ಕೇವಲ ಬ್ರಾ ಹಾಕಿ ಲಿಪ್ ಕಿಸ್, ಕೊನೆಗೆ ಎಷ್ಟು ಬೇಕಾದ್ರೂ ಬಿಚ್ತಾಳೆ ಅಂದುಬಿಟ್ಟರು, ನೋವು ತೋಡಿಕೊಂಡ ನಟಿ

Published : Mar 15, 2026, 08:32 AM IST

ಕೇವಲ ಬ್ರಾ ಹಾಕಿ ಲಿಪ್ ಕಿಸ್, ಕೊನೆಗೆ ಎಷ್ಟು ಬೇಕಾದ್ರೂ ಬಿಚ್ತಾಳೆ ಅಂದುಬಿಟ್ಟರು, ನೋವು ತೋಡಿಕೊಂಡ ನಟಿ, ನಿರ್ದೇಶಕ ಹೇಳಿದ ಕತೆಯಲ್ಲಿ ಈ ರೀತಿಯ ಸೀನ್ ಇರಲೇ ಇಲ್ಲ. ನಾನು ಎಂಜಾಯ್ ಮಾಡುತ್ತಾ ನಟಿಸಿದ್ದೆ, ಆದರೆ... 

PREV
16
ಬಾಲಿವುಡ್ ತೆರೆ ಹಿಂದಿನ ಕರಾಳ ಸ್ಟೋರಿ

ಬಾಲಿವುಡ್ ನಟಿ ಜರೀನ್ ಖಾನ್ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸಲ್ಮಾನ್ ಖಾನ್ ಜೊತೆ ವೀರ್ ಸಿನಿಮಾ ಮೂಲಕ ಬಾಲಿವುಡ್‌ನಲ್ಲಿ ಧೂಳೆಬ್ಬಿಸಿ ಜರೀನ್ ಖಾನ್ ಬಳಿಕ ಸತತ ಸಿನಿಮಾಗಳ ಮೂಲಕ ಭಾರಿ ಜನಪ್ರಿಯತೆ ಗಳಿಸಿದ್ದರು. ಜ್ಯೂನಿಯರ್ ಕತ್ರಿನಾ ಕೈಫ್ ಎಂದೇ ಗುರುತಿಸಿಕೊಂಡಿದ್ದ ಜರೀನ್ ಖಾನ್ ಬಾಲಿವುಡ್ ತೆರೆಯ ಹಿಂದಿನ ಕರಾಳ ಘಟನೆಗಳನ್ನು ಹೇಳಿಕೊಂಡಿದ್ದಾರೆ. ಈ ಘಟನೆಗಳು ತಮಗೆ ತೀವ್ರ ನೋವುಂಟು ಮಾಡಿದೆ ಎಂದಿದ್ದಾರೆ.

26
ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದೇ ಬೇರೆ

ಮ್ಯಾಮೂತ್ ಮೀಡಿಯಾ ಪಾಡ್‌ಕಾಸ್ಟ್‌ನಲ್ಲಿ ಜರೀನ್ ಖಾನ್ ತನಗೆ ಆದ ನೋವಿನ ಕುರಿತು ಹೇಳಿಕೊಂಡಿದ್ದಾರೆ. ವೀರ್, ಹೌಸ್‌ಫುಲ್ 2 ಯಶಸ್ಸಿನ ಬಳಿಕ ಹೇಟ್ ಸ್ಟೋರಿ 3 ಸಿನಿಮಾಗೆ ಜರೀನ್ ಖಾನ್ ಆಯ್ಕೆಯಾಗಿದ್ದರು. ನಿರ್ದೇಶಕ ಅನಂತ್ ಮಹಾದೇವನ್ ಹೇಟ್ ಸ್ಟೋರಿ 3 ಕತೆ ಹೇಳಿದ್ದರು. ಕತೆ ಕೇಳಿದ ಬಳಿಕ ಈ ಸಿನಿಮಾ ಮಾಡಲು ಒಪ್ಪಿಕೊಂಡಿದ್ದೆ. ನನ್ನ ಪಾತ್ರ, ಅದರ ವ್ಯಾಪ್ತಿಯ ಕುರಿತು ವಿವರಣೆ ನೀಡಿದ್ದರು. ಇದರಲ್ಲಿ ಎಲ್ಲೂ ಕೂಡ ಕೆಟ್ಟ ಮಟ್ಟದ ಸೀನ್ ಇರಲಿಲ್ಲ. ಆದರೆ ಶೂಟಿಂಗ್ ಸೆಟ್‌ನಲ್ಲಿ ನಡೆದಿದ್ದೇ ಬೇರೆ ಎಂದಿದ್ದಾರೆ.

36
ಪ್ರತಿ ಸೀನ್‌ನಲ್ಲಿ ಕಿಸ್

ಹೇಟ್ ಸ್ಟೋರಿ 3 ಸಿನಿಮಾ ಕತೆ ಹೇಳಿದ ಬಳಿಕ ನಾವು ಹೇಟ್ ಸ್ಟೋರಿ ಮಾಡುತ್ತಿಲ್ಲ. ಜನರು ಇಷ್ಟಪಡುವ ಸ್ಟೋರಿ ಮಾಡತ್ತಿದ್ದೇವೆ ಎಂದಿದ್ದರು. ಆದರೆ ಶೂಟಿಂಗ್‌ನಲ್ಲಿ ಪ್ರತಿ ಸೀನ್‌ನಲ್ಲಿ ಲಿಪ್ ಕಿಸ್, ಬಿಗಿದಪ್ಪಿಕೊಂಡು ಕಿಸ್ ಇದ್ದೇ ಇತ್ತು. ಇಷ್ಟೇ ಅಲ್ಲ ಕೆಲ ಸೀನ್‌ನಲ್ಲಿ ಕೇವಲ ಬ್ರಾ, ಟು ಪೀಸ್‌ನಲ್ಲಿ ನಟಿಸಬೇಕಿತ್ತು. ಬಹುತೇಕ ಸೀನ್‌ಗಳಲ್ಲಿ ಮೈಯಲ್ಲಿ ಬಟ್ಟೆ ಇರಲೇ ಇಲ್ಲ ಎಂದಿದ್ದಾರೆ.

