Published : Nov 04, 2025, 10:12 AM ISTUpdated : Nov 04, 2025, 10:25 AM IST
Bigg Boss Kannada Season 12: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಿಂದ ಅಶ್ವಿನಿ ಗೌಡ ಹೊರಬಂದ್ರು, ಸೂಟ್‌ಕೇಸ್ ತಗೊಂಡು ಹೊರಗಡೆ ಹೋದರು ಎಂದೆಲ್ಲ ಹೇಳಲಾಗುತ್ತಿದೆ. ಆದರೆ ಇದರ ಹಿಂದಿನ ಸತ್ಯ ಬೇರೆಯೇ ಇದೆ. ಹಾಗಾದರೆ ನಿಜಾಂಶ ಏನು? ನಿಜಕ್ಕೂ ಏನಾಯ್ತು?
ಈ ವಾರ ಫಿಸಿಕಲ್ ಟಾಸ್ಕ್‌ಗಳೇ ಇರೋದಿಲ್ಲ, ಸಂಪೂರ್ಣವಾಗಿ ವ್ಯಕ್ತಿತ್ವದ ಆಟ ಇರಲಿದೆ, ನಾನು ಇಡೀ ಮನೆಯನ್ನು ನಾಮಿನೇಟ್ ಮಾಡ್ತೀನಿ. ಯಾರು ಹೇಗೆ ಆಟ ಆಡ್ತೀರಿ ಅಂತ ನಾನು ನೋಡುವೆ ಎಂದು ಕಿಚ್ಚ ಸುದೀಪ್ ಅವರು ಹೇಳಿದ್ದರು. ಅದರಂತೆ ಈ ಬಾರಿ ವ್ಯಕ್ತಿತ್ವದ ಮೇಲೆ ಆಟ ಶುರುವಾಗಿದೆ.
27
ನಿಜಕ್ಕೂ ಏನು ನಡೆಯಿತು?
ಇನ್ನೊಂದು ಕಡೆ ಟಿವಿಯಲ್ಲಿ ಪ್ರಸಾರ ಮಾಡುವಾಗ ಮುಂದಿನ ಭಾಗದಲ್ಲಿ ಎಂದು ತೋರಿಸಿದ ಪ್ರೋಮೋದಲ್ಲಿ ಅಶ್ವಿನಿ ಗೌಡ ಅವರು ಸೂಟ್‌ಕೇಸ್ ತಗೊಂಡು ಹೊರಗಡೆ ಬಂದಿರೋದನ್ನು ತೋರಿಸಲಾಗಿದೆ.
ಅಂದಹಾಗೆ ಎಲ್ಲರೂ ಸೂಟ್‌ಕೇಸ್ ಪ್ಯಾಕ್ ಮಾಡ್ಕೊಂಡು ಗಾರ್ಡನ್ ಏರಿಯಾದಲ್ಲಿ ನಿಂತಿದ್ದರು, ಆ ವೇಳೆ ಬಿಗ್ ಬಾಸ್ ಎಲಿಮಿನೇಶನ್ ಎಂದಿದ್ದಾರೆ. ಕೊನೆಗೂ ಅಶ್ವಿನಿ ಗೌಡ ಎಲಿಮಿನೇಟ್ ಆಗಿದ್ದಾರೆ ಎಂದು ಘೋಷಿಸಿದ್ದು ಅವರು ಹೊರಗಡೆ ಬಂದಿದ್ದಾರೆ. ಗೇಟ್ ಕೂಡ ಒಪನ್ ಆಗಿದೆ.
37
ಸೀಕ್ರೇಟ್ ರೂಮ್ ವೀಕ್ಷಕರಿಗೆ ಕಾಣಿಸಿಲ್ಲ
ಬಿಗ್ ಬಾಸ್ ಕನ್ನಡ ಶೋನಲ್ಲಿ ಕೆಲ ಸೀಸನ್‌ಗಳಿಂದ ಸೀಕ್ರೇಟ್ ರೂಮ್ ಕಾನ್ಸೆಪ್ಟ್ ಇಲ್ಲದಂತಾಗಿದೆ. ಆರಂಭಿಕ ಬಿಗ್ ಬಾಸ್ ಸೀಸನ್‌ಗಳಲ್ಲಿ ಸೀಕೇಟ್ ರೂಮ್ ಇತ್ತು. ಈ ಬಾರಿ ರಕ್ಷಿತಾ ಶೆಟ್ಟಿ ಅವರನ್ನು ಸೀಕ್ರೇಟ್ ರೂಮ್ ಇಡಲಾಗಿತ್ತು ಎನ್ನಲಾಗಿದೆ.
ಸೀಕ್ರೇಟ್ ರೂಮ್ ಎಂದಾಗ ಅಲ್ಲಿ ಸ್ಪರ್ಧಿಗೆ ಸರಿಯಾದ ಟೈಮ್‌ಗೆ ಊಟ-ತಿಂಡಿ ಕೊಡಬೇಕು, ಮನೆಯೊಳಗಡೆ ಏನಾಗ್ತಿದೆ ಎಂದು ತಿಳಿಸಿಕೊಡಲು ಟಿವಿಯೂ ಇರಬೇಕು. ಸೀಕ್ರೇಟ್ ರೂಮ್‌ನಲ್ಲಿ ಆ ಸ್ಪರ್ಧಿ ಏನು ಮಾಡ್ತಿದ್ದಾರೆ ಎಂದು ವೀಕ್ಷಕರಿಗೆ ಗೊತ್ತಾಗಬೇಕು. ಆದರೆ ರಕ್ಷಿತಾ ಅವರು ಸೀಕ್ರೇಟ್ ರೂಮ್‌ನಲ್ಲಿದ್ದ ಒಂದೂ ವಿಶ್ಯುವಲ್ ವೀಕ್ಷಕರಿಗೆ ಕಾಣಿಸಲೇ ಇಲ್ಲ.
ಅಶ್ವಿನಿ ಗೌಡ ಅವರು ಸೀಕ್ರೇಟ್ ರೂಮ್‌ಗೆ ಹೋಗಿದ್ದರೆ, ಅವರು ಕೂಡ 24/7 ಟಿವಿಯಲ್ಲಿ ಏನಾಗ್ತಿದೆ ಎಂದು ನೋಡಬೇಕಾಗಿ ಬರುವುದು. ಬಿಗ್ ಬಾಸ್ ತಂಡವು ಈ ರೀತಿ ಸೆಟ್‌ಅಪ್ ಸದ್ಯಕ್ಕಂತೂ ಮಾಡಿಲ್ಲ.
ನನ್ನ ಬಗ್ಗೆ ಉಳಿದವರು ಹೇಗೆ ಮಾತಾಡುತ್ತಾರೆ? ನನ್ನ ಬೆನ್ನ ಹಿಂದೆ ಏನು ನಡೆಯುತ್ತಿದೆ ಎಂದು ಸೀಕ್ರೇಟ್ ರೂಮ್‌ಗೆ ಹೋದ ಸ್ಪರ್ಧಿಗೆ ಗೊತ್ತಾಗುವುದು. ಆದರೆ ಇಲ್ಲಿ ಅಶ್ವಿನಿ ಗೌಡ ಅವರಿಗೆ ತಮ್ಮ ಶತ್ರು, ಪ್ರತಿಸ್ಪರ್ಧಿ ಯಾರು ಎನ್ನೋದು ಗೊತ್ತಿದೆ. ಎಲ್ಲರೂ ಮುಖಕ್ಕೆ ಹೊಡೆದಂತೆ ಅಶ್ವಿನಿ ಗೌಡ ವಿರುದ್ಧ ವಾದ ಮಾಡಿದ್ದಾಗಿದೆ, ಉತ್ತರ ಕೊಟ್ಟಿದ್ದೂ ಆಗಿದೆ. 25 ವರ್ಷದ ರಕ್ಷಿತಾ ಶೆಟ್ಟಿಯೇ ಅಶ್ವಿನಿ ವಿರುದ್ಧ ಮಾತನಾಡಿದಾಗ, ಉಳಿದವರು ಸುಮ್ಮನಿರುತ್ತಾರಾ?
57
ಸೀಕ್ರೇಟ್ ರೂಮ್‌ಗೆ ಹೋದರೂ ಪ್ರಯೋಜನವಿಲ್ಲ
ಅಶ್ವಿನಿ ಗೌಡ ಅವರನ್ನು ಸೀಕ್ರೇಟ್ ರೂಮ್‌ಗೆ ಕಳಿಸಿ ಪ್ರಯೋಜನ ಇಲ್ಲದಂತಾಗುವುದು. ದೊಡ್ಮನೆಯಲ್ಲಿ ಮೊದಲ ವಾರದಿಂದಲೇ ಸೌಂಡ್ ಮಾಡಿದ್ದ, ಅಶ್ವಿನಿಯೇ ಹೊರಗಡೆ ಹೋದರು ಅಂದ್ರೆ ನಾವೆಲ್ಲ ಯಾವ ಲೆಕ್ಕ? ನಾವು ಮಾತನಾಡಿದ್ರೆ ತಪ್ಪಾಗುತ್ತದೆ ಎಂದು ಉಳಿದ ಸ್ಪರ್ಧಿಗಳು ಅಂದುಕೊಂಡು ಹಿಂದುಳಿದರೆ ಅಥವಾ ಸೈಲೆಂಟ್ ಆದರೂ ಆಶ್ಚರ್ಯವಿಲ್ಲ. ಹೀಗಾಗಿ ಅವರು ಸೀಕ್ರೇಟ್ ರೂಮ್‌ಗೆ ಹೋಗಿಲ್ಲ.
67
ಇಂದಿನ ಪ್ರೋಮೋ ನೋಡಿದ್ರಾ?
ಇಂದು ಬೆಳಗ್ಗೆ ರಿಲೀಸ್ ಆದ ಪ್ರೋಮೋದಲ್ಲಿ ಅಶ್ವಿನಿ ಗೌಡ ಕೂಡ ಇದ್ದಾರೆ. ಮುಂದಿನ ಭಾಗದಲ್ಲಿ ಎಂದು ತೋರಿಸಲಾದ ನಿನ್ನೆ ರಾತ್ರಿಯ ಪ್ರೋಮೋದಲ್ಲಿ ಮುಖಕ್ಕೆ ಮಸಿ ಬಳಿದಿದ್ದರಿಂದ ಅಶ್ವಿನಿ ಗೌಡ ಸೇರಿದಂತೆ ಕೆಲವರು ಡ್ರೆಸ್ ಬದಲಾಯಿಸಿದ್ದಾರೆ. ಆದರೆ ತನಗೆ ಯಾರೂ ಮಸಿ ಬಳಿಯದ ಕಾರಣ ರಾಶಿಕಾ ಶೆಟ್ಟಿ ಅವರು ಹಳೆಯ ಡ್ರೆಸ್ ಹಾಕಿಕೊಂಡಿದ್ದರು.
ಬೆಳಗ್ಗೆ ಕೂಡ ಅಶ್ವಿನಿ ಗೌಡ ಅವರು ಬೇರೆ ಡ್ರೆಸ್ ಹಾಕಿದ್ದಾರೆ. ಅಂದರೆ ರಾತ್ರಿ ಅಶ್ವಿನಿ ಗೌಡ ಮನೆಯಲ್ಲಿ ಇದ್ದಾರೆ, ಬೆಳಗ್ಗೆಯೂ ಅವರು ಬಿಗ್ ಬಾಸ್ ಮನೆಯಲ್ಲಿ ಇದ್ದಾರೆ. ರಾಶಿಕಾ ಸೇರಿದಂತೆ ಉಳಿದವರು ಸೀರೆ ಉಟ್ಟಿದ್ದರು, ಗ್ರ್ಯಾಂಡ್ ಬಟ್ಟೆ ಹಾಕಿದ್ದರು. ಹೀಗಾಗಿ ಅವರು ಹೊರಗಡೆ ಹೋಗಿರೋದು 100 ಸುಳ್ಳು, ಇದು ಸ್ಪರ್ಧಿಗಳಿಗೆ ಕೊಟ್ಟ ಛಮಕ್ ಅಷ್ಟೇ.
77
ಸೂಟ್‌ಕೇಸ್ ತಗೊಂಡೋದ್ರು
ಎಲಿಮಿನೇಟ್ ಆಗ್ತಾರೆ ಎಂದಾಗ ಎಲಿಮಿನೇಟ್ ಆದವರು ಉಳಿದ ಸ್ಪರ್ಧಿಗಳ ಜೊತೆ ಸೆಲ್ಫಿ ತಗೊಳ್ತಾರೆ. ಅಷ್ಟೇ ಅಲ್ಲದೆ ಸೂಟ್‌ಕೇಸ್‌ನ್ನು ಅವರು ತಗೊಂಡು ಕೂಡ ಹೋಗೋದಿಲ್ಲ. ಸ್ಟೋರ್ ರೂಮ್‌ನಲ್ಲಿ ಸೂಟ್‌ಕೇಸ್ ಇಡಲಾಗುವುದು. ಆದರೆ ಇಲ್ಲಿ ಅಶ್ವಿನಿ ಗೌಡ ಸೂಟ್‌ಕೇಸ್ ತಗೊಂಡು ಹೋಗಿರೋದು ಅನುಮಾನ ಮೂಡಿಸುವುದು.
ಇದು ಬಿಗ್ ಬಾಸ್ ಮನೆಯ ಆಟ. ಒಟ್ಟಿನಲ್ಲಿ ಈ ವಾರವಂತೂ ಫಿಸಿಕಲ್ ಟಾಸ್ಕ್ ಆಟ ಇರೋದಿಲ್ಲ, ಬದಲಾಗಿ ವ್ಯಕ್ತಿತ್ವದ ಸುತ್ತವೇ ಗೇಮ್ ಶುರುವಾಗುತ್ತದೆ. ಇದನ್ನೆ ಅಲ್ವಾ Expect the Unexpected ಎನ್ನೋದು.