ಕಾಕ್ಟೇಲ್ 2 ಸಿನಿಮಾ ಶೀಘ್ರವೇ ತೆರೆಗೆ ಬರ್ತಿದೆ. ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್ ಸಿನಿಮಾದಲ್ಲಿ ನಟಿಸಿದ್ದು, ಸಿನಿಮಾ ಪ್ರಚಾರದಲ್ಲಿ ಸ್ಟಾರ್ಸ್ ಬ್ಯುಸಿ ಇದ್ದಾರೆ. ಇವರ ಮಸ್ತಿ ವಿಡಿಯೋಗಳು ವೈರಲ್ ಆಗ್ತಿವೆ.
ಕಾಕ್ಟೇಲ್ 2 ಸಿನಿಮಾ ಪ್ರಚಾರದಲ್ಲಿ ಬಾಲಿವುಡ್ ನಟ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಹಾಗೂ ಕೃತಿ ಬ್ಯುಸಿಯಾಗಿದ್ದಾರೆ. ಕಳೆದ 6 ದಿನಗಳಿಂದ ಒಂದೊಂದೇ ಇವೆಂಟ್ ನ ವಿಡಿಯೋಗಳನ್ನು ರಶ್ಮಿಕಾ ಮಂದಣ್ಣ ಪೋಸ್ಟ್ ಮಾಡ್ತಿದ್ದಾರೆ. ಈಗ ಶಾಹೀದ್ ಕಪೂರ್ ಹಾಗೂ ಕೃತಿ ಜೊತೆ ರಶ್ಮಿಕಾ ಮಂದಣ್ಣ ಡಾನ್ಸ್ ಮಾಡಿದ್ದಾರೆ.
24
ರಶ್ಮಿಕಾ ಡಾನ್ಸ್ ಗೆ ಫ್ಯಾನ್ ಫಿದಾ
ರಶ್ಮಿಕಾ ಮಂದಣ್ಣ, ಕಾಕ್ಟೇಲ್ 2 ಸಾಂಗ್ ಗೆ ಸ್ಟೆಪ್ಸ್ ಹಾಕಿದ್ದಾರೆ. ಶಾಹಿದ್ ಕಪೂರ್ ಮೊದಲು ಸ್ಟೆಪ್ಸ್ ಹೇಳಿಕೊಡ್ತಾರೆ. ನಂತ್ರ ರಶ್ಮಿಕಾ ಹಾಗೂ ಕೃತಿ ಡಾನ್ಸ್ ಮಾಡೋದನ್ನು ನೀವು ನೋಡ್ಬಹುದು. ರಶ್ಮಿಕಾ ಡಾನ್ಸ್ ಫ್ಯಾನ್ಸ್ ಮನಗೆದ್ದಿದೆ. ರಶ್ಮಿಕಾ ಡಾನ್ಸ್ ಮಾತ್ರವಲ್ಲ ಡ್ರೆಸ್ ಕೂಡ ಫ್ಯಾನ್ಸ್ ಮನಸ್ಸು ಗೆದ್ದಿದೆ.
34
ಹಸಿಮೆಣಸಿನ ಕಾಯಿ ತಿಂದ ರಶ್ಮಿಕಾ
ಇದಕ್ಕೂ ಮುನ್ನ ಹಿಂದಿನ ಇವೆಂಟ್ ನಲ್ಲಿ ಮೂರು ಕಲಾವಿದರು ವಡಾಪಾವ್ತಿಂದಿದ್ದರು. ಕೃತಿ ಸನೋನ್ ಮತ್ತು ರಶ್ಮಿಕಾ ಮುಂದೆ ವಡಾ ಪಾವ್ ಜೊತೆ ಹಸಿಮೆಣಸಿನ ಕಾಯಿ ಇಡಲಾಗಿತ್ತು. ರಶ್ಮಿಕಾ, ಹಸಿ ಮೆಣಸಿನ ಕಾಯಿ ತಿನ್ನಲು ಶುರು ಮಾಡಿದ್ರು. ಕೃತಿ ಇದನ್ನು ವಿರೋಧಿಸಿದ್ರೂ ರಶ್ಮಿಕಾ ಬಿಡಲಿಲ್ಲ. ನಂತ್ರ ಕೃತಿ ಕೂಡ ಇದನ್ನು ತಿಂದ್ರು. ಶಾಹಿದ್ ಕಪೂರ್ ಮಾತ್ರ ಇಬ್ಬರನ್ನು ನೋಡಿ ಶಾಕ್ ಆದ್ರು.
ಹೋಮಿ ಅದಜಾನಿಯಾ ನಿರ್ದೇಶನದ 'ಕಾಕ್ಟೇಲ್ 2 ಚಿತ್ರದಲ್ಲಿ ಶಾಹಿದ್ ಕಪೂರ್, ರಶ್ಮಿಕಾ ಮಂದಣ್ಣ ಮತ್ತು ಕೃತಿ ಸನೋನ್, ಡಿಂಪಲ್ ಕಪಾಡಿಯಾ, ರೋಹಿತ್ ಸರಾಫ್ ಮತ್ತು ಇಶಿತಾ ದತ್ತಾ ನಟಿಸಿದ್ದಾರೆ ಕಾಕ್ಟೇಲ್ 2 ಜೂನ್ 19 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಕಾಕ್ಟೇಲ್ ಸಿನಿಮಾ ಕೂಡ ಹೋಮಿ ನಿರ್ದೇಶಿಸಿದ್ದರು. ಡಿಫರೆಂಟ್ ಸ್ಟೈಲ್ ನಲ್ಲಿ ಪ್ರೀತಿ ತೋರಿಸಿದ್ದ ಕಾಕ್ಟೇಲ್ ಸಿನಿಮಾ ಸೂಪರ್ ಹಿಟ್ ಆಗಿತ್ತು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.