46
ನಿರ್ಮಾಪಕರಿಗೆ ನಾನು ಬ್ರಾ ಮಾತ್ರ ಹಾಕಿ ನಟಿಸಬೇಕಿತ್ತು

ನಿರ್ದೇಶಕರು ಒಂದು ಹೇಳಿದರೆ, ನಿರ್ಮಾಪಕರು ಮತ್ತೊಂದು ಹೇಳುತ್ತಿದ್ದರು. ನಾನು ಹಿಂದಿನ ಸಿನಿಮಾದಲ್ಲಿ ಟು ಪೀಸ್ ಹಾಕಿ ನಟಿಸಿದ್ದೆ. ಹೀಗಾಗಿ ನಿರ್ಮಾಪಕರು ಹೇಟ್ ಸ್ಟೋರಿ 3 ಪ್ರತಿ ಸೀನ್‌ನಲ್ಲಿ ನಾನು ಮೈಯಲ್ಲಿ ಹೆಚ್ಚಿನ ಬಟ್ಟೆ ಇಲ್ಲದೆ ನಟಿಸುವಂತೆ ಸೂಚಿಸಿದ್ದರು. ಪದೇ ಪದೇ ಹೀಗಲ್ಲ, ಬ್ರಾ, ಚಡ್ಡಿ ಮಾತ್ರ ಸಾಕು. ಜನ ಇದನ್ನೇ ಬಯಸುತ್ತಾರೆ ಎಂದು ಸಬೂಬು ಹೇಳುತ್ತಿದ್ದರು ಎಂದಿದ್ದಾರೆ.

56
ಆಕೆಗೆ ನಟನೆ ಬರಲ್ಲ, ಹಾಗಾಗಿ ಎಷ್ಟು ಬೇಕಾದರು ಬಿಚ್ತಾಳೆ

ಹೇಟ್ ಸ್ಟೋರಿ 3 ಸಿನಿಮಾದಲ್ಲಿ ಈ ರೀತಿಯ ಸೀನ್ ನಟಿಸಲು ನನಗೆ ಮುಜುಗರ ಇರಲಿಲ್ಲ. ನಾನು ಎಂಜಾಯ್ ಮಾಡಿದ್ದೇನೆ. ಆದರೆ ಕತೆಯಲ್ಲೇ ನನಗೆ ಹೇಳಬೇಕಿತ್ತು. ನಿರ್ದೇಶಕರು ಮಿಸ್‌ಲೀಡ್ ಮಾಡಿದ್ದರು. ಸಿನಿಮಾ ರಿಲೀಸ್ ಆದ ಬಳಿಕ ನಿರ್ದೇಶಕರು ಬಾಲಿವುಡ್ ಮಂದಿಯಲ್ಲಿ ಬೇರೆ ಕತೆ ಹೇಳಿದ್ದರು. ಜರೀನ್ ಖಾನ್‌ಗೆ ನಟನೆ ಬರುವುದಿಲ್ಲ, ಹೀಗಾಗಿ ಆಕೆ ಎಷ್ಟು ಬೇಕಾದರು ಬಿಚ್ಚುತ್ತಾಳೆ ಎಂದು ಅವಮಾನಿಸಿದರು ಎಂದು ಜರೀನ್ ಖಾನ್ ಹೇಳಿದ್ದಾರೆ.

66
ಆಕೆಗೆ ನಟನೆ ಬರಲ್ಲ, ಹಾಗಾಗಿ ಎಷ್ಟು ಬೇಕಾದರು ಬಿಚ್ತಾಳೆ

ಸಿನಿಮಾ ಅರ್ಧದಿಂದಲೇ ಹೊರಬಲು ನಿರ್ಧರಿಸಿದ್ದೆ. ಆದರೆ ನಾನು ಕೂಡ ಕರಿಯರ್‌ನಲ್ಲಿ ಯಶಸ್ಸು ಕಾಣುತ್ತಿದ್ದ ಸಮಯ. ಮತ್ತೊಂದೆಡೆ ಸಿನಿಮಾ ಕೂಡ ಅರ್ಧಕ್ಕೆ ನಿಲ್ಲಲಿದೆ. ನಾನು ಸೇರಿದಂತೆ ಇತರ ಕಲಾವಿದರು ಸಂಕಷ್ಟಕ್ಕೆ ಬೀಳುತ್ತಾರೆ. ಹೀಗಾಗಿ ಸಿನಿಮಾ ಪೂರ್ಣಗೊಳಿಸಿದೆ. ಆಧರೆ ಸಿನಿಮಾ ಬಿಡುಗಡೆಯಾಗುವ ಹೊತ್ತಿಗೆ ನನ್ನ ವಿಲನ್ ರೀತಿ ಬಿಂಬಿಸಲಾಗಿತ್ತು ಎಂದು ಜರೀನ್ ಖಾನ್ ನೋವು ತೋಡಿಕೊಂಡಿದ್ದಾರೆ.

ಆಕೆಗೆ ನಟನೆ ಬರಲ್ಲ, ಹಾಗಾಗಿ ಎಷ್ಟು ಬೇಕಾದರು ಬಿಚ್ತಾಳೆ

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories