BBK 12: ಕಾವ್ಯ ಶೈವ ಮನಸ್ಸಿಗೆ ಘಾಸಿ ಮಾಡಿದ ಗಿಲ್ಲಿ ನಟ; ಇದು ಬೇಕು ಅಂತ ಮಾಡ್ತಿರೋ ಕೆಲಸವೇ?

Published : Nov 19, 2025, 03:33 PM IST

Bigg Boss Kannada Season 12 Updates: ಬಿಗ್‌ ಬಾಸ್‌ ಮನೆಯಲ್ಲಿ ಕಾವ್ಯ ಶೈವ ಹಾಗೂ ಗಿಲ್ಲಿ ನಟ ನಡುವೆ ಆಗಾಗ ಜಗಳ ಆಗುತ್ತಿರುತ್ತದೆ, ಇವರಿಬ್ಬರು ಸ್ನೇಹಿತರು, ಆಗಾಗ ಪರಸ್ಪರ ಕಾಲೆಳೆದುಕೊಂಡು ಮಾತನಾಡುತ್ತಿರುತಾರೆ. ಈಗ ಇವರ ಜಗಳ ಮತ್ತೆ ಶುರುವಾಗಿದೆ.

PREV
15
ಕಾವ್ಯಗೆ ಬೇಸರ ಬಂದಿದೆ

ಈ ಹಿಂದೆ ಕಾವ್ಯ ಶೈವ ನೋಡಿದರೆ ವಾಂತಿ ಬರುತ್ತದೆ ಎಂದು ಗಿಲ್ಲಿ ನಟ ಹೇಳಿದ್ದರು. ಇದು ಕಾವ್ಯಗೆ ಬೇಸರ ಬಂದಿತ್ತು. ಆಮೇಲೆ ಒಂದಿಷ್ಟು ಮಾತುಗಳ ಬಳಿಕ ಇವರಿಬ್ಬರು ಸರಿ ಹೋಗಿದ್ದರು. 

25
ತಪ್ಪು ತಿದ್ದುವ ಪ್ರಯತ್ನ ಮಾಡಿದ್ದರು

ಗಿಲ್ಲಿ ನಟನ ಕಾಮಿಡಿ, ಆಟದ ವೈಖರಿ ಬಗ್ಗೆ ಕಾವ್ಯ ಶೈವ ಅವರು ಸಾಕಷ್ಟು ಬಾರಿ ಮಾತನಾಡಿದ್ದಾರೆ, ತಪ್ಪು ಮಾಡಿದಾಗ ತಿದ್ದುವ ಪ್ರಯತ್ನವನ್ನು ಕೂಡ ಮಾಡಿದ್ದರು. ಈಗ ಗಿಲ್ಲಿ ಕಾಮಿಡಿ ಕಾವ್ಯಗೆ ಸಿಟ್ಟು ತರಿಸಿದೆ.

35
ನೀನು ಮಾಡಿದ್ದು ಸರಿನಾ?

“ನಮ್ಮ ಟೀಂನಲ್ಲಿ ಒಬ್ಬರು ಮೊಂಡು, ತುಂಡು ಎಂದು ಹೇಳಿದಾಗ ಹೊರಗಡೆಯವರು ಕೂಡ ಹೀಗೆ ಅಂದುಕೊಳ್ತಾರೆ. ನೀನು ಮಾಡಿದ್ದು ಸರಿನಾ? ನೀನು ಮಾಡಿದ್ದಕ್ಕೆ ಬೇಸರ ಆಗಿಲ್ವಾ?” ಎಂದು ಕಾವ್ಯ ಶೈವ ಅವರು ಗಿಲ್ಲಿ ನಟನಿಗೆ ಪ್ರಶ್ನೆ ಮಾಡಿದ್ದಾರೆ.

45
ಎಲ್ಲರೂ ನಗುತ್ತಿದ್ದರು

“ಅಲ್ಲಿ ಮಾತನಾಡುವಾಗ ನೀನು ನಗುತ್ತಿದ್ದೆ, ಎಲ್ಲರೂ ನಗುತ್ತಿದ್ದರು” ಎಂದು ಗಿಲ್ಲಿ ಹೇಳಿದ್ದಾರೆ. ಕಾವ್ಯ ಮಾತ್ರ ಸಿಟ್ಟಿನಿಂದ ಹೊರಗಡೆ ಹೋಗಿದ್ದಾರೆ. ಒಟ್ಟಿನಲ್ಲಿ ಈ ಬಗ್ಗೆ ಮಾತುಕತೆ ನಡೆದಿದೆ.

55
ಕಾವ್ಯ ವಿರೋಧವೂ ಇದೆ

ಸಾಕಷ್ಟು ಬಾರಿ ಗಿಲ್ಲಿ ಮಾತಿನಿಂದ ಕಾವ್ಯಗೆ ಬೇಸರ ಆಗಿತ್ತು. ಆಮೇಲೆ ಇದನ್ನು ಕಾವ್ಯ ವಿರೋಧ ಮಾಡಿದ್ದೂ ಇದೆ. ಒಟ್ಟಿನಲ್ಲಿ ಇವರಿಬ್ಬರ ಸ್ನೇಹ ಏನಾಗಲಿದೆಯೋ ಏನೋ, ಕಾದು ನೋಡಬೇಕಿದೆ.

Read more Photos on
click me!

Recommended Stories