ನಟಿ ಮೇಘನಾ ರಾಜ್ ತಮ್ಮ ಹೊಸ ಫೋಟೋಶೂಟ್ ಚಿತ್ರಗಳನ್ನು ಹಂಚಿಕೊಂಡು, ತಮ್ಮದೇ ಜಗತ್ತನ್ನು ಸೃಷ್ಟಿಸಿಕೊಳ್ಳುವ ಬಗ್ಗೆ ಬರೆದುಕೊಂಡಿದ್ದಾರೆ. ಇತ್ತೀಚಿನ ಸಂದರ್ಶನವೊಂದರಲ್ಲಿ, ಅವರು ಮಗನ ಆರೈಕೆ ಮತ್ತು ಎರಡನೇ ಮದುವೆಯ ಕುರಿತು ಮನಬಿಚ್ಚಿ ಮಾತನಾಡಿದ್ದಾರೆ.
ಚಂದನವನದ ನಟಿ ಮೇಘನಾ ರಾಜ್ ಸುಂದರವಾದ ಫೋಟೋಗಳನ್ನು ಕ್ಲಿಕ್ಕಿಸಿಕೊಂಡಿದ್ದು, ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋಗಳಿಗೆ ನನ್ನ ಅದ್ಭುತವಾದ ಜಗತ್ತನ್ನು ನಾನೇ ಸೃಷ್ಟಿಸಿಕೊಳ್ಳುವೆ. ಅದಕ್ಕಾಗಿ ಒಂದೊಂದೆ ಸಿದ್ಧತೆಗಳು ಎಂದು ಬರೆದುಕೊಂಡಿದ್ದಾರೆ.
25
ಮೇಘನಾ ಟ್ರೆಡಿಷನಲ್ ಲುಕ್
ಕಪ್ಪು ಬಣ್ಣದ ಜರಿ ಬಾರ್ಡರ್‌ವುಳ್ಳ ಹಸಿರು ಬ್ಲೌಸ್ ಧರಿಸಿ ಕ್ಯಾಮೆರಾಗೆ ಮೇಘನಾ ರಾಜ್ ಪೋಸ್ ನೀಡಿದ್ದಾರೆ. ಬೇರೆ ಬೇರೆ ಆಂಗಲ್‌ನಲ್ಲಿ ಫೋಟೋಗೆ ಪೋಸ್ ನೀಡಿದ್ದು, ಈ ಫೋಟೋಶೂಟ್‌ಗೆ ಕಾರಣರಾದ ಡಿಸೈನರ್, ಹೇರ್ ಸ್ಟೈಲಿಶ್, ಕ್ಯಾಮೆರಾ ಮ್ಯಾನ್ ಸೇರಿದಂತೆ ಎಲ್ಲರ ಬಗ್ಗೆಯೂ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ಫೋಟೋ ಅಪ್ಲೋಡ್ ಆಗ್ತಿದ್ದಂತೆ ಅಭಿಮಾನಿಗಳು ಸೂಪರ್ ಎಂದು ಕಮೆಂಟ್ ಮಾಡಲಾರಂಭಿಸಿದ್ದಾರೆ.
35
ಮೇಘನಾ ರಾಜ್ ಸರ್ಜಾ ಸಂದರ್ಶ
ಇತ್ತೀಚೆಗೆ ಮೇಘನಾ ರಾಜ್ ಸರ್ಜಾ ಸಂದರ್ಶನ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಸಂದರ್ಶನದಲ್ಲಿ ಮಗನ ಭವಿಷ್ಯ ಮತ್ತು ತಮ್ಮ ವೃತ್ತಿ ಜೀವನದ ಕುರಿತ ಹಲವು ವಿಷಯಗಳನ್ನು ಹಂಚಿಕೊಂಡಿದ್ದರು. ಪತಿ ಚಿರು ನಿಧನದ ಬಳಿಕ ಮೇಘನಾ ರಾಜ್ ಮತ್ತೊಂದು ಮದುವೆ ಆಗಬೇಕೆಂದು ಕುಟುಂಬಸ್ಥರು ಸೇರಿದಂತೆ ಅಭಿಮಾನಿಗಳ ಆಶಯವಾಗಿದೆ. ಎರಡನೇ ಮದುವೆ ಬಗ್ಗೆಯೂ ಸಂದರ್ಶನದಲ್ಲಿ ಮೇಘನಾ ಮಾತನಾಡಿದ್ದರು.
ನಾನು ಮಗನಿಗೆ ಅಪ್ಪ-ಅಮ್ಮನಾಗಿ ಜವಾಬ್ದಾರಿ ನಿಭಾಯಿಸಬಲ್ಲೆ ಎಂದು ಹೇಳಿದ್ದೆ. ಆದ್ರೆ ನನ್ನ ಕಸೀನ್, ಮೊದಲು ನೀನು ಅಮ್ಮನಾಗು ಎಂದು ಹೇಳಿದ್ದೆ. ಆದ್ರೆ ಅಪ್ಪನ ಜವಾಬ್ದಾರಿ ನಿರ್ವಹಣೆ ಮಾಡೋದು ಕಷ್ಟ. ಮಗುವಿಗೆ ಪೋಷಕರಿಗೆ ತುಂಬಾ ನಿರೀಕ್ಷೆಗಳಿರುತ್ತವೆ. ನನಗಿರೋದು ಗಂಡು ಮಗು. ಹಾಗಾಗಿ ಮನೆಯಲ್ಲಿ ಗಂಡಸರು ಇರಬೇಕು ಅಂತ ಅನ್ನಿಸುತ್ತದೆ ಎಂದು ಮೇಘನಾ ಹೇಳಿದ್ದರು.
ಇನ್ನು ಮೇಘನಾ ತಂದೆ ಸುಂದರ್ ರಾಜ್, ಹಲವು ಬಾರಿ ಮಗಳ ಒಂಟಿ ಜೀವನದ ಬಗ್ಗೆ ಮಾತನಾಡಿದ್ದಾರೆ. ದೇವರು ಮಗಳಿಗೆ ಸುಂದರವಾದ ಬದುಕು ನೀಡಲಿಲ್ಲ. ಎರಡನೇ ಮದುವೆ ಅನ್ನೋದು ಅವರ ವೈಯಕ್ತಿಕ. ಮುಂದೆ ಜೀವನ ನಡೆಸುವವರು ಅವರೇ. ಹಾಗಾಗಿ ಅಂತಿಮ ನಿರ್ಧಾರ ಮಗಳದ್ದೇ ಆಗಿರುತ್ತದೆ. ಸುಂದರ ಬದುಕಿನ ಆಯ್ಕೆಯನ್ನು ಮಗಳು ಮಾಡಿಕೊಳ್ಳಬೇಕಿದೆ ಎಂದು ಹೇಳಿದ್ದರು.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.