
ಬಿಗ್ಬಾಸ್ ಕನ್ನಡದ 12ನೇ ಸೀಸನ್ ಯಾವಾಗ ಶುರುವಾಗುತ್ತೆ ಎಂದು ತುದಿಗಾಲಿನಲ್ಲಿ ನಿಂತಿದ್ದಾರೆ ವೀಕ್ಷಕರು. ಇದಾಗಲೇ ಪ್ರೊಮೋ ಕೂಡ ರಿಲೀಸ್ ಆಗಿದೆ. ಈ ಬಾರಿ ಯಾರು ಯಾರು ದೊಡ್ಮನೆಯ ಒಳಗೆ ಹೋಗುತ್ತಾರೆ ಎನ್ನುವ ಬಗ್ಗೆ ಲಿಸ್ಟ್ ಕೂಡ ಬಿಡುಗಡೆಯಾಗಿದ್ದು, ಅಂತಿಮವಾಗಿ ಯಾರು ಇರಲಿದ್ದಾರೆ ಎನ್ನುವುದನ್ನು ನೋಡಲು ವೀಕ್ಷಕರು ಕಾತರರಾಗಿದ್ದಾರೆ. ಸುದೀಪ್ ಅವರು ಯಾವುದೇ ಕಾರಣಕ್ಕೂ ಮುಂದಿನ ಬಿಗ್ಬಾಸ್ ನಡೆಸಿಕೊಡುವುದೇ ಇಲ್ಲ ಎಂದು ಹೇಳಿ ಭಾರಿ ಸುದ್ದಿ ಮಾಡಿ, ಬಳಿಕ ಮುಂದಿನ ನಾಲ್ಕು ಸೀಸನ್ಗೆ ಒಪ್ಪಿಕೊಂಡಿದ್ದೂ ಆಗಿದೆ. ಇದು ವೀಕ್ಷಕರಿಗೆ ಬಹಳ ಖುಷಿ ಕೂಡ ಕೊಟ್ಟಿದೆ.
ಅದರ ನಡುವೆಯೇ, ಬಿಗ್ಬಾಸ್ನ ಮೊದಲ ಸೀಸನ್ನ ವಿನ್ನರ್, ಸ್ಯಾಂಡಲ್ವುಡ್ ಸ್ಟಾರ್ ನಟ ವಿಜಯ ರಾಘವೇಂದ್ರ ಅವರು ಬಿಗ್ಬಾಸ್ ಮತ್ತು ತಮ್ಮ ಜೀವನದ ಅತಿದೊಡ್ಡ ಸೀಕ್ರೆಟ್ ಅನ್ನು ಇದೀಗ ರಿವೀಲ್ ಮಾಡಿದ್ದಾರೆ. ಅಷ್ಟಕ್ಕೂ ಕನ್ನಡಕ್ಕೆ ಬಿಗ್ಬಾಸ್ ಕಾನ್ಸೆಪ್ಟ್ ಹೊಸತಾಗಿತ್ತು. ಅದು ಮೊದಲ ಸೀಸನ್ ಆಗಿತ್ತು. ಚಾನೆಲ್‌ನವರಿಗೆ ಹೊಸತು, ವೀಕ್ಷಕರಿಗೆ ಹೊಸತು. ಯಾವ ಸಮಯದಲ್ಲಿ ಏನು ನಿರೀಕ್ಷೆ ಮಾಡಬೇಕು ಎಂದು ಯಾರಿಗೂ ಗೊತ್ತಿಲ್ಲ ಏಕೆಂದರೆ 15 ವಿಭಿನ್ನ ವ್ಯಕ್ತಿತ್ವದವರು ಮನೆಯಲ್ಲಿದ್ದರು. ಆದ್ದರಿಂದ ಅದರ ಬಗ್ಗೆ ನಿರೀಕ್ಷೆ ಹೆಚ್ಚಾಗಿತ್ತು.
ಬಿಗ್ಬಾಸ್ನಿಂದ ವಿನ್ ಆಗಿ ಹೊರಕ್ಕೆ ಬಂದವರೂ ಸೇರಿದಂತೆ ಒಮ್ಮೆ ಬಿಗ್ಬಾಸ್ ಮನೆಗೆ ಹೋದರೆ ಅವರಿಗೆ ಭವಿಷ್ಯದಲ್ಲಿ ಸಕತ್ ಡಿಮಾಂಡ್ ಇರುತ್ತದೆ, ಅವರು ದೊಡ್ಡ ಸೆಲೆಬ್ರಿಟಿಗಳಾಗುತ್ತಾರೆ, ಬೇರೆ ಬೇರೆ ಷೋಗಳಿಗೆ ಅವರಿಗೆ ಆಫರ್ ಬರುತ್ತದೆ ಎನ್ನುವುದು ತಿಳಿದದ್ದೇ.
ಅದೇ ರೀತಿ ಆ ಟೈಮ್ನಲ್ಲಿ ದಶಕದವರೆಗೆ ಸಿನಿಮಾರಂಗದಲ್ಲಿ ಕೆಲಸ ಮಾಡಿದ್ದರೂ, ವಿಜಯ ರಾಘವೇಂದ್ರ ಅವರು ಬಿಗ್ಬಾಸ್ ವಿಜಯ ರಾಘವೇಂದ್ರ ಆಗಿದ್ದು ನಿಜವಾದರೂ, ತಮಗೆ ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಯಾವುದೇ ಆಫರ್ ಬರಲಿಲ್ಲ. ಇದು ನನ್ನನ್ನು ಸ್ಟಾರ್ ಮಾಡಲಿಲ್ಲ ಎನ್ನುವ ಸತ್ಯವನ್ನು ಸುವರ್ಣ ನ್ಯೂಸ್ ಬೆಂಗಳೂರು ಬಜ್ ಪಾಡ್‌ಕಾಸ್ಟ್ ಗೆ ನೀಡಿರುವ ಸಂದರ್ಶನದಲ್ಲಿ ವಿಜಯ ರಾಘವೇಂದ್ರ ಅವರು ರಿವೀಲ್ ಮಾಡಿದ್ದಾರೆ.
ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ, ಈ ಬಗ್ಗೆ ಹೇಳಿಕೊಂಡಿದ್ದ ಅವರು, ಸುಮಾರು ನೂರು ದಿನಗಳ ಕಾಲ ನನ್ನನ್ನು ನೀವು ಆಶೀರ್ವಾದ ಮಾಡಿದ್ದೀರಿ. ಅಲ್ಲಿ ದೀರ್ಘ ಅವಧಿಯವರೆಗೆ ಇದ್ದು ಜೀವಿಸಿ, ಅನುಭವಿಸಿ ಬಂದಿದ್ದೇನೆ. ನನ್ನ ಪ್ರಕಾರ ನನ್ನ ಜೀವನದಕ್ಕೆ ಮತ್ತು ಬಿಗ್ಬಾಸ್ ಮನೆಗೆ ಎಂಟ್ರಿ ಕೊಡುವ ನನ್ನ ಸ್ನೇಹಿತರೆಲ್ಲಾ ಇದರಿಂದ ಆಗಿರುವ ದೊಡ್ಡ ಅನುಭವ ಎಂದರೆ, ಅವರವರ ಜೀವನ, ಅವರ ವ್ಯಕ್ತಿತ್ವ, ಅವರ ಅಪ್ಸ್ ಆ್ಯಂಡ್ ಡೌನ್ಸ್, ಅವರಲ್ಲಿ ಇರುವ ಕೆಟ್ಟತನ-ಒಳ್ಳೆಯತನ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಲು ಅವಕಾಶ ಸಿಕ್ಕಿದೆ. ನಮ್ಮ ನಡವಳಿಕೆಯ ಬಗ್ಗೆ, ತಪ್ಪುಗಳು ಇದ್ದರೆ ಅದನ್ನು ಸರಿಪಡಿಸಿ ಕರೆಕ್ಷನ್ ಮಾಡುವ ಅವಕಾಶ ಸಿಕ್ಕಿದೆ ಎಂದಿದ್ದರು ವಿಜಯ ರಾಘವೇಂದ್ರ.
ಆದರೆ, ಇದೀಗ ಬಿಗ್ಬಾಸ್ ಸತ್ಯ ಬಿಚ್ಚಿಟ್ಟಿದ್ದಾರೆ. ಅದು ನನ್ನನ್ನು ಸ್ಟಾರ್ ಮಾಡಲಿಲ್ಲ. ಒಂದೇ ಒಂದು ಆಫರ್ ನನಗೆ ಆ ಸಮಯದಲ್ಲಿ ಬರಲಿಲ್ಲ ಎನ್ನುವ ಮೂಲಕ ಬಿಗ್ಬಾಸ್ನಲ್ಲಿ ವಿಜೇತರಾದ ಮಾತ್ರಕ್ಕೆ ತಮಗೆ ದೊಡ್ಡ ಕಿರೀಟ ಬಂದಿರಲಿಲ್ಲ ಎಂದಿದ್ದಾರೆ.
ಆದರೆ ಈಗ ಕಾಲ ಸ್ವಲ್ಪ ಬದಲಾಗಿದೆ ಬಿಡಿ. ಬಿಗ್ಬಾಸ್ ಮನೆಗೆ ಹೋಗುವವರು ಬಹುತೇಕ ಮಂದಿ, ಕಾಂಟ್ರವರ್ಸಿ ಇದ್ದವರೇ ಇಲ್ಲವೇ ಜೈಲುಪಾಲಾದವರು, ಕೇಸು-ಗೀಸು ಮಾಡಿಕೊಂಡವರು. ಅವರು ಬಿಗ್ಬಾಸ್ನಿಂದ ಹೊರಕ್ಕೆ ಬಂದ ಮೇಲೆ ಸ್ಟಾರ್ ಆಗ್ತಿರೋದು, ಬೇರೆ ಬೇರೆ ಷೋಗಳಿಗೆ ಆಫರ್ ಬರ್ತಿರೋದು, ಅಲ್ಲಿಯೂ ತಾವು ತುಂಬಾ ಒಳ್ಳೆಯ ವ್ಯಕ್ತಿಯ ರೀತಿ ಪೋಸ್ ಕೊಟ್ಟು ಮರಳು ಮಾಡ್ತಿರೋದು ವೀಕ್ಷಕರಿಗೆ ಗೊತ್ತಿರೋದೆ. ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಕಮೆಂಟ್ಗಳಿಂದಲೇ ಅವರ ವ್ಯಕ್ತಿತ್ವವನ್ನೂ ಜನರು ಅಳೆಯುತ್ತಿದ್ದಾರೆ.