೆಗ್ಗಳಿಕೆಗೆ ಜೂಹಿ ಚಾವ್ಲಾ ಪಾತ್ರರಾಗಿದ್ದಾರೆ. ಇದು ಜೂಹಿ ಅವರ "ಸೈಲೆಂಟ್ ಸಕ್ಸಸ್" ಅಂದ್ರೆ ತಪ್ಪಾಗಲಾರದು!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories