ಚಂದನ್ ಶೆಟ್ಟಿ ಜೊತೆಗಿನ ವಿಚ್ಛೇದನದ ನಂತರ, ನಿವೇದಿತಾ ಗೌಡ ತಮ್ಮ ಸ್ನೇಹಿತೆ ವಾಣಿ ಜೊತೆ ರೀಲ್ಸ್ ಮಾಡುತ್ತಿದ್ದು, ಇದು ಚರ್ಚೆಗೆ ಕಾರಣವಾಗಿದೆ. ಮದುವೆ, ಮಕ್ಕಳು ಬೇಡ ಎನ್ನುವ ಅರ್ಥದ ಇತ್ತೀಚಿನ ರೀಲ್ಸ್‌ನಿಂದಾಗಿ ಚಂದನ್ ಅಭಿಮಾನಿಗಳು ನಿವೇದಿತಾ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಚಂದನ್ ಶೆಟ್ಟಿ (Chandan Shetty) ಜೊತೆ ಡಿವೋರ್ಸ್ ಬಳಿಕ ಒಂಟಿಯಾಗಿ ರೀಲ್ಸ್ ಮಾಡುತ್ತಿರೋ ನಿವೇದಿತಾ ಗೌಡ ಆಗಾಗ್ಗೆ ತಮ್ಮ ನಿಗೂಢ ಸ್ನೇಹಿತೆ ಜೊತೆ ಕಾಣಿಸಿಕೊಳ್ಳುತ್ತಾರೆ. ನಿವೇದಿತಾರಂತೆಯೇ ಆಕೆಯ ಸ್ನೇಹಿತೆ ಕೂಡ ಅದೇ ರೀತಿಯ ಡ್ರೆಸ್ನಲ್ಲಿಯೇ ಕಾಣಿಸಿಕೊಂಡು ನೆಟ್ಟಿಗರ ಬಾಯಿಗೆ ಆಹಾರ ಆಗುತ್ತಿದೆ. ಹಲವು ರೀಲ್ಸ್ಗಳಲ್ಲಿ ಇಬ್ಬರೂ ಸುಖಾಸುಮ್ಮನೆ ಜೋರಾಗಿ ನಕ್ಕಿದ್ದು ಬಿಟ್ಟರೆ ಇನ್ನೇನೂ ಇರುವುದಿಲ್ಲ. ಆದರೆ ಪ್ರತಿಬಾರಿ ಇವರ ಈ ಹೊಸ ಗೆಳತಿಯ ಬಗ್ಗೆ ಫ್ಯಾನ್ಸ್ ತಲೆಕೆಡಿಸಿಕೊಳ್ಳುತ್ತಲೇ ಇರುತ್ತಾರೆ.
26
ಪ್ರಪೋಸ್ ಮಾಡಿದ್ದ ನಿವೇದಿತಾ
ಅವರ ಹೆಸರು ವಾಣಿ ಜಿ.ಎಸ್ ಎಂದು. ಅವರು ಕೂಡ ಸೋಷಿಯಲ್ ಮೀಡಿಯಾದಲ್ಲಿ ಸಕ್ರಿಯರಾಗಿದ್ದು, ಅವರು ಇನ್ಸ್ಟಾಗ್ರಾಮ್ನಲ್ಲಿ ಇದಾಗಲೇ ಹಲವಾರು ರೀಲ್ಸ್ ಮಾಡಿ ಶೇರ್ ಮಾಡಿದ್ದಾರೆ. ಇದೀಗ ಅವರು ನಿವೇದಿತಾ ಜೊತೆ ರೀಲ್ಸ್ ಮಾಡುವುದು ಹೆಚ್ಚಾಗುತ್ತಿದೆ. ಈ ಹಿಂದೆ, ನಿವೇದಿತಾ ಗೌಡ (Niveditha Gowda) ವಾಣಿ ಅವರಿಗೆ ಹೂವು ಕೊಟ್ಟು ಪ್ರಪೋಸ್ ಮಾಡಿದ್ದರು. ಶೀರ್ಷಿಕೆಯಲ್ಲಿ ಇಡೀ ಜಗತ್ತಿನಲ್ಲಿ ನನ್ನ ಆತ್ಮೀಯ ಗೆಳೆತಿಗೆ ಹುಟ್ಟುಹಬ್ಬದ ಶುಭಾಶಯಗಳು.... ನೀನು ತುಂಬಾ ಸುಂದರವಾಗಿದ್ದೀಯ, ಆದರೆ ಅದೇ ಸಮಯದಲ್ಲಿ ತುಂಬಾ ಮೂರ್ಖನಾಗಿದ್ದೀಯ... ನಿನ್ನೊಂದಿಗೆ ನಾನು ಯಾವಾಗಲೂ ನಗುತ್ತಿದ್ದೇನೆ... ನೀನು ನನ್ನ ಹೆಂಡತಿಯಂತೆ... ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದಿದ್ದರು.
36
ವಿವಿಧ ವೇಷದಲ್ಲಿ ಸ್ನೇಹಿತೆಯರು
ಅಂದಿನಿಂದ ಇವರಿಬ್ಬರನ್ನು ವಿವಿಧ ವೇಷಗಳಲ್ಲಿ ನೋಡಿದಾಗ ನೆಟ್ಟಿಗರು ಸುಮ್ಮನೇ ಕುಳಿತುಕೊಳ್ಳುವುದಿಲ್ಲ. ನಿವೇದಿತಾ ದೂರ ಹೋದರೆ, ತಾವು ಹೇಗೆ ಆಕೆಯನ್ನು ಮಿಸ್ ಮಾಡಿಕೊಳ್ಳುತ್ತೇವೆ ಎಂದು ವಾಣಿ ಕಣ್ಣೀರಿನ ಮೂಲಕ ಹಿಂದೊಮ್ಮೆ ತಿಳಿಸಿದ್ದರು. ತಾವಿಬ್ಬರೂ ಅಷ್ಟು ಫ್ರೆಂಡ್ಸ್ ಎಂದು ಅವರು ಹೇಳಿದ್ದು ಅಷ್ಟೇ. ಆದರೆ ಅಪಾರ್ಥ ಮಾಡಿಕೊಳ್ಳುವವರಿಗೆ, ಟ್ರೋಲಿಗರಿಗೆ ಇಷ್ಟೇ ಸಾಕಲ್ವೆ?
ಆದರೆ ಇದೀಗ ಇದೇ ವಾಣಿ ಅವರ ಜೊತೆ ನಿವ್ವಿನ ಇಂಗ್ಲಿಷ್ ರ್ಯಾಪ್ ಒಂದಕ್ಕೆ ಹೆಜ್ಜೆ ಹಾಕಿದ್ದಾರೆ. ಅದರ ಅರ್ಥ ನಮಗೆ ಮದುವೆಯೂ ಬೇಡ, ಮಕ್ಕಳೂ ಬೇಡ, ಸಿಂಗಲ್ ಆಗಿ ಇರುತ್ತೇವೆ ಎನ್ನುವುದು. ಇದನ್ನು ನೋಡಿ ಚಂದನ್ ಶೆಟ್ಟಿ (Chandan Shetty) ನೆನಪು ಮಾಡಿಕೊಂಡಿದ್ದಾರೆ ಕೆಲವರು. ಮೊದಲೇ ಗೊತ್ತಿದ್ದರೆ, ಅವರ ಲೈಫ್ ಯಾಕೆ ಹಾಳು ಮಾಡ್ದಿ. ಇವಳ ಜೊತೆನೇ ಕುಣಿದುಕೊಂಡು ಇರಬಹುದಿತ್ತಲ್ಲ ಎಂದು ಹೇಳುತ್ತಿದ್ದಾರೆ.
56
ನೆಗೆಟಿವ್ ಕಮೆಂಟ್ಸ್ ಸುರಿಮಳೆ
ಅಷ್ಟಕ್ಕೂ, ವಿಚ್ಛೇದನದ ಬಳಿಕ, ನಿವೇದಿತಾ ಮೇಲೆ ಕೋಪ ಮಾಡಿಕೊಳ್ಳುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಲೇ ಇದೆ. ಪತಿ ಚಂದನ್ ಶೆಟ್ಟಿ ಅವರಿಂದ ನಿವೇದಿತಾ ವಿಚ್ಛೇದನ ಪಡೆದ ಮೇಲೆ ಬಹುತೇಕ ಎಲ್ಲರೂ ನಿವೇದಿತಾ ಅವರನ್ನೇ ದೂರುತ್ತಿದ್ದಾರೆ. ಚಂದನ್ ಶೆಟ್ಟಿ ತುಂಬಾ ಒಳ್ಳೆಯವರು, ಅವರ ಜೀವನ ಹಾಳು ಮಾಡಿಬಿಟ್ಟೆ ಎಂದೆಲ್ಲಾ ಸೋಷಿಯಲ್ ಮೀಡಿಯಾದಲ್ಲಿ ಬೈಗುಳಗಳ ಸುರಿಮಳೆಯಾಗುತ್ತಲೇ ಇದೆ.
66
ನಿವೇದಿತಾ ವಿರುದ್ಧ ಮಾತು
ಇವರಿಬ್ಬರೂ ಪರಸ್ಪರ ಒಪ್ಪಿಗೆಯಿಂದ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದು ನಿಜವಾದರೂ ಅದರಲ್ಲಿ ನಿವೇದಿತಾ ಅವರದ್ದೇ ತಪ್ಪಿದೆ ಎನ್ನುವುದು ಚಂದನ್ ಶೆಟ್ಟಿ ಅಭಿಮಾನಿಗಳ ಮಾತು. ಇದೇ ಕಾರಣಕ್ಕೆ, ನಿವೇದಿತಾ ಅವರ ವಿಡಿಯೋ ಕಂಡಾಗಲೆಲ್ಲಾ ಅವರ ವಿರುದ್ಧ ಕಮೆಂಟ್ಗಳೇ ಹರಿದಾಡುತ್ತಿವೆ.