ಪ್ಯಾಂಟ್ ಮೇಲೆಯೇ ಕಣ್ಣು! ರಗಡ್ ಅವತಾರದಲ್ಲಿ ಬಿಗ್‌ಬಾಸ್ ವಿನ್ನರ್ ಕಾರ್ತಿಕ್ ಮಹೇಶ್

Published : May 24, 2026, 04:26 PM IST

ಬಿಗ್‌ಬಾಸ್‌ ಕನ್ನಡ 10ರ ವಿನ್ನರ್ ಕಾರ್ತಿಕ್ ಮಹೇಶ್ ಇತ್ತೀಚೆಗೆ ಮಾಡಿಸಿದ ಹಾಟ್ ಫೋಟೋಶೂಟ್‌ನಿಂದ ಸುದ್ದಿಯಲ್ಲಿದ್ದಾರೆ. ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಕಪ್ಪು-ಬಿಳುಪಿನ ಶರ್ಟ್‌ಲೆಸ್ ಫೋಟೋಗಳು ವೈರಲ್ ಆಗಿದ್ದು, ಅಭಿಮಾನಿಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

PREV
15
ನಟ ಕಾರ್ತಿಕ್ ಮಹೇಶ್ ಹಾಟ್ ಫೋಟೋಶೂಟ್

ಬಿಗ್‌ಬಾಸ್‌ ಕನ್ನಡ ರಿಯಾಲಿಟಿ ಶೋ ವಿನ್ನರ್ ಆಗಿರುವ ನಟ ಕಾರ್ತಿಕ್ ಮಹೇಶ್ ಹಾಟ್ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಈ ಫೋಟೋ ಮತ್ತು ವಿಡಿಯೋಗಳನ್ನು ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಕಾರ್ತಿಕ್ ಮಹೇಶ್ ಶೇರ್ ಮಾಡಿಕೊಂಡಿದ್ದಾರೆ. ಫೋಟೋಗಳು ವೈರಲ್ ಆಗುತ್ತಿವೆ.

25
ಕಪ್ಪು-ಬಿಳುಪಿನ ಫೋಟೋಗಳಲ್ಲಿ ರಗಡ್ ಲುಕ್

ದೇಹವನ್ನು ಹುರಿ ಮಾಡಿಕೊಂಡಿರುವ ಕಾರ್ತಿಕ್ ಮಹೇಶ್ ಕಪ್ಪು-ಬಿಳುಪಿನ ಫೋಟೋಗಳಲ್ಲಿ ರಗಡ್ ಆಗಿ ಕಾಣಿಸುತ್ತಿದ್ದಾರೆ. ಈ ಫೋಟೋಗಳಿಗೆ ಅಭಿಮಾಗಳು ಹಾರ್ಟ್ ಆಂಡ್ ಫೈಯರ್ ಎಮೋಜಿಗಳನ್ನು ಕಮೆಂಟ್ ಮಾಡುತ್ತಿದ್ದಾರೆ. ಬ್ಯಾಗಿ ಜೀನ್ಸ್ ಹಾಕಿ, ಬಟನ್ ಓಪನ್ ಬಿಟ್ಕೊಂಡು, ಶರ್ಟ್‌ಲೆಸ್ ಆಗಿ ಮಾದಕವಾಗಿ ಫೋಟೋಗಳಿಗೆ ಕಾರ್ತಿಕ್ ಪೋಸ್ ನೀಡಿದ್ದಾರೆ.

35
ಗುರು ಪ್ಯಾಂಟ್‌ ಜಿಪ್ ಹಾಕಿಲ್ಲ

ಕುರ್ಚಿಯಲ್ಲಿ ಕುಳಿತು ತಮ್ಮ ಸ್ನಾಯುಗಳನ್ನು (ಪುಶ್-ಅಪ್ಸ್) ಪ್ರದರ್ಶಿಸಿದ್ದಾರೆ. ಈ ಮೂಲಕ ಪರ್ಫೆಕ್ಟ್ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಕಾರ್ತಿಕ್ ಮಹೇಶ್ ಫೋಟೋಗೆ ನೆಟ್ಟಿಗರೊಬ್ಬರು, ಗುರು ಪ್ಯಾಂಟ್‌ ಜಿಪ್ ಹಾಕಿಲ್ಲ ಎಂದು ಕಮೆಂಟ್ ಮಾಡಿದ್ದಾರೆ. ಫೋಟೋ ಅಪ್ಲೋಡ್ ಮಾಡಿದ ಎರಡೇ ಗಂಟೆಗಳಲ್ಲಿ 14 ಸಾವಿರಕ್ಕೂ ಅಧಿಕ ಲೈಕ್ಸ್ ಬಂದಿವೆ.

45
ನ್ಯಾಷನಲ್ ಅವಾರ್ಡ್ ವಿನ್ನರ್

ನ್ಯಾಷನಲ್ ಅವಾರ್ಡ್ ವಿನ್ನರ್ ಆಗಿರುವ ಕಾರ್ತಿಕ್ ಮಹೇಶ್, ಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 10ರಲ್ಲಿ ಸ್ಪರ್ಧಿಯಾಗಿ ಎಂಟ್ರಿ ಕೊಟ್ಟು ಟ್ರೋಫಿಯನ್ನು ತಮ್ಮದಾಗಿಸಿಕೊಂಡಿದ್ದರು. ಡೊಳ್ಳು ಸಿನಿಮಾದ ನಟನೆಗೆ ಕಾರ್ತಿಕ್‌ ಅವರಿಗೆ ರಾಷ್ಟ್ರ ಪ್ರಶಸ್ತಿ ಬಂದಿತ್ತು. ಇನ್‌ಸ್ಟಾಗ್ರಾಂನಲ್ಲಿ 4 ಲಕ್ಷಕ್ಕೂ ಅಧಿಕ ಫಾಲೋವರ್ಸ್‌ಗಳನ್ನು ಕಾರ್ತಿಕ್ ಮಹೇಶ್ ಹೊಂದಿದ್ದಾರೆ.

55
ಬಣ್ಣದ ಲೋಕದಲ್ಲಿ ಬ್ಯುಸಿಯಾಗಿರುವ ನಟ

ಇಷ್ಟು ಮಾತ್ರವಲ್ಲ ಕಾರ್ತಿಕ್ ಮಹೇಶ್, ಸೀರಿಯಲ್ ಮತ್ತು ಕಿರುಚಿತ್ರಗಳಲ್ಲಿಯೂ ನಟಿಸಿದ್ದಾರೆ. ಇತ್ತೀಚೆಗೆ ಮೋಕ್ಷಪಟಂ ಹೆಸರಿನ ಕಿರುಚಿತ್ರದಲ್ಲಿ ಕಾರ್ತಿಕ್ ನಟಿಸಿದ್ದರು. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರುವ ಕಾರ್ತಿಕ್ ಹೆಸರು ಕಿರುತೆರೆಯ ಖ್ಯಾತಿ ನಟಿ ಜೊತೆ ಥಳಕು ಹಾಕಿಕೊಂಡಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